ಚನ್ನಪಟ್ಟಣ ಕ್ಷೇತ್ರದಲ್ಲಿ ನಾರೀಶಕ್ತಿಯೇ ನಿರ್ಣಾಯಕ!

| Published : Oct 17 2024, 12:46 AM IST

ಸಾರಾಂಶ

ರಾಮನಗರ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.

ರಾಮನಗರ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದರು. ಈಗ ಚನ್ನಪಟ್ಟಣ ಉಪಚುನಾವಣೆಗೆ ಮತದಾರರ ಪಟ್ಟಿಯ ಅಂತಿಮ ಪರಿಷ್ಕರಣೆಯ ಬಳಿಕ ಮಹಿಳಾ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬಹಿರಂಗವಾಗಿದೆ.

ಈ ಕ್ಷೇತ್ರದಲ್ಲಿ ಒಟ್ಟಾರೆ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದೇ ರೀತಿ ಮತದಾರರ ವಿಷಯಕ್ಕೆ ಬಂದಲ್ಲಿ ಮಹಿಳೆಯರ ಬಲ ಹೆಚ್ಚಿದ್ದು, ಪುರುಷರಿಗಿಂತ 8286 ಮಹಿಳಾ ಮತದಾರರು ಹೆಚ್ಚಿದ್ದಾರೆ.

ಮಹಿಳೆಯರದ್ದೆ ಮೇಲುಗೈ :

ಮಾಗಡಿ, ಕನಕಪುರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಬೇರೆ ತಾಲೂಕುಗಳೊಂದಿಗೆ ಹರಡಿಕೊಂಡಿದೆ. ಆದರೆ, ಚನ್ನಪಟ್ಟಣ ಇಡೀ ತಾಲೂಕು ಒಂದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಚನ್ನಪಟ್ಟಣ ನಗರದ ಜೊತೆಗೆ ಕಸಬಾ, ಮಳೂರು ಹಾಗೂ ವಿರೂಪಾಕ್ಷಿಪುರ ಹೋಬಳಿಗಳಿವೆ. ಇಲ್ಲಿನ 2.32 ಲಕ್ಷ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಇಲ್ಲಿ ಪುರುಷರಿಗಿಂತ 8286 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ 2.24 ಲಕ್ಷ ಮತದಾರರು ಇದ್ದರು. ಆಗ ಪುರುಷರಿಗಿಂತ 6620 ಮಹಿಳಾ ಮತದಾರರು ಅಧಿಕವಾಗಿದ್ದರು. ವಿಶೇಷ ಪರಿಷ್ಕರಣೆಯ ಬಳಿಕ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಜಾಗೃತಿಯ ಕಾರಣಕ್ಕೆ ಮಹಿಳೆಯರು ಹೆಚ್ಚಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬುದು ಅಧಿಕಾರಿಗಳ ವಿಶ್ಲೇಷಣೆ.

ರಾಜಕೀಯ ಪಕ್ಷಗಳ ಕಸರತ್ತು :

ಈಗ ಉಪ ಚುನಾವಣೆಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಅಂಶವಾಗಿದ್ದು, ಪ್ರತಿ ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಆರಂಭಿಸಿವೆ. ಸ್ತ್ರೀ ಶಕ್ತಿ ಸಂಘ, ಮಹಿಳಾ ಸಮುದಾಯವನ್ನು ಪ್ರಭಾವಿಸಬಲ್ಲವರಿಗೆ ಮಣೆ ಹಾಕಲು ಮುಂದಾಗಿವೆ. ಅಲ್ಲದೆ, ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವು ತಂತ್ರಗಳನ್ನು ಹೆಣೆಯುತ್ತಿವೆ. ಟಿಕೆಟ್ ಆಕಾಂಕ್ಷಿಗಳು, ರಾಜಕೀಯ ಪಕ್ಷದ ನಾಯಕರು ಮಹಿಳಾ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನೀಡಿರುವುದು ಹಾಗೂ ರಾಜಕಾರಣದಲ್ಲಿ ಮಹಿಳೆಗೆ ಆದ್ಯತೆ ನೀಡುವ ಆಶ್ವಾಸನೆ ಕೊಟ್ಟಿರುವುದನ್ನು ಅಸ್ತ್ರವಾಗಿಟ್ಟುಕೊಂಡು ಮತಬೇಟೆಗೆ ಮುಂದಾಗಿದೆ. ಅಲ್ಲದೆ, ಗ್ಯಾರಂಟಿ ಫಲಾನುಭವಿ ಮಹಿಳೆಯರ ಪಟ್ಟಿ ಸಿದ್ಧಪಡಿಸಿದ್ದಾರೆ. ಮಹಿಳೆಯರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಜೆಡಿಎಸ್ - ಬಿಜೆಪಿ ಕೇಂದ್ರ ಸರ್ಕಾರ ಹಾಗೂ ತಾವು ಅಧಿಕಾರಿದಲ್ಲಿದ್ದಾಗ ಜಾರಿಗೆ ತಂದ ಮಹಿಳಾ ಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮಹಿಳಾ ಮತದಾರರನ್ನು ತಲುಪಲು ಹವಣಿಸುತ್ತಿವೆ.

ಕೋಟ್ ..........

ಚನ್ನಪಟ್ಟಣ ಉಪಚುನಾವಣೆಯಲ್ಲಿ ಮುಕ್ತ , ನ್ಯಾಯಸಮ್ಮತ ಮತ್ತು ನೈತಿಕವಾಗಿ ಎಲ್ಲ ಮತದಾರರು ಭಾಗವಹಿಸಬೇಕು. 2024ರ ಅಕ್ಟೋಬರ್ 15ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಸ್ವೀಕರಿಸಿದ ಎಲ್ಲಾ ನಮೂನೆಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಸೇರಿಸಲಾಗುತ್ತದೆ.

- ಯಶವಂತ್ ವಿ.ಗುರುಕರ್, ಜಿಲ್ಲಾ ಚುನಾವಣಾಧಿಕಾರಿ, ರಾಮನಗರ

ಬಾಕ್ಸ್‌ ...............

21 ತಿಂಗಳಲ್ಲಿ 7950 ಮತದಾರರ ಸಂಖ್ಯೆ ಹೆಚ್ಚಳ :

2022ರ ನವೆಂಬರ್ ನಲ್ಲಿ ಪ್ರಟಕಗೊಂಡ ಕರಡು ಮತದಾರರ ಪಟ್ಟಿಯ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ 2,21,481 ಇದ್ದಂತಹ ಮತದಾರರ ಸಂಖ್ಯೆ 2023ರ ಜನವರಿ 5ಕ್ಕೆ 2,24,886ಕ್ಕೆ ಹೆಚ್ಚಳವಾಗಿತ್ತು. ಈಗ 2024ರ ಅಕ್ಟೋಬರ್ 16ಕ್ಕೆ ಮತದಾರರ ಸಂಖ್ಯೆ 2,32,836 ಮತದಾರರು ಆಗಿದ್ದಾರೆ. 21 ತಿಂಗಳಲ್ಲಿ 7950 ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ.

ಬಾಕ್ಸ್‌.......................

ಚನ್ನಪಟ್ಟಣ ಕ್ಷೇತ್ರ ಮತದಾರರ ವಿವರ

ಪುರುಷಮಹಿಳೆತೃತೀಯಒಟ್ಟು

ಸಾಮಾನ್ಯ ಮತದಾರರು1,12,2711,20,557082,32,836

ಯುವ ಮತದಾರರು4,2684,069018,338

ದಿವ್ಯಾಂಗ ಮತದಾರರು1,6691,342003,011

85 ವಯಸ್ಸಿನ ಹಿರಿಯ ಮತದಾರರು6121,001001,613

ಎನ್‌ಆರ್‌ಐ ಮತದಾರರು6000006

ಸೇವಾ ಮತದಾರರು44030047

-----------------------------------------------------------

16ಕೆಆರ್ ಎಂಎನ್ 2.ಜೆಪಿಜಿ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಕ್ಷೆ

---------------------------------------------------------