ಮಹಿಳೆಯರು ಆತ್ಮಬಲ ಹೆಚ್ಚಿಸಿಕೊಳ್ಳಬೇಕು

| Published : Jun 15 2024, 01:03 AM IST

ಸಾರಾಂಶ

ಮಹಿಳೆ ಕುಟುಂಬದ ಆಸ್ತಿಯಾಗಿ ವಿದ್ಯಾವಂತರಾಗಬೇಕು. ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಪಡೆದುಕೊಳ್ಳಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಸಾಕ್ಷಿಯಾಗಿದ್ದಾರೆ ಎಂದು ಹೂವಿನಹಿಪ್ಪರಗಿಯ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ ಹೇಳಿದರು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮಹಿಳೆ ಕುಟುಂಬದ ಆಸ್ತಿಯಾಗಿ ವಿದ್ಯಾವಂತರಾಗಬೇಕು. ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಪಡೆದುಕೊಳ್ಳಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಸಾಕ್ಷಿಯಾಗಿದ್ದಾರೆ ಎಂದು ಹೂವಿನಹಿಪ್ಪರಗಿಯ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳ 90ನೇ ಜಾತ್ರಾಮಹೋತ್ಸವದಂಗವಾಗಿ ಶ್ರೀಮಠ, ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪುರುಷರು ಆತ್ಮ ಶುದ್ಧೀಕರಣದಿಂದ ಮಹಿಳೆಯರಿಗೆ ಗೌರವ ನೀಡಬೇಕು. ಮಹಿಳೆ ಕುಟುಂಬದ ಆಧಾರ ಸ್ತಂಭವಾಗಿದ್ದಾಳೆ. ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುವ ದೃಷ್ಟಿಕೋನ ಇರಬೇಕು. ಮಹಿಳೆ ದೇವತೆಯ ಸಮಾನಳು ಎಂದರು.

ಮಾಜಿ ಸಚಿವ ಲೀಲಾವತಿ ಪ್ರಸಾದ ಮಾತನಾಡಿ, ಇಂಗಳೇಶ್ವರ ವಿರಕ್ತಮಠ ವಚನ ಶಿಲಾಶಾಸನ ಮಂಟಪ ಕಾರ್ಯ ಇತಿಹಾಸ ಪ್ರಸಿದ್ಧವಾಗಿದೆ. ನಾನು ಇಂಗಳೇಶ್ವರ ಗ್ರಾಮದ ಮೊಮ್ಮಗಳಾಗಿದ್ದು ಹೆಮ್ಮೆಯ ವಿಷಯ ಎಂದರು.

ಮಹಿಳಾ ಸಬಲೀಕರಣ ಗೋಷ್ಠಿಯಲ್ಲಿ ಸುಖದೇವಿ ಅಲಬಾಳಮಠ ಹಾಗು ರೋಹಿಣಿ ಜತ್ತಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಹಿಳೆಯರು ಆಥಿ೯ಕ, ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಹಿಳೆ ನೈಸರ್ಗಿಕವಾದ ಸದ್ಗಣಗಳನ್ನು ಪಡೆದುಕೊಂಡು ಬಂದಿದ್ದಾಳೆ. ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಬೇಕು. ಕಾಲಘಟ್ಟ ಬದಲಾವಣೆಗೆ ನಾವು ಸನ್ಮಾಗ೯ದಲ್ಲಿ ಸಾಗಬೇಕು ಎಂದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲದ ಕುರಿತು ಇಂಗಳೇಶ್ವರ ವಿರಕ್ತಮಠದ ಕಾಯ೯ ಶ್ಲಾಘನೀಯವಾದದ್ದು ಎಂದರು.

ಸಾನ್ನಿಧ್ಯವನ್ನು ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಯರನಾಳ ಸಂಗನಬಸವ ಸ್ವಾಮೀಜಿ, ಬಳಗಾನೂರ ಮಂಜುಳಾ ಮಾತಾಜಿ, ಚಡಚಣದ ಷಡಕ್ಷರಿ ಸ್ವಾಮೀಜಿ, ಇಂಗಳೇಶ್ವರ ವಿರಕ್ತಮಠದ ಡಾ. ಸಿದ್ದಲಿಂಗ ಸ್ವಾಮೀಜಿ,ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯ,ಪಡೇಕನೂರದ ಚನ್ನಮಲ್ಲಿಕಾಜ೯ನ ಸ್ವಾಮೀಜಿ, ಲೋಟಗೇರಿ ಗುರುಮೂರ್ತಿ ಸ್ವಾಮೀಜಿ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿ ಕಮಲಾ ಮುರಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶಾಂತಾ ಬಿರಾದಾರ, ಪುಷ್ಪಾ ಕುಲಕರ್ಣಿ, ಗಿರಿಜಾ ಸಜ್ಜನ, ಎಸ್. ಎಸ್. ಝಳಕಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಶಾಂತಾ ಬಿರಾದಾರ, ಬಸವರಾಜ ಬಾಗೇವಾಡಿ, ಎಂ.ಬಿ.ನಾವದಗಿ, ಅಪ್ಪುಗೌಡ ಪಾಟೀಲ,

ನಿಂಗಪ್ಪ ಬೊಮ್ಮನಹಳ್ಳಿ ಇತರರು ಇದ್ದರು. ಶರಣು ಬಸ್ತಾಳ ಪ್ರಾರ್ಥಿಸಿದರು. ಲಕ್ಷ್ಮಿ ಕುಂಬಾರ ಸ್ವಾಗತಿಸಿದರು. ಶಾಂತಾ ಬಿರಾದಾರ ನಿರೂಪಿಸದರು. ಭೀಮರಾಮ ಚಕ್ರಮನಿ ವಂದಿಸಿದರು.