ಸಾರಾಂಶ
ತರೀಕೆರೆ, ಮನೆಯಲ್ಲಿಯೇ ಬೆಳೆಯಬಹುದಾದ ಅಣಬೆ ಬೇಸಾಯವನ್ನುಮಹಿಳೆಯರು ಅಳವಡಿಸಿಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಅಣಬೆ ಬೇಸಾಯಗಾರ ಮೋಹನ್ ಹೇಳಿದ್ದಾರೆ.
ಅಣಬೆ ಕೃಷಿ ಬಗ್ಗೆ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮನೆಯಲ್ಲಿಯೇ ಬೆಳೆಯಬಹುದಾದ ಅಣಬೆ ಬೇಸಾಯವನ್ನುಮಹಿಳೆಯರು ಅಳವಡಿಸಿಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಅಣಬೆ ಬೇಸಾಯಗಾರ ಮೋಹನ್ ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ತರೀಕೆರೆಯಿಂದ ಪುರಸಭೆ ಕಾರ್ಯಕ್ಷೇತ್ರದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಕೃಷಿ ಸ್ವ ಉದ್ಯೋಗ ಕಾರ್ಯಕ್ರಮ ಅಂಗವಾಗಿ ಅಣಬೆ ಕೃಷಿ ಬಗ್ಗೆ ನಡೆದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಣಬೆ ಒಂದು ಆರೋಗ್ಯಕರ ಆಹಾರವಾಗಿದ್ದು ಅದು ಮಗುವಿನಿಂದ ಹಿಡಿದು ವಯಸ್ಕರಿಗೂ ಸೂಕ್ತವಾಗಿದೆ. ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಅಣಬೆ ಬೇಸಾಯ ಕೈಗೊಳ್ಳುವವರು ಮಂದ ಬೆಳಕಿರುವ ಪ್ರದೇಶ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ತಲಾ ಐದು ಕೆ.ಜಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಅಣಬೆ ಬೆಳೆಯಲು ಕನಿಷ್ಠ 3 ಕೆಜಿ ಭತ್ತದ ಹುಲ್ಲು ಹಾಕಿ ಅಣಬೆ ಬೆಳೆಯಬಹುದಾಗಿದೆ ಎಂದು ವಿವರಿಸಿದರು.ಬಿಡುವಿನ ವೇಳೆಯಲ್ಲೂ ದಿನಕ್ಕೆ ಸಾವಿರ ವರೆಗೆ ಸಂಪಾದಿಸಬಹುದಾಗಿದೆ. ಅಣಬೆಯ ವಿವಿಧ ಮೌಲ್ಯವರ್ಧಿತ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ವಾಣಿಜ್ಯ ಉದ್ದೇಶದಿಂದ ಅಣಬೆ ಬೇಸಾಯ ಮಾಡುವುದರಿಂದ ಆಗುವ ಆರ್ಥಿಕ ಆದಾಯಗಳ ಬಗ್ಗೆ ತಿಳಿಸಿ ಅಣಬೆ ಕೃಷಿ ಬ್ಯಾಗ್ ತಯಾರಿ ಬಗ್ಗೆ ಸದಸ್ಯರಿಗೆ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮ ನಡೆಸಿ ಎಂದು ಮಾಹಿತಿ ನೀಡಿದರು.ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್ ಮಾತನಾಡಿ ತಾಲೂಕಿನ ಕೃಷಿ ಕಾರ್ಯಕ್ರಮ ಮತ್ತು ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಸಲ್ಮ ಪರ್ವೀನ್ ಕಾರ್ಯಕ್ರಮ ಉದ್ಘಾಟಿಸಿದರು. ವಲಯದ ಮೇಲ್ವಿಚಾರಕರು ಸಿದ್ದಯ್ಯ,ಸೇವಾಪ್ರತಿನಿಧಿ ವಿದ್ಯಾ, ವನಜಾಕ್ಷಿ ಸಂಘದ ಸದಸ್ಯರು, ರೈತರು ಉಪಸ್ಥಿತರಿದ್ದರು.28ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನಿಂದ ಅಣಬೆ ಕೃಷಿ ಬಗ್ಗೆ ನೆಡೆದ ಕಾರ್ಯ ಕ್ರಮದ ಉದ್ಘಾಟನೆಯನ್ನು ಒಕ್ಕೂಟ ಅಧ್ಯಕ್ಷೆ ಸಲ್ಮ ಪರ್ವೀನ್ ನೆರವೇರಿಸಿದರು. ಅಣಬೆ ಬೇಸಾಯಗಾರ ಮೋಹನ್, ಕೃಷಿ ಮೇಲ್ವಿಚಾರಕ ಸಂತೋಷ್, ವಲಯದ ಮೇಲ್ವಿಚಾರಕ ಸಿದ್ದಯ್ಯ,ಸೇವಾ ಪ್ರತಿನಿಧಿ ವಿದ್ಯಾ ವನಜಾಕ್ಷಿ ಇದ್ದಾರೆ.