ಮುಂಡರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಿಳಾ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಮೇ 23ರಂದು ಪಟ್ಟಣದಲ್ಲಿ ಮಹಿಳಾ ಸಾಹಿತ್ಯ ಸಮಾವೇಶ ನಡೆಸಲು ಶನಿವಾರ ತಾಲೂಕು ಕಸಾಪ ಆಜೀವ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವೀಣಾ ಹೇಮಂತಗೌಡ ಪಾಟೀಲ ಮಾತನಾಡಿ, ಸಮಾವೇಶದಲ್ಲಿ ಮಹಿಳಾ ಗೋಷ್ಠಿ, ಚರ್ಚೆ, ಸಂವಾದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸುವುದರ ಜತೆಗೆ ಪ್ರಚಲಿತ ಮಹಿಳೆಯರು ಎದುರಿಸುವ ಸವಾಲುಗಳು, ಮಹಿಳಾ ಸಾಹಿತ್ಯ, ಸಾಮಾಜಿಕ, ಕೌಟುಂಬಿಕ ಜವಾಬ್ದಾರಿ ಮತ್ತು ಮಹಿಳಾ ಸಬಲೀಕರಣ ಜತೆಗೆ ಅನೇಕ ವಿಷಯಗಳ ಕುರಿತು ಕಾರ್ಯಕ್ರಮ ಏರ್ಪಡಿಸಲಾಗುವುದು.
ಸಮಾವೇಶದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಗಂಪಿನ ಮಹಿಳೆಯರು ಒಳಗೊಂಡಂತೆ ಕಾರ್ಯಕ್ರಮದಲ್ಲಿ ಅನುಭವಿ ಮತ್ತು ಮಹಿಳಾಪರ ಮಾತನಾಡುವಂತಹ ಸಾಹಿತಿಗಳನ್ನು, ಉಪನ್ಯಾಸಕರನ್ನಾಗಿ ಕರೆಸಲಾಗುವುದು. ಕಾರ್ಯಕ್ರಮವನ್ನು ತಾಲೂಕು ಕಸಾಪ ಏರ್ಪಡುತ್ತಿದ್ದು, ಮುಂಡರಗಿ ತಾಲೂಕಿನ ಸಮಗ್ರ ಜನತೆಯ ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎ.ಜಿ. ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೆ ಹಾಗೂ ಆರ್ಥಿಕ ಕ್ರೋಡೀಕರಣ ಮತ್ತು ಕಸಾಪ ಇತರ ಸಾಹಿತ್ಯಾಭಿಮಾನಿಗಳ ಸಹಕಾರದ ಅವಶ್ಯಕತೆ ಕುರಿತು ತಿಳಿಸಿ, ಅಂದಿನ ಸಮಾವೇಶ ಡಾ. ಅನ್ನದಾನೀಶ್ವರ ಶ್ರೀಗಳ ಸಾನ್ನಿಧ್ಯ ಮತ್ತು ಶಾಸಕ ಡಾ. ಚಂದ್ರು ಲಮಾಣಿ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಪ್ರೊ. ಎಸ್.ಆರ್. ಬಸಾಪೂರ, ವಿಶ್ರಾಂತ ಪ್ರಾ. ಡಿ.ಸಿ. ಮಠ, ಪ್ರೊ. ಬಿ.ಎಫ್. ಈಟಿ, ಕಾರ್ಯಕಾರಿಣಿ ಸದಸ್ಯ ಸಿ.ಕೆ. ಗಣಪ್ಪನವರ ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಎಸ್.ಬಿ. ಹಿರೇಮಠ, ಎನ್.ಎನ್. ಕಲಕೇರಿ, ಎಸ್.ಎಸ್. ಗಡ್ಡದ, ಮಧುಮತಿ ಇಳಕಲ್, ನೇತ್ರಾವತಿ ಭಾವಿಹಳ್ಳಿ, ಪಾಲಾಕ್ಷಿ ಗಣದಿನ್ನಿ, ಸುರೇಶ ಬಾವಿಹಳ್ಳಿ, ಕೃಷ್ಣಮೂರ್ತಿ ಸಾಹುಕಾರ, ಮಹೇಶ ಮೇಟಿ, ಟಿ.ಬಿ. ಗುಡ್ಲಾನೂರ, ಐ.ಜೆ. ಮುಲ್ಲಾ, ವೀರೇಶ ಬಾಗೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಲತಾ ಕಡ್ಡಿ ಪ್ರಾರ್ಥಿಸಿದರು. ಮಂಜುಳಾ ಇಟಗಿ ಸ್ವಾಗತಿಸಿದರು. ಮಂಜುನಾಥ ಮುಧೋಳ ನಿರೂಪಿಸಿದರು.23ರಂದು ಮುಂಡರಗಿಯಲ್ಲಿ ಮಹಿಳಾ ಸಾಹಿತ್ಯ ಸಮಾವೇಶ
ಸಮಾವೇಶದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಗಂಪಿನ ಮಹಿಳೆಯರು ಒಳಗೊಂಡಂತೆ ಕಾರ್ಯಕ್ರಮದಲ್ಲಿ ಅನುಭವಿ ಮತ್ತು ಮಹಿಳಾಪರ ಮಾತನಾಡುವಂತಹ ಸಾಹಿತಿಗಳನ್ನು, ಉಪನ್ಯಾಸಕರನ್ನಾಗಿ ಕರೆಸಲಾಗುವುದು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.