ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ: ನಂದಿನಿ ಜಯರಾಮ್

| Published : Mar 09 2025, 01:49 AM IST

ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ: ನಂದಿನಿ ಜಯರಾಮ್
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಮಕ್ಕಳು ತಮ್ಮಲ್ಲಿರುವ ವೃತ್ತಿ ಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಆರ್ಥಿಕ ಸ್ವಾವಲಂಬನೆ ಮೂಲಕ ಪ್ರಗತಿ ಪಥದತ್ತ ಸಾಗಬೇಕು. ಕಷ್ಟದಲ್ಲಿರುವ ನಮ್ಮ ಹಿತೈಷಿಗಳು ಹಾಗೂ ಸ್ನೇಹಿತರಿಗೆ ಕೈಲಾದ ಸಹಾಯ ಮಾಡಿ ಮುನ್ನಡೆಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ರೈತ ನಾಯಕಿ ನಂದಿನಿ ಜಯರಾಮ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕೃಷಿಕ ಸಮಾಜ, ರೈತ ಹಿತರಕ್ಷಣ ಹೋರಾಟ ಸಮಿತಿ, ಅಪ್ಪು ಯುವ ಸಮಾಜ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಇಂದು ಹೆಣ್ಣಿಗೆ ಹೆಣ್ಣೆ ಶತ್ರುವಾಗಿದ್ದಾಳೆ. ಹೆಣ್ಣು ಮಕ್ಕಳು ಟೀಕೆ ಟಿಪ್ಪಣಿಗಳು ಹಾಗೂ ನಿಂಧನೆಗಳಿಗೆ ತಲೆ ಕೆಡಿಸಿಕೊಳ್ಳದೇ ಆತ್ಮವಿಶ್ವಾಸ ಹಾಗೂ ಛಲದಿಂದ ಹೆಜ್ಜೆಹಾಕಿ ಸಾಧನೆ ಮಾಡಬೇಕು ಎಂದರು.

ಇನ್ಸ್ ಪೆಕ್ಟರ್ ಸುಮಾರಾಣಿ ಮಾತನಾಡಿ, ಹೆಣ್ಣು ಮಕ್ಕಳು ತಮ್ಮಲ್ಲಿರುವ ವೃತ್ತಿ ಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಆರ್ಥಿಕ ಸ್ವಾವಲಂಬನೆ ಮೂಲಕ ಪ್ರಗತಿ ಪಥದತ್ತ ಸಾಗಬೇಕು. ಕಷ್ಟದಲ್ಲಿರುವ ನಮ್ಮ ಹಿತೈಷಿಗಳು ಹಾಗೂ ಸ್ನೇಹಿತರಿಗೆ ಕೈಲಾದ ಸಹಾಯ ಮಾಡಿ ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮಲ್ಲಿಕಾರ್ಜುನ, ಕಿಕ್ಕೇರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರೇವತಿ, ಪುರಸಭೆ ಅಧ್ಯಕ್ಷೆ ಪಂಕಜಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ, ತಜ್ಞ ವೈಧ್ಯೆ ಡಾ.ಪ್ರಿಯಾಂಕಾ, ಡಾ.ರಾಜೇಶ್ವರಿ, ಬಸ್ ಡಿಪೋ ಮ್ಯಾನೇಜರ್. ಪಿ.ವನಿತಾ, ಹಿರಿಯ ನಾಗರಿಕರಾದ ಲಲಿತಮ್ಮ ಕುಳ್ಳಪ್ಪ, ಲಕ್ಷ್ಮಮ್ಮ ರಾಮಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜಯಮ್ಮ ನಾಗರಾಜು, ಗೌರಮ್ಮ ಶ್ರೀನಿವಾಸ್, ಮಂಗಳಾ ಪ್ರಭಾಕರ್, ನಾಗರತ್ನಮ್ಮ ಸುಬ್ಬಣ್ಣ, ಸಮಾಜ ಸೇವಕರಾದ ಅನುಪಮಾ, ಚಂದ್ರಕಲಾ ರಮೇಶ್, ತ್ರಿವೇಣಿ ಗೋವಿಂದರಾಜು ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.