ಮಹಿಳೆಯ ಹಿನ್ನಡೆಗೆ ಮಹಿಳೆಯೇ ಕಾರಣ: ಸಂಯುಕ್ತಾ ಬಂಡಿ

| Published : Mar 15 2025, 01:00 AM IST

ಮಹಿಳೆಯ ಹಿನ್ನಡೆಗೆ ಮಹಿಳೆಯೇ ಕಾರಣ: ಸಂಯುಕ್ತಾ ಬಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ಮಹಿಳೆ ಜೀವನದಲ್ಲಿ ಮುನ್ನಡೆ ಸಾಧಿಸಿದ್ದಾಳೆ ಎಂದರೆ ಕೆಲವು ಮಹಿಳೆಯರು ಸಹಿಸಲಾರರು. ಆಕೆಯ ಬಗ್ಗೆ ತೇಜೋವಧೆ ಮಾತುಗಳನ್ನಾಗಿ ಆಕೆಯನ್ನು ಮಾನಸಿಕವಾಗಿ ಕುಗ್ಗಿಸುವದು ಸಲ್ಲದು

ಗದಗ: ಜೀವನದಲ್ಲಿ ನೊಂದ, ತೇಜೋವಧೆಗೆ ಒಳಗಾದ ಮಹಿಳೆಗೆ ಅಭಯ ಹಸ್ತ ನೀಡಿ ಅವಳಲ್ಲಿ ಮನೋಸ್ಥೈರ್ಯ ತುಂಬುವುದೇ ನಿಜವಾದ ಮಹಿಳಾ ಸಬಲೀಕರಣ ಆಗಿದೆ ಎಂದು ಮಹಿಳಾ ನಾಯಕಿ ಸಂಯುಕ್ತಾ ಬಂಡಿ ಹೇಳಿದರು.

ಅವರು ಗುರುವಾರ ನಗರದ ರೋಟರಿ ಐಕೇರ್ ಸೆಂಟರ್‌ದಲ್ಲಿ ಗದಗ ಸಖಿ ಸಹೇಲಿ ಮಹಿಳಾ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಒಬ್ಬ ಮಹಿಳೆ ಜೀವನದಲ್ಲಿ ಮುನ್ನಡೆ ಸಾಧಿಸಿದ್ದಾಳೆ ಎಂದರೆ ಕೆಲವು ಮಹಿಳೆಯರು ಸಹಿಸಲಾರರು. ಆಕೆಯ ಬಗ್ಗೆ ತೇಜೋವಧೆ ಮಾತುಗಳನ್ನಾಗಿ ಆಕೆಯನ್ನು ಮಾನಸಿಕವಾಗಿ ಕುಗ್ಗಿಸುವದು ಸಲ್ಲದು. ಮಹಿಳೆಯ ಹಿನ್ನಡೆಗೆ ಮಹಿಳೆಯೇ ಕಾರಣವಾಗಬಾರದು. ಇಂತಹ ಕ್ಷುಲ್ಲಕ ವಿಚಾರಗಳು ಎಂತಹ ಸೀತಾ ಮಾತೆಯನ್ನೂ ಬಿಟ್ಟಿಲ್ಲ, ಶರಣೆ, ಸಾಧಕ ಮಹಿಳೆಯರನ್ನೂ ಬಿಟ್ಟಿಲ್ಲ. ಇವುಗಳನ್ನೆಲ್ಲ ಮೆಟ್ಟಿ ನಿಂತ ದಿಟ್ಟ ಮಹಿಳೆ ಕುಟುಂಬದಲ್ಲಿ, ಸಮಾಜದಲ್ಲಿ ಸಾಧಕ ಮಹಿಳೆ ಆಗಬಲ್ಲಳು ಎಂದರು.

ಜೀವನದಲ್ಲಿ ಸಾಧಿಸಬೇಕೆಂಬ ದಿಟ್ಟ ಮಹಿಳೆಗೆ ಗುರಿ ತಲುಪಬೇಕೆಂಬ ಉತ್ಕಟ ಇಚ್ಛೆ ಇರಬೇಕಷ್ಟೇ. ಹೇಡಿ ಆಗಬಾರದು ಮಹಿಳೆಯಲ್ಲಿ ಆತ್ಮಬಲ- ಮನೋಬಲವನವನ್ನು ಹೆಚ್ಚಿಸುವುದೇ ನೀಜವಾದ ಮಹಿಳಾ ಸಬಲೀಕರಣ ಆದೀತು ಬರಲಿರುವ ದಿನಗಳಲ್ಲಿ ನಮ್ಮ ಸಾಧಕ ಮಹಿಳೆಯರು ಗುರಿ ತಲುಪಲು ಮಹಿಳಾ ದಿನಾಚರಣೆ ಕೇವಲ ಮಾರ್ಚ ತಿಂಗಳಿಗೆ ಸ್ಥಿಮಿತಗೊಳ್ಳಬಾರದು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಕವಿತಾ ದಂಡಿನ ಮಾತನಾಡಿ, ಮಹಿಳೆಯರು ಸಮಾಜ ಗುರುತಿಸುವ, ಗೌರವಿಸುವ ಕಾರ್ಯ ಮಾಡಬೇಕು. ಯೋಜನೆ ಮತ್ತು ಗುರಿ ಸ್ಪಷ್ಟವಾಗಿದ್ದಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನಡೆಯಿರಿ. ಯಶಸ್ಸು ಸಾಧನೆ ಸಾಕಾರಗೊಳ್ಳುವುದು ಎಂದರು. ಸಖಿ ಸಹೇಲಿ ಮಹಿಳಾ ಸಂಘಟನೆ ಗದಗ ಪರಿಸರದಲ್ಲಿ ಹೊಸ ಛಾಪು ಮೂಡಿಸಲಿ, ನೂತನ ಪದಾಧಿಕಾರಿಗಳು ದಿಟ್ಟತನದಿಂದ ಕಾರ್ಯ ಮಾಡಿ ಮಹಿಳೆಯರಿಗೆ ಧ್ವನಿಯಾಗಲಿ ಎಂದರು.

ಸಖಿ ಸಹೇಲಿಯ ಪ್ರಮುಖರಾದ ಡಾ.ನಯನಾ ಭಸ್ಮೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಸಖಿ ಸಹೇಲಿಯ ಪ್ರಮುಖರಾದ ಜ್ಯೋತಿ ವೆಂಕಟೇಶ, ತಾರಾದೇವಿ ವಾಲಿ ಮತ್ತು ಸುನೀತಾ ಸಿಂತ್ರಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ಭರಮಗೌಡ್ರ ತಮ್ಮ ಅಧಿಕಾರದ ಅವಧಿಯ ಕುರಿತು ಮಾತನಾಡಿದರು. ಜ್ಯೋತಿ ಭರಮಗೌಡರ ಸ್ವಾಗತಿಸಿದರು, ನಿರ್ಮಲಾ ಪಾಟೀಲ ಹಾಗೂ ವಿದ್ಯಾ ಶಿವನಗುತ್ತಿ ಪರಿಚಯಿಸಿದರು. ಕಾವ್ಯಾ ದಂಡಿನ ನಿರೂಪಿಸಿದರು. ಪ್ರಿಯಾಂಕಾ ಹಳ್ಳಿ ವಂದಿಸಿದರು.

ಅಶ್ವಿನಿ ಮಾದಗುಂಡಿ, ಸಾಗರಿಕಾ ಅಕ್ಕಿ, ಶ್ರೀದೇವಿ ಮಹೇಂದ್ರಕರ, ಅನುರಾಧಾ ಬಸವಾ, ಸವಿತಾ ಭರಮಗೌಡರ, ಅನುರಾಧಾ ಅಮಾತಿಗೌಡರ, ಮಂಜುಳಾ ಹಪಗತ್ತಿ, ಚಂದ್ರಕಲಾ ಸ್ಥಾವರಮಠ, ಸುಗ್ಗಲಾ ಯಳಮಲಿ, ಮಧು ಕರಬಿಷ್ಠಿ, ಜಯಶ್ರೀ ಉಗಲಾಟದ, ಸುವರ್ಣಾ ಮದರಿಮಠ, ಜ್ಯೋತಿ ದಾನಪ್ಪಗೌಡರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.