ಸಾರಾಂಶ
ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ಮಹಿಳಾ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಮಹಿಳಾ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಭಗವತಿ ಮಹಿಳಾ ಸಮಾಜದ ಅಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹೇಳಿದರು.ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಭಗವತಿ ಮಹಿಳಾ ಸಮಾಜದ ವತಿಯಿಂದ ಸೋಮವಾರ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಹಿಳಾ ಸಮಾಜದ ನಿವೇಶನದ ಜೊತೆಗೆ ಕಟ್ಟಡದ ಅವಶ್ಯಕತೆ ಇದೆ. ಮಾಜಿ ಶಾಸಕ ಕೆ. ಜಿ. ಬೋಪಯ್ಯ ಕಟ್ಟಡದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ದಾನಿಗಳು ಮಹಿಳಾ ಸಮಾಜಕ್ಕೆ ಮ್ಯಾಟ್, ಮೈಕ್ ಸೆಟ್ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಿದ್ದು ಸಮಾಜ ಅಭಿವೃದ್ಧಿ ಸಾಧಿಸುತ್ತಿದೆ ಎಂದರು.ಮುಂದಿನ ಕೆಲವು ಕಾರ್ಯಕ್ರಮಗಳನ್ನು ಕೊಡವ ಮಕ್ಕಳ ಕೂಟದ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು .
ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ, ಅಂಗನವಾಡಿ ಮಕ್ಕಳ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ವೇದಿಕೆಯಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷ ನಾಟೋಳಂಡ ಕಸ್ತೂರಿ , ಕಾರ್ಯದರ್ಶಿ ಬೊಪ್ಪಂಡ ಯಮುನಾ, ಸಹ ಕಾರ್ಯದರ್ಶಿ ಶಿವಚಾಳಿಯಂಡರೋಹಿಣಿ, ನಿರ್ದೇಶಕರಾದ ಶಿವಚಾಳಿಯಂಡ ಪಾರ್ವತಿ ಬೆಳ್ಳಿಯಪ್ಪ, ಶಿವಚಾಳಿಯಂಡ ದೇವಕ್ಕಿ, ಶಿವಾಚಾಳಿಯಂಡ ಬೋಜಮ್ಮ ರಾಣಿ, ಚೀಯಕಪೂವಂಡ
ಮುತ್ತುರಾಣಿ, ಕುಂದೈರಿರ ಶಾಂತಿ, ಕುಲ್ಲೇಟಿರ ಹೇಮ, ಬೊಪ್ಪಂಡ ಯಶೋಧ, ಪೊರ್ಕೊಂಡ ಭಾಗ್ಯವತಿ, ಅರೆಯಡ ಸರಸು, ಕೇಲೆಟಿರ ಕವಿತಾ, ನೂರಂಬಾಡ ಗಾಯತ್ರಿ, ಶಿವಾಚಾಳಿಯಂಡ ವಿಲ್ಮಾ ಉಪಸ್ಥಿತರಿದ್ದರು.ಶಿವಾಚಾಳಿಯಂಡ ವಿಲ್ಮಾ ಪ್ರಾರ್ಥಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಪೊರ್ಕೊಂಡ ಶಾಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.