ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕೆಂಬುದು ಸರ್ಕಾರದ ಗೃಹಲಕ್ಷ್ಮಿಯೋಜನೆ ಉದ್ದೇಶ ಎಂದು ವಾಣಿ ಶ್ರೀನಿವಾಸ್ ಹೇಳಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ತರೀಕೆರೆ, ಮುಡುಗೋಡು ಗ್ರಾಪಂ,ಅಂಚೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಮುಡುಗೋಡು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಗೃಹಲಕ್ಷ್ಮಿಯೋಜನೆ ಗೊಂದಲ ಬಗೆಹರಿಸಿಕೊಳ್ಳಬೇಕು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಯೋಜನೆ ತಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಬೇಕು, ಪ್ರತಿಯೊಬ್ಬ ಮಹಿಳೆಗೂ ಗೃಹಲಕ್ಷ್ಮಿ ಹಣ ಸಿಗುವ ಹಾಗೆ ಮಾಡುತ್ತೇವೆ, ಅರ್ಜಿಹಾಕದೆ ಇರುವವರು ಅರ್ಜಿ ಹಾಕಲುತಿಳಿಸಿದರು.
ಅಂಚೆ ಇಲಾಖೆಯ ಕುಮಾರ್ ಮಾತನಾಡಿ, ಇಲಾಖೆಯ ಜನ ಸಂಪರ್ಕ ಅಭಿಯಾನ, ಜನರ ಕುಂದು ಕೊರತೆ ನಿವಾರಿಸುವ ಕಾರ್ಯಕ್ರಮವಾಗಿದ್ದು, ಅಂಚೆಇಲಾಖೆಯಲ್ಲಿ ಬರುವ ಗೃಹಲಕ್ಷ್ಮಿ ಕಿಶಾನ್ ಯೋಜನೆ, ಅನ್ನಭಾಗ್ಯ ಯೋಜನೆ, ಬ್ಯಾಂಕ್ ಸಂಬಂಧಿಸಿದ ಹಣಜಮಾ ಆಗುವುದು ಹಾಗೂ ನಮ್ಮ ಅಂಚೆ ಇಲಾಖೆಯಲ್ಲಿ ಇನ್ಷುರೆನ್ಸ್ ಗಳು ಸಹ ಇರುತ್ತವೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಕೆ.ಸಾವಿತ್ರಮ್ಮ ಮಾತನಾಡಿ ಗೃಹಲಕ್ಷ್ಮಿ ರಾಜ್ಯ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದೆ. ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಒಟ್ಟು 53, 948 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಕೇವಲ1000 ಫಲಾನುಭವಿಗಳು ಮಾತ್ರಇಕೆವೈಸಿ, ಆಧಾರ್ ಸೀಡಿಂಗ್ ಹಾಗೂ ಒಂದು ಕಂತು ಹಣ ಬಂದು ಎರಡನೇ ಕಂತು ಹಣ ಬಂದಿಲ್ಲದೆ ಇರುವವರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸದೆ ಇರುವವರು ಅರ್ಜಿಗಳನ್ನು ಗ್ರಾಮ ಒನ್ ನಲ್ಲಿ ಅರ್ಜಿ ಹಾಕಬೇಕು ಎಂದ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎನ್. ಚರಣ್ ರಾಜ್ ಗೃಹಲಕ್ಷ್ಮಿಯೋಜನೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಎಚ್.ಎನ್ ಮಂಜುನಾಥ್ ಮಾತನಾಡಿ ಈ ಯೋಜನೆ ಯಶಸ್ವಿಗೊಳಿಸಲು ತಿಳಿಸಿ ಗ್ಯಾರಂಟಿ ಐದು ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರು.
ಗ್ರಾಪಂ ಅಧ್ಯಕ್ಷರಾದ ಜಿನತ್ ಬಾನು ಮಾತನಾಡಿ ಸರ್ಕಾರದ ಸವಲತ್ತುಗಳನ್ನು ಸರಿಯಾಗಿ ಬಳಸಿ ಕೊಳ್ಳಬೇಕು ಎಂದು ತಿಳಿಸಿದರು.ಗ್ರಾಪಂ ಉಪಾಧ್ಯಕ್ಷ ರವಿ, ಸದಸ್ಯರು, ಲಕ್ಕವಳ್ಳಿ ಹೋಬಳಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಅರ್.ಚಂದ್ರಶೇಖರ್ , ಬಿ.ಎನ್.ಪ್ರದೀಪ್ ಉಪಸ್ಥಿತರಿದ್ದರು.2ಕೆಟಿಆರ್.ಕೆ.6ಃ
ತರೀಕೆರೆ ಸಮೀಪದ ಮುಡುಗೋಡು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಪಂ , ಅಂಚೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಾಡಿಸಿದ್ದ ಗೃಹಲಕ್ಷ್ಮಿ ಯೋಜನೆ ಜನಸಂಪರ್ಕ ಸಭೆ ವಾಣಿ ಶ್ರೀನಿವಾಸ್ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷರಾದ ಜಿನತ್ ಬಾನು, ಉಪಾಧ್ಯಕ್ಷ ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಕೆ ಸಾವಿತ್ರಮ್ಮ ಮತ್ತಿತರರು ಇದ್ದರು.