ಸುಳ್ಳು ಭರವಸೆಗೆ ಮರಳಾಗದಂತೆ ಮಹಿಳೆಯರು ಜಾಗೃತಿ ಮೂಡಿಸಬೇಕು-ಸೃಷ್ಠಿ ಪಾಟೀಲ

| Published : Mar 19 2024, 12:46 AM IST / Updated: Mar 19 2024, 12:47 AM IST

ಸುಳ್ಳು ಭರವಸೆಗೆ ಮರಳಾಗದಂತೆ ಮಹಿಳೆಯರು ಜಾಗೃತಿ ಮೂಡಿಸಬೇಕು-ಸೃಷ್ಠಿ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮಹಿಳೆಯರ ಸಬಲೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದು, ನಮ್ಮ ಪಕ್ಷದಲ್ಲಿ ಇರುವಷ್ಟು ಮಹಿಳಾ ಕಾರ್ಯಕರ್ತರು ಬೇರೆಯಾವ ಪಕ್ಷದಲ್ಲಿಯೂ ಇಲ್ಲ. ಬಿಜೆಪಿ ಮಹಿಳೆಯನ್ನು ಸಮಾನ ದೃಷ್ಟಿಯಿಂದ ನೋಡುತ್ತದೆ ಎಂದು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಠಿ ಪಾಟೀಲ ಹೇಳಿದರು.

ಹಾವೇರಿ: ಬಿಜೆಪಿ ಮಹಿಳೆಯರ ಸಬಲೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದು, ನಮ್ಮ ಪಕ್ಷದಲ್ಲಿ ಇರುವಷ್ಟು ಮಹಿಳಾ ಕಾರ್ಯಕರ್ತರು ಬೇರೆಯಾವ ಪಕ್ಷದಲ್ಲಿಯೂ ಇಲ್ಲ. ಬಿಜೆಪಿ ಮಹಿಳೆಯನ್ನು ಸಮಾನ ದೃಷ್ಟಿಯಿಂದ ನೋಡುತ್ತದೆ ಎಂದು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಠಿ ಪಾಟೀಲ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಹಿಳಾ ಮೋರ್ಚಾ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪಕ್ಷವು ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಯರಿಗೆ ಅವಕಾಶ ಕಲ್ಪಿಸಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಗೆ ಅವಕಾಶ ನೀಡುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮಹಿಳೆಯರಿಗೂ ಮತದಾನದ ಪ್ರಾಮುಖ್ಯತೆ ತಿಳಿಸಿ ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗೆ ಮರಳಾಗದಂತೆ ಜಾಗೃತಿ ಮೂಡಿಸಬೇಕು. ದೇಶದ ಸುಭದ್ರತೆ, ರಕ್ಷಣೆ ಹಾಗೂ ಆರ್ಥಿಕ ಬೆಳವಣಿಗೆಗೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಲಾಗುತ್ತದೆ. ಬಿಜೆಪಿ ಪಕ್ಷ ದೇಶದ ಅಖಂಡತೆ ಹಾಗೂ ಅಭಿವೃದ್ಧಿಯನ್ನು ಬಯಸುವ ಪಕ್ಷ, ನಮಗೆ ಕಾಂಗೆಸ್ ಪಕ್ಷದಂತೆ ಪುಕ್ಕಟ್ಟೆ ಭಾಗ್ಯಗಳನ್ನು ನೀಡಿ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸಿಮಗೌಡರ ಮಾತನಾಡಿ, ಲೋಕಸಭಾ ಚುನವಾಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭ್ಯರ್ಥಿಯಾಗಿದ್ದು, ನಮೆಗಲ್ಲ ಸಂತಸವಾಗಿದೆ. ಈಗಾಗಲೇ ಬಸವರಾಜ ಬೊಮ್ಮಾಯಿಯವರು ಹಲವು ಬಾರಿ ಶಾಸಕರಾಗಿ, ವಿಪ ಸದಸ್ಯರಾಗಿ, ಸಚಿವರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ೨ ಲಕ್ಷಕ್ಕೂ ಅಧಿಕ ಮತಗಳಿಂದ ಅವರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಮಹಿಳಾ ಮೋರ್ಚಾ ಉಸ್ತುವಾರಿ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ಸುಮಾರು ಶೇ.೫೦ರಷ್ಟು ಮಹಿಳಾ ಮತದಾರರಿದ್ದು ಮಹಿಳೆಯರು ಕಡ್ಡಾಯವಾಗಿ ಮತ ಚಲಾಯಿಸುವುದು ಮುಖ್ಯವಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ತಂಡ ಸಮಾಜದ ಎಲ್ಲ ಸ್ಥರದ ಮಹಿಳೆಯರನ್ನು ಸಂಪರ್ಕಿಸಿ ನರೇಂದ್ರ ಮೋದಿಜಿಯವರು ಮಹಿಳೆಯರ ಸಬಲಿಕರರ್ಣಕ್ಕೆ ಜಾರಿಗೊಳಿಸಿದ ಯೋಜನೆಗಳನ್ನು ಮನದಟ್ಟು ಮಾಡಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲುಕುಗಳಲ್ಲಿ ಮಹಿಳಾ ಮೋರ್ಚಾ ತಂಡ ಸದೃಢವಾಗಿದ್ದು ಈ ಬಾರಿಯು ಚುನಾವಣೆಯಲ್ಲಿ ಮೋದಿಜಿಯವರನ್ನು ೩ನೇ ಬಾರಿ ಪ್ರಧಾನಿಯನ್ನಾಗಿಸಲು ಹೆಚ್ಚಿನ ಮಹಿಳೆಯರು ಈ ಬಾರಿ ಚುನಾವಣೆಯಲ್ಲಿ ಶ್ರಮಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಭಾರತಿ ಅಳವಂಡಿ, ದಕ್ಷ್ಷಿಣ ಕನ್ನಡ ಉಸ್ತುವಾರಿ ಭಾರತಿ ಜಂಬಗಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಗಳಾದ ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳು ಇದ್ದರು.