ಸಾರಾಂಶ
ಪುತ್ತೂರು ತಾಲೂಕು ಬಂಟರ ಸಂಘದ ಮಹಿಳಾ ಬಂಟರ ವಿಭಾಗದ ವತಿಯಿಂದ ಮಾ.೧೧ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ತಾಲೂಕು ಬಂಟರ ಸಂಘದ ಮಹಿಳಾ ಬಂಟರ ವಿಭಾಗದ ವತಿಯಿಂದ ಮಾ.೧೧ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.ಅವರು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾನಕ್ಕೋತ್ತರ ವಿಭಾಗದ ತುಳು ಉಪನ್ಯಾಸಕಿ ವಾಣಿ ಎಂ. ರೈ ಉದ್ಘಾಟಿಸಲಿದ್ದಾರೆ. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ತಾಲೂಕು ಸಂಚಾಲಕ ದುರ್ಗಾಪ್ರಸಾದ್ ರೈ ಕುಂಬ್ರ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಭಿಮತ ಟಿವಿ ಆಡಳಿತ ಪಾಲುದಾರೆ ಡಾ. ಮಮತಾ ಪಿ. ಶೆಟ್ಟಿ ಆಶಯ ಭಾಷಣ ಮಾಡಲಿದ್ದಾರೆ ಎಂದರು.ಮಹಿಳಾ ಬಂಟರ ವಿಭಾಗದ ಪ್ರಮುಖರಾದ ಸುಮಾ ಅಶೋಕ್ ರೈ, ಕುಮುದಾ ಎಲ್.ಎನ್. ಶೆಟ್ಟಿ, ಮೀರಾ ಭಾಸ್ಕರ ರೈ, ಸಭಿತಾ ಭಂಡಾರಿ, ಮಾಲಿನಿ ಮುತ್ತು ಶೆಟ್ಟಿ, ಯುವ ಬಂಟರ ವಿಭಾಗದ ಹರ್ಷಕುಮಾರ್ ರೈ ಮಾಡಾವು, ವಿದ್ಯಾರ್ಥಿ ಬಂಟರ ವಿಭಾಗದ ಪವನ್ ಶೆಟ್ಟಿ ಕಂಬಳದಡ್ಡ ಉಪಸ್ಥಿತರಿರುತ್ತಾರೆ. ಈ ಸಂದರ್ಭ ಮಹಿಳಾ ಸಾಧಕರಾದ ಡಾ. ಸತ್ಯವತಿ ಆಳ್ವ, ಕೆ. ವಾರಿಜ ರಘುನಾಥ ರೈ ನುಳಿಯಾಲು, ವಾರಿಜ ಯಂ ಶೆಟ್ಟಿ ಬರೆಮೇಲು, ಡಾ. ರಶ್ಮಾ ಎಂ ಶೆಟ್ಟಿ ಮತ್ತು ದೀಕ್ಷಾ ರೈ ಪಟ್ಟೆ ಅವರನ್ನು ಸನ್ಮಾನಿಸಲಾಗುವುದು. ಬಾಲ ಪ್ರತಿಭೆ ಶಾನ್ವಿ ವಿ. ಶೆಟ್ಟಿ ಅವರನ್ನು ಗೌರವಿಸಲಾಗುವುದು.ಕಾರ್ಯಕ್ರಮದಲ್ಲಿ ಪೂರ್ವಾಹ್ನ ಮಹಿಳಾ ಬಂಟರ ವಿಭಾಗದ ಭಜನಾ ತಂಡ ಉದ್ಘಾಟನೆ ಮತ್ತು ಭಜನೆ ನಡೆಯಲಿದೆ. ಬಳಿಕ ಸೌಪರ್ಣಿಕ ಗುರುರಾಜ್ ರೈ ಈಶ್ವರಮಂಗಲ ಅವರಿಂದ ‘ಗಣಪತಿ ತಾಳಂ’ ಮತ್ತು ಜಾನಪದ ನೃತ್ಯ ನಡೆಯಲಿದೆ. ಮಧ್ಯಾಹ್ನ ‘ಮಹಿಷಮರ್ದಿನಿ’ ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ. ರೈ, ಸಾಂಸ್ಕೃತಿಕ ಸಂಚಾಲಕಿ ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.