ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಸದಸ್ಯರಾಗಿ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಸಾಧ್ಯ: ಬಿ.ಎಮ್ ಭಾರತಿ

| Published : Jan 19 2025, 02:15 AM IST

ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಸದಸ್ಯರಾಗಿ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಸಾಧ್ಯ: ಬಿ.ಎಮ್ ಭಾರತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ಮಹಿಳೆಯರು ಸಹ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ನಲ್ಲಿ ಸದಸ್ಯರಾಗಿ ಸ್ವಾವಲಂಬನೆ ಸಾಧಿಸಬಹುದು ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಬಿ.ಎಮ್ ಭಾರತಿ ಹೇಳಿದರು.

- ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟನೆ.

ಕನ್ನಡಪ್ರಭ ವಾರ್ತೆ, ಅಜ್ಜಂಪುರಮಹಿಳೆಯರು ಸಹ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ನಲ್ಲಿ ಸದಸ್ಯರಾಗಿ ಸ್ವಾವಲಂಬನೆ ಸಾಧಿಸಬಹುದು ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಬಿ.ಎಮ್ ಭಾರತಿ ಹೇಳಿದರು.

ಅಜ್ಜಂಪುರ ಬೃಂದಾವನ ಕನ್ ವೆನ್ಷನ್ ಹಾಲ್ ನಲ್ಲಿ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ದುಡಿಮೆ ಸ್ವಲ್ಪ ಹಣ ಬಡವರ ಕೆಲಸಕ್ಕೆ ನೆರವಾಗುವುದು. ಜನೋಪಕಾರಿ ಕಾರ್ಯ ಗಳನ್ನು ಮಾಡುವುದರಿಂದ ಹೊರದೇಶಗಳಲ್ಲಿ ನಾವು ಗುರುತಿಸಲ್ಪಡುತ್ತೇವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ. ಎಸ್ . ರಾಜು ಮಾತನಾಡಿ ಯಾವುದೇ ಸಮಾಜದಲ್ಲಿ ಸಮಯಕ್ಕೆ ಮಹತ್ವ ಕೊಡಬೇಕು. ಆಗ ಮಾತ್ರ ಸಂಘ ಸಂಸ್ಥೆಗಳು ಪ್ರಸಿದ್ಧಿಗೆ ಬರುತ್ತವೆ. ಜನರು ಸುಮ್ಮನೆ ಕಾಲಹರಣ ಮಾಡುತ್ತಾರೆ. ಆದರೆ ಸಾಮಾಜಿಕ ಸೇವೆಗೆ ಬರೋದು ಕಡಿಮೆ ಎಂದು ವಿಷಾದ ವ್ಯಕ್ತಪಡಿಸಿದರು. ನಿಮಗೆ ನಾನು ಎಲ್ಲಾ ರೀತಿಯ ಸಹಕಾರ ನೀಡಿತ್ತೇನೆ ಎಂದು ಹೇಳಿದರು. ಮಾಜಿ ಶಾಸಕ ಡಿ. ಎಸ್. ಸುರೇಶ್ ಮಾತನಾಡಿ ರಾಜಕಾರಣ ಮಾಡುವ ಬದಲು ಇಂತಹ ಸಂಘದಲ್ಲಿ ಸೇರಿದ್ದರೆ ಎಷ್ಟು ಎತ್ತರಕ್ಕೆ ಬೆಳೆಯಬಹುದಿತ್ತು ಎಂದರು. ಲಯನ್ಸ್ ಕ್ಲಬ್ ಅಜ್ಜಂಪುರದಲ್ಲಿ ಎತ್ತರಕ್ಕೆ ಬೆಳೆದು ಹೆಸರು ಮಾಡಲಿ ಶುಭ ಕೋರಿದರು. ಲಯನ್ಸ್ ಕ್ಲಬ್ ಮಾಜಿ ಗೌರ್ನರ್ ಎಚ್. ಆರ್. ಹರೀಶ್ ನೂತನ ಪದಾಧಿಕಾರಿಗಳಿಗೆ ಲಯನ್ಸ್ ಕ್ಲಬ್ ವಿಧಿ ವಿಧಾನ ಭೋದಿಸಿದರು.ತರೀಕೆರೆ ಶಾಸಕ ಶ್ರೀನಿವಾಸ ಮಾತನಾಡಿ ಲಯನ್ಸ್ ಕ್ಲಬ್ ಅಜ್ಜಂಪುರದಲ್ಲಿ ಪ್ರಾರಂಭ ಮಾಡಿದ್ದು ಒಳ್ಳೆಯ ಬೆಳವಣಿಗೆ ಈ ಸಂಸ್ಥೆಯಿಂದ ಆರೋಗ್ಯ ಸೇವೆ, ಶಾಲೆಗಳಿಗೆ ಪೀಠೋಪಕರಣ ಕೊಡುವ ಮೂಲಕ ಬಡವರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿ ಎಂದು ತಿಳಿಸಿದರು. ನೂತನ ಅಧ್ಯಕ್ಷ ಜಿ. ಎಂ. ಪ್ರಕಾಶ್ ನಾವು ಪ್ರಥಮವಾಗಿ ಲಯನ್ಸ್ ಕ್ಲಬ್ ನಿಂದ ಅಜ್ಜಂಪುರದ ಶಿವಾನಂದ ಆಶ್ರಮ ಜೀರ್ಣೋದ್ದಾರ ಮಾಡುತ್ತೇವೆ. ಇಲ್ಲಿ ಯಾವುದೇ ರಾಜಕೀಯ ಗಾಳಿ ಸುಳಿಯಲು ಬಿಡುವುದಿಲ್ಲ. ಪ್ರಾರಂಭಿಕ ಕೊಡುಗೆಯಾಗಿ ಕಾಟಿಗನೆರೆ ಬಡ ವಿದ್ಯಾರ್ಥಿಗೆ ಆರ್ಥಿಕ ನೆರವು, ಮತ್ತು ಆಹಾರದ ಕಿಟ್ಟನ್ನು ನೀಡಲಾಯಿತು.

ತರಿಕೆರೆ ತಾಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಎ. ಎಸ್. ಸಾಹಿಕುಮಾರ್ ಇತರರು ಇದ್ದರು.