ಹೆಣ್ಣು ಅಬಲೆಯಲ್ಲ, ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆಯಾಗಿದ್ದಾಳೆ. ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ, ಪ್ರೋತ್ಸಾಹಿಸಬೇಕು ಹೊರತು ತಾರತಮ್ಯ ಮಾಡಬಾರದು ಎಂದು ಕೀರ್ತಿ ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹೆಣ್ಣು ಅಬಲೆಯಲ್ಲ, ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆಯಾಗಿದ್ದಾಳೆ. ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ, ಪ್ರೋತ್ಸಾಹಿಸಬೇಕು ಹೊರತು ತಾರತಮ್ಯ ಮಾಡಬಾರದು ಎಂದು ಕೀರ್ತಿ ಶಿವಕುಮಾರ್ ಹೇಳಿದರು.ನಗರದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾ ಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೆಯ ಬೆಳಗುವ ದೀಪ ಮಹಿಳೆ. ಈ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು ಎಂದರು.
ಸ್ತ್ರೀ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಸಂಸ್ಕಾರವನ್ನು ಕಲಿತು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತಾಳೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಮಹಿಳೆ ಯಾವುದೇ ಒಂದು ಚಟುವಟಿಕೆಯಲ್ಲಿ ಭಾಗವಹಿಸಲು ವಯಸ್ಸಿನ ಅಂತರವನ್ನು ಲೆಕ್ಕಿಸದೆ ಖುಷಿಯಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.ಡಾ.ಸಂಜೀವ್ ಪಾಟೀಲ್ ಹಾಗೂ ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ರಾಮ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ಲೇಕ್ ವ್ಯೂ ಆಸ್ಪತ್ರೆಯ ವೈದ್ಯರಾದ ಡಾ.ಸಂಗೀತ, ಡಾ.ಸಂಜೀವ್ ಪಾಟೀಲ್ ದಂಪತಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರ್ಶ ಅತ್ತೆ ಸೊಸೆ ಪ್ರಶಸ್ತಿಯನ್ನು ಚೆನ್ನಕ್ಕಾ ಕಾಗತಿಕರ ಮತ್ತು ಸೊಸೆ ನೀತಾ ಅಶೋಕ್ ಕಾಗತಿಕರ್ ಅವರಿಗೆ ಆದರ್ಶ ಅತ್ತೆ ಸೊಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಗೀತ ವಿದೂಷಕಿ ಸೀಮಾ ಕುಲ್ಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಷ ಆಶ್ರಮದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ₹5,52,000 ಚೆಕ್ ವಿತರಿಸಲಾಯಿತು. ಆರಾಧನಾ ಸ್ಕೂಲ್ ಮಕ್ಕಳಿಗೋಸ್ಕರ ₹5000 ಚೆಕ್ ಅನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಸುತಾರ್ ಅವರಿಗೆ ವಿತರಿಸಲಾಯಿತು.ಈ ವೇಳೆ ಅಧ್ಯಕ್ಷರಾದ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೊಳ ಮಾತನಾಡಿದರು. ತ್ರಿಶಲಾ ಪಾಯಪ್ಪನವರ್, ದರ್ಶನ ನಿಲಜಗಿ, ಮಮ್ತಾ ಪತ್ರಾವಳಿ ಪರಿಚಯಿಸಿದರು. ರೋಹಿಣಿ ಇಂಡಿ, ಡಾ.ರಾಜೇಂದ್ರ ಮಠದ, ಡಾ.ಗುಡಗನಟ್ಟಿ ಇದ್ದರು. ಪುಷ್ಪ ನಿಲಜಗಿ ನಿರೂಪಿಸಿದರು. ಪದ್ಮಜಾ ತುರುಮುಂಡಿ ವಂದಸಿದರು.