ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಕೂಡ ಬಲಿಷ್ಠವಾಗಿ ಬೆಳೆಯುತ್ತಿದ್ದಾಳೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇನ್ನೂ ಹೆಚ್ಚಿನಸಾಧನೆ ಮಾಡುವ ಮೂಲಕ ಮುಂದೆ ಬರಬೇಕು ಎಂದು ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ಅಭಿಪ್ರಾಯ ಪಟ್ಟರು.ನಗರದ ಬೈಪಾಸ್ ರಸ್ತೆಯ ಶ್ರೀಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಗೌರಿಬಿದನೂರು ಸಂಸ್ಥೆ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಹಾಗು ಸ್ವ-ಉದ್ಯೋಗ ಮೇಳ-2024 ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಅರ್ಥಿಕ ಪ್ರಗತಿಗೆ ಧಗ್ರಾ ನೆರವುಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ರಾಜ್ಯಾದ್ಯಂತ ಹಲವು ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಕುಟುಂಬಗಳ ಆರ್ಥಿಕಪ್ರಗತಿಗೆ, ಮಕ್ಕಳ ವಿಧ್ಯಾಭ್ಯಾಸದ ಉನ್ನತಿಗೆ, ಸ್ವಯಂಉದ್ಯೋಗದ ಮೂಲಕ ನೆಮ್ಮದಿಯಾಗಿ ಜೀವನಸಾಗಿಸಲು, ವಿಶೇಷವಾಗಿ ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಬೇಕೆಂಬ ಉತ್ತಮ ಆಲೋಚನೆಯೊಂದಿಗೆ ಸಾವಿರಾರು ಜನರಿಗೆ ದಾರಿದೀಪವಾಗಿದೆ. ಇಂತಹ ಸಂಸ್ಥೆಯು ಸರ್ಕಾರದಮುಖೇನ ಅನೇಕ ಗ್ರಾಮಗಳಲ್ಲಿ ರೈತರಪರ ಅನೇಕ ಸಮಾಜಮುಖಿ ಕಾರ್ಯಕ್ರಮದಲ್ಲಿಯೂ ಉತ್ತಮಸೇವೆ ಸಲ್ಲಿಸುತ್ತಿದ್ದು ಇಂತಹ ಯೋಜನಾ ಸಂಸ್ಥೆಗಳನ್ನು ನಾವು ಸದ್ಭಳಕೆಮಾಡಿಕೊಳ್ಳಬೇಕೆಂದು ತಿಳಿಸಿದರು.
ಕೌಶಲ ಬೆಳೆಸಿಕೊಳ್ಳಬೇಕುಮಹಿಳೆಯರು ಸಂಘಟಿತರಾಗಿ ಕೌಶಲಾಭಿವೃದ್ದಿ ಬೆಳೆಸಿಕೊಳ್ಳುವ ಮೂಲಕ ಜ್ಞಾನವಂತರಾಗಬೇಕು. ಮಹಿಳೆಯರು ಹುಟ್ಟಿದ ಮತ್ತು ಮೆಟ್ಟಿದ ಎರಡು ಮನೆಗಳನ್ನು ಬೆಳಗುವ ನಂದಾದೀಪವಿದ್ದಂತೆ. ಮಹಿಳೆಯರು ಎಲ್ಲಾ ರಂಗದಲ್ಲೂ ಸಾಧನೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರ ಸದಸ್ಯರಿಂದ ರಂಗೋಲಿ ಸ್ಪರ್ಧೆ, ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡುವ ಮಳಿಗೆಗಳನ್ನು ಹಾಗೂ ಭಾರತೀಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕ್ಷೇಮವನ ಪ್ರಕೃತಿಚಿಕಿತ್ಸಾಕೇಂದ್ರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರದ್ಧಾಅಮಿತ್ ಮಾತನಾಡಿ, ಹೆಣ್ಣು-ಗಂಡು ಎಂದು ಭೇದಭಾವ ಮಾಡಬಾರದು. ಇಬ್ಬರು ಎರಡು ಕಣ್ಣುಗಳಿದ್ದಂತೆ, ಬಂಡಿಯ ಎರಡು ಗಾಲಿಗಳಿದ್ದಂತೆ. ಜ್ಯೋತಿಯಂತೆ ಹೆಣ್ಣು ಹುಟ್ಟಿದ ಮನೆಯನ್ನು ಗಂಡನ ಮನೆಯನ್ನು ಬೆಳಗುತ್ತಾಳೆ. ಮಹಿಳೆಗೆ ಇನ್ನೂ ಹೆಚ್ಚಿನ ಅಕಾಶ, ಸೂಕ್ತ ವಾತಾವರಣ ನೀಡಿದರೆ ಅವಳು ಸಾಧನೆ ಮಾಡಬಲ್ಲಳು. ಹೆಣ್ಣು ಮಾಯೆಯಲ್ಲ. ಹೆಣ್ಣನ್ನು ದೇವತೆಯಂತೆ ಆರಾಧಿಸಿದ ಪುಣ್ಯ ಭಾರತ. ಪ್ರಕೃತಿ ಹೆಣ್ಣಿಗೆ ತಾಯಿತನ ಎಂಬ ವಿಶೇಷತೆ ನೀಡಿದೆ. ಹೆಣ್ಣು ಮಗಳಿಗಾಗಿ ತಾಯಿಯಾಗು, ತಂಗಿಯಾಗಿ, ಹೆಂಡತಿಯಾಗಿ ಮಹತ್ವದ ಪಾತ್ರವನ್ನಯ ವಹಿಸುತ್ತಾಳೆ ಎಂದರು.ಮಹಿಳೆ ಸ್ವಾವಲಂಬಿಯಾಗಬೇಕು
ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿದ್ದ ಮಹಿಳೆಯರು ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸೇರಿಕೊಂಡು ಇವತ್ತು ಪುರುಷನಷ್ಟೇ ಸಮಾನಳು ಎಂದು ನಿರೂಪಿಸಿದ್ದಾರೆ. ಪ್ರತಿಯೊಂದು ಅವಲಂಬಿಸದೆ ಸ್ವಾಭಿಲಂಭಿ ಬದುಕನ್ನು ನಡೆಸಲು ಈ ಕಾರ್ಯಕ್ರಮಗಳು ನೆರವಾಗಿವೆ. ನಮ್ಮ ತಾಲ್ಲೂಕಿನಲ್ಲಿ 180 ಜನ ಅತ್ಯಂತದುರ್ಬಲ ವರ್ಗದ ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುವ ಮಾಸಾಶನ ನೀಡಲಾಯಿತು ಮತ್ತು ಸಿಜ್ಞಾನನಿಧಿ ಸುಶ್ಯವೇತನ ಇಂತಹ ಸೇವಾಕಾರ್ಯಕ್ರಮಗಳು ಹೆಗಡೆಯವರಿಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರುಸಾಧಕ ಮಹಿಳೆಯರಿಗೆ ಸನ್ಮಾನ
ಅಂಗನವಾಡಿ, ಶಿಕ್ಷಣ, ಕೃಷಿ , ಪೊಲೀಸ್ , ಮತ್ತು ಬ್ಯಾಂಕಿಂಗ್ , ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಹಾಗೂ ಸ್ವ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ, ಅಂಗವಿಕಲರಿಗೆ ವೀಲ್ ಚೇರ್ ವಿತರಣೆ, ಮಾಸಾಶನ ವಿತರಣೆ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಓದುವವರಿಗೆ ಸಹಾಯಧನವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಮಹೇಶ್.ಎಸ್.ಪತ್ರಿ, ಪೌರಾಯುಕ್ತೆ ಡಿ.ಎಂ.ಗೀತಾ, ಕಾ.ಸಾ.ಪಾ.ಅಧ್ಯಕ್ಷೆ ಪ್ರಭಾನಾರಾಯಣಗೌಡ, ಶ್ರೀಯಿತ ಆವುಲಪ್ಪ, ಜಿಲ್ಲಾ ಜನಜಾಗೃತಿ ವೇಧೀಕೆ ಲಕ್ಷ್ಮೀ, ನಗರಸಭೆ ಸದಸ್ಯರು ಮಾರ್ಕೆಟ್ ಮೋಹನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅನೇಕ ಅಧಿಕಾರಿ ವರ್ಗದವರು, ಸಂಘ,ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು, ಉಪಸ್ಥಿತರಿದ್ದರು.