ಸಾರಾಂಶ
ಹಿರೇಕೆರೂರು: ಪ್ರಸ್ತುತ ಮಹಿಳೆಯರಿಗೆ ಸಾಕಷ್ಟು ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ತೋರಬೇಕು ಎಂದು ತಹಸೀಲ್ದಾರ್ ಎಚ್. ಪ್ರಭಾಕರಗೌಡ ತಿಳಿಸಿದರು.ಪಟ್ಟಣದಲ್ಲಿ ಕರ್ನಾಟಕ ವ್ಯವಸಾಯ ವೃತ್ತಿಪರ ಯುನಿಯನ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಿಳೆಯರ ಸಾಧನೆಗಳಿಗೆ ಗೌರವ ಸೂಚಿಸುವ ಸಲುವಾಗಿ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎಂಬ ಸಂದೇಶ ಸಾರುವುದಕ್ಕಾಗಿ ಈ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಎಂ. ಅಸದಿ ಮಹಿಳೆಯರ ಸುರಕ್ಷತೆ ಹಾಗೂ ವಿವಿಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ವ್ಯವಸಾಯ ವೃತ್ತಿಪರ ಯುನಿಯನ್ ವತಿಯಿಂದ ಮಹಿಳೆಯರಿಗೆ ಸಾಮಾಜಿಕ ಭದ್ರತೆ, ಗರ್ಭಿಣಿಯರಿಗೆ ಆರು ತಿಂಗಳಗಳ ಕಾಲ ಮಾಸಿಕ ₹10 ಸಾವಿರ ನೀಡಬೇಕು. ಕೂಲಿ ಕಾರ್ಮಿಕರಿಗೆ ಸಮಾನ ವೇತನ ಹಾಗೂ ಕನಿಷ್ಠ ₹599 ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ವ್ಯವಸಾಯ ವೃತ್ತಿಪರ ಯುನಿಯನ್ ಅಧ್ಯಕ್ಷ ಶೇಖಪ್ಪ ಶಿವನಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪ್ರಮುಖರಾದ ಕಾಮಾಕ್ಷಿ ರೇವಣಕರ, ನಾಗರಾಜ ಮಳೂರು, ನವೀನ್ ಹುಲ್ಲತ್ತಿ, ಕವಿತಾ ಭಾರತಿ, ಮಂಜುಳಾ, ನಾಗರತ್ನ ಸೇರಿದಂತೆ ಇತರರಿದ್ದರು.ಅಂಗವೈಕಲ್ಯ ಶಾಪ ಎಂದು ಭಾವಿಸದೇ ಸಾಧಿಸಿರಾಣಿಬೆನ್ನೂರು: ಅಂಗವೈಕಲ್ಯ ಒಂದು ಶಾಪವೆಂದು ಭಾವಿಸದೇ ಅದೊಂದು ವರವೆಂದು ತಿಳಿದು ಜೀವನದಲ್ಲಿ ಸಾಮಾನ್ಯರಿಗೆ ಸರಿಸಮನಾಗಿ ಬಾಳಬೇಕು ಎಂದು ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ ಮಗ್ಗದ ಹೇಳಿದರು.ನಗರದ ಶ್ರೀ ತುಳಜಾ ಭವಾನಿ ದೇವಸ್ಥಾನದ ಸಭಾಭವನದಲ್ಲಿ ಸ್ಥಳೀಯ ಶ್ರೀ ಜಿಹ್ವೇಶ್ವರ ಮಹಿಳಾ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೈತ್ಯ ಇಚ್ಛಾಶಕ್ತಿ, ಛಲ, ದೃಢ ಸಂಕಲ್ಪ ಸಾಧನೆಗೆ ಅಡ್ಡಿಯಾಗದು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನವೂ ಮಹಿಳೆಯರ ಸಬಲೀಕರಣದ ಬದುಕು ನಮ್ಮದಾಗಬೇಕು ಎಂದರು.ಮಹಿಳಾ ಮಂಡಳಿ ಅಧ್ಯಕ್ಷೆ ರಾಜೇಶ್ವರಿ ಏಕಬೋಟೆ ಮಾತನಾಡಿ, ಮಹಿಳಾ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಅಪರಿಮಿತವಾದದ್ದು ಎಂದರು.
ಸ್ವಕುಳಸಾಳಿ ಸಮಾಜದ ಅಧ್ಯಕ್ಷ ವಿಠ್ಠಲ ಏಡಕೆ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ಕಾರ್ಯ ನಿರ್ವಹಿಸಲು ಸದಾ ಸಹಕಾರ, ಪ್ರೋತ್ಸಾಹ ನಮ್ಮದು ಎಂದರು.ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ಕ್ರೀಡೆಗಳನ್ನು ಶಾಂತಲಕ್ಷ್ಮೀ ಮತ್ತು ವೈಶಾಲಿ ನಡೆಸಿಕೊಟ್ಟರು.ಪುಷ್ಪಾ ಏಕಬೋಟೆ, ಶಾಂತಲಕ್ಷ್ಮೀ ರೋಖಡೆ, ಜಯಶ್ರೀ ಕ್ಷೀರಸಾಗರ, ಸುಜಾತಾ ಏಕಬೋಟೆ, ಯಶೋದಾ ಏಡಕೆ, ಸುಜಾತಾ ಏಕಬೋಟೆ, ಸುಷ್ಮಾ ರೋಖಡೆ ಮತ್ತಿತರರಿದ್ದರು.