ಗಂಗಾವತಿ:ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನತೆ ತಂದು ಕೊಡಲು ಹಿಂದೂ ಕೋಡ್ ಬಿಲ್ ಮೂಲಕ ಶಕ್ತಿ ಮೀರಿ ಶ್ರಮಿಸಿದರು. ನಮಗೆ ಇಂದು ದೊರಕಿರುವ ಸಮಾನತೆಗೆ ಸಂವಿಧಾನ ಮೂಲವಾಗಿದೆ ಎಂದು ಪ್ರಾಂಶುಪಾಲ ಪ್ರೊ. ಕರಿಗೂಳಿ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಸ್ತ್ರೀಯರು ಮುಂದೆ ಬರಬೇಕಾದರೆ ಯಶಸ್ವಿ ಸ್ತ್ರೀಯರ ಸಾಧನೆಯನ್ನು ಆದರ್ಶವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬ ಪುರುಷನಿಗೂ ಸ್ತ್ರೀ ಸಂವೇದನೆ ಇದ್ದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.

ಉಪನ್ಯಾಸಕಿ ಪೆನಜಾ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಔಚಿತ್ಯವನ್ನು ವಿವರಿಸಿದರು, ಸಾಯಿಕುಮಾರ್ ಅವರು ವಚನಗಳಲ್ಲಿ ಸ್ತ್ರೀ ಸಮಾನತೆ ವಿವರಿಸಿದರು. ಸಹ ಪ್ರಾಧ್ಯಾಪಕ ಡಾ. ಸರಫರಾಜ್ ಅಹಮದ್ ಅವರು ಮಹಿಳೆಯನ್ನು ಗೌರವಿಸುವುದು ನಮ್ಮ ಸಂಸ್ಕೃತಿ ನಮಗೆ ಕಲಿಸಿಕೊಟ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ. ಐ.ಕ್ಯೂ.ಎ.ಸಿ. ಸಹಸಂಚಾಲಕ ಡಾ. ವಿರೂಪಾಕ್ಷ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಅಧ್ಯಾಪಕ ಡಾ. ಶಶಿಕುಮಾರ, ಉಪನ್ಯಾಸಕ, ವೀರೇಶ, ಮಲ್ಲಯ್ಯ, ಡಾ. ರಸೂಲ್ ಸಾಬ್, ದೇವರಾಜ ಹಾಗೂ ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ ಮತ್ತು ಚಿನ್ನ ವರಪ್ರಸಾದ್, ಶರಣ ಹಾಗೂ ವಿದ್ಯಾರ್ಥಿನಿಯರಾದ ಮಹೇಶ್ವರಿ, ಯಮುನಾ, ರತ್ನಾ, ರಕ್ಷಿತಾ ಯುವ ಮಹಿಳೆಯರ ಛಲದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.