ಸಾರಾಂಶ
ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸರ್ಕಾರವು ಸಮಾನ ಅವಕಾಶ ಕಲ್ಪಿಸಿಕೊಡುತ್ತಿದೆ
ಬ್ಯಾಡಗಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಪುರಸಭೆ ಸದಸ್ಯೆ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಮನವಿ ಮಾಡಿದರು.
ವರ್ಗಾವಣೆ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಗೆ ಪಿಎಸ್‌ಐ ಆಗಿ ನಿಯುಕ್ತಿಗೊಂಡಿರುವ ಭಾರತಿ ಕುರಿ ಅವರಿಗೆ ರೋಟರಿ ಇನ್ನರ್‌ವೀಲ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಮುಖ್ಯಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸರ್ಕಾರವು ಸಮಾನ ಅವಕಾಶ ಕಲ್ಪಿಸಿಕೊಡುತ್ತಿದೆ. ಮಹಿಳೆಯು ತಲುಪದಿರುವ ಕ್ಷೇತ್ರಗಳೇ ಇಲ್ಲ. ಮಹಿಳೆಯರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.ಕಾರ್ಯದರ್ಶಿ ರೂಪಾ ಕಡೇಕೊಪ್ಪ, ಬಿ.ಆರ್. ಅಂಬೇಡ್ಕರ ಶಾಲೆಯ ಮುಖ್ಯಶಿಕ್ಷಕಿ ಶೋಭಾ ನೋಟದ ಮಾತನಾಡಿದರು. ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಚೇರಮನ್ ಜ್ಯೋತಿ ಕಿರಣ, ಉಪಾಧ್ಯಕ್ಷೆ ದ್ರಾಕ್ಷಾಯಣಿ ಹರಮಗಟ್ಟಿ, ಗೀತಕ್ಕ ಕಬ್ಬೂರ, ಸಂಧ್ಯಾರಾಣಿ ದೇಶಪಾಂಡೆ, ಸುಧಾ ಹೊಸ್ಮನಿ, ಮಹೇಶ್ವರಿ ಪಸಾರದ, ಗುತ್ತೆಮ್ಮ ಮಾಳಗಿ, ಸುಶೀಲಾ ಕಾರಿಗೇರ, ಪುಷ್ಪಾ ಇಂಡಿಮಠ, ಶೋಭಾ ಅಂಗಡಿ, ಜಾನವಿ ಎಲಿ ಸೇರಿದಂತೆ ಇತರರಿದ್ದರು.