ವೃತ್ತಿ ನಿರತ ಸ್ಥಳದಲ್ಲಿ ಮಹಿಳೆಯರು ಎಚ್ಚರದಿಂದಿರಬೇಕು: ನ್ಯಾ.ಊರ್ಮಿಳಾ

| Published : Sep 13 2025, 02:04 AM IST

ಸಾರಾಂಶ

ತರೀಕೆರೆ, ಮಹಿಳೆಯರು ನೃತ್ತಿ ನಿರತ ಸ್ಥಳದಲ್ಲಿ ಎಚ್ಚರದಿಂದ ಇರಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾಹೇಳಿದ್ದಾರೆ.

- ಮಹಿಳೆಯರ ಸುರಕ್ಷತೆ ಕುರಿತು ಕಾನೂನು ಅರಿವು

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳೆಯರು ನೃತ್ತಿ ನಿರತ ಸ್ಥಳದಲ್ಲಿ ಎಚ್ಚರದಿಂದ ಇರಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾಹೇಳಿದ್ದಾರೆ.ಜಿಪಂ ಚಿಕ್ಕಮಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಪಂ ತರೀಕೆರೆ, ತಾಲೂಕು ಕಾನೂನು ನೆರವು ಸಮಿತಿ, ಶಿಶು ಅಭಿವೃದ್ಧಿ ಇಲಾಖೆ ತರೀಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಹತ್ತು ದಿನಗಳ ವಿಶೇಷ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮದ ಉದ್ಗಾಟನೆ ನೆರವೇರಿಸಿ ಮಾತನಾಡುತ್ತಿದ್ದರು.ಯಾವುದೇ ವ್ಯಕ್ತಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಕೈಸನ್ನೆ ಮಾಡುವುದು,ಮೊಬೈಲಿನಲ್ಲಿ ಅಶ್ಲೀಲ ಪದ ಮತ್ತು ಚಿತ್ರ ಕಳಿಸುವುದು, ಲೈಂಗಿಕ ಕ್ರೀಯೆಗೆ ಆಹ್ವಾನಿಸುವುದು ಕಾನೂನು ಅಪರಾಧ. ಅವರು ಕೂಡಲೇ ಮೇಲಾಧಿಕಾರಿಗಳಿಗೆ ಅಥವಾ ಪೊಲೀಸರಿಗೆ ದೂರು ಸಲ್ಲಿಸಬೇಕು. ಮಹಿಳೆಯರು ಎಚ್ಚರದಿಂದ ಇರಬೇಕು ಎಂದು ಹೇಳಿದರು.ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಕಾನೂನು ತಿಳಿದು ಕೊಳ್ಳಬೇಕು, ಅದರಲ್ಲೂ ಅಂಗನವಾಡಿ ಕಾರ್ಯಕರ್ತರು ತಾವು ಕೆಲಸ ಮಾಡುತ್ತಿರುವ ಊರಿನ ಜನಕ್ಕೆ ತಿಳಿಸಿದರೆ ಒಳ್ಳೆಯದು, ತಾವು ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ತೊಂದರೆಯಾದರೆ ಜಿಲ್ಲಾಧಿಕಾರಿಗಳ ಸಮಿತಿಗೆ ದೂರು ಸಲ್ಲಿಸಬೇಕು ಎಂದು ಹೇಳಿದರು.ವಕೀಲ ವೀರಭದ್ರಪ್ಪ ಫೋಕ್ಸೋ, ಬಾಲ್ಯ ವಿವಾಹ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ಸಿಡಿಪಿಒ ಚರಣ್ ರಾಜ್ ಇಲಾಖೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.-11ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ನಡದ ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ಉದ್ಘಾಟಿಸಿದರು. ವಕೀಲರಾದ ಎಸ್.ಸುರೇಶ್ ಚಂದ್ರ, ವೀರಭದ್ರಪ್ಪ, ಸಿಡಿಪಿಒ ಚರಣ್ ರಾಜ್ ಮತ್ತಿತರರು ಭಾಗವಹಿಸಿದ್ದರು.