ಸಾರಾಂಶ
ಯಮಕನಮರಡಿ ಹುಣಸಿಕೊಳ್ಳಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಸ್ವ ಸಹಾಯ ಗುಂಪುಗಳ ಸಾಧನಾ ಸಮಾವೇಶದಲ್ಲಿ ಹುಣಸಿಕೊಳ್ಳಮಠದ ರಾಚೋಟಿ ಸ್ವಾಮೀಜಿ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಶಕ್ತಿ ಗುರುತಿಸಿಕೊಂಡು ಸಾಧನೆ ಮಾಡಿದಲ್ಲಿ ಸಮಾಜ ತನ್ನಿಂದತಾನೇ ಗುರುತಿಸಿ ಸತ್ಕರಿಸುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಮಹಿಳೆಯರು ತಮ್ಮಲ್ಲಿರುವ ಶಕ್ತಿ ಗುರುತಿಸಿಕೊಂಡು ಸಾಧನೆ ಮಾಡಿದಲ್ಲಿ ಸಮಾಜ ತನ್ನಿಂದತಾನೇ ಗುರುತಿಸಿ ಸತ್ಕರಿಸುತ್ತದೆ ಎಂದು ಹುಣಸಿಕೊಳ್ಳಮಠದ ರಾಚೋಟಿ ಸ್ವಾಮೀಜಿ ಹೇಳಿದರು.ಯಮಕನಮರಡಿ ಹುಣಸಿಕೊಳ್ಳಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಸ್ವ ಸಹಾಯ ಗುಂಪುಗಳ ಸಾಧನಾ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಮಕ್ಕಳಿಗೆ ತಾಯಿಯಿಂದ ಸಿಗುವಷ್ಟು ಸಂಸ್ಕಾರ, ಬುದ್ಧಿ ಬೇರೆ ಯಾರಿಂದಲೂ ಸಿಗುವುದಿಲ್ಲ. ತಾಯಂದಿರು ತಮ್ಮ ಮಕ್ಕಳ ಜತೆ ಸಮಯ ಕಳೆದು ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂಬುವುದನ್ನು ಸಣ್ಣ ವಯಸ್ಸಿನಲ್ಲೇ ಕಲಿಸಿದಲ್ಲಿ ಅವರು ಜವಾಬ್ದಾರಿಯುತ ಪ್ರಜೆಗಳಾಗುವರು ಎಂದು ಹೇಳಿದರು.
ಸಮಾವೇಶ ಉದ್ಘಾಟಿಸಿದ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಹಮ್ಮಿಕೊಂಡ ಯೋಜನೆ ಬಗ್ಗೆ ವಿವರಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ, ಸಂಪನ್ಮೂಲ ವ್ಯಕ್ತಿ ಪಿ.ಜಿ. ಕೊಣ್ಣೂರ, ಅಭಿವೃದ್ಧಿಯಲ್ಲಿ ಮಹಿಳಯರ ಪಾತ್ರ ಕುರಿತು ಮಾತನಾಡಿದರು. ನಿವೃತ್ತ ಶಿಕ್ಷಕ ಬಿ.ಎಂ. ಓಬನ್ನವರ, ಮಹಿಳೆಯರ ಕೈಯಲ್ಲಿನ ಹಣದ ಬಳಕೆ ಮತ್ತು ಪುರುಷರು ದುರ್ಬಳಕೆ ಮಾಡುವ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಯೋಜನಾಧಿಕಾರಿ ಅನಿತಾ ಬಿ, ಜಿವಿಕೆ ಸಮನ್ವಯಾಧಿಕಾರಿ ಸುಮಾವತಿ ಉಪ್ಪಿನ್, ತಾಲೂಕು ಕೃಷಿ ಅಧಿಕಾರಿ ಗೋಪಾಲ, ವಲಯ ಮೇಲ್ವಿಚಾರಕಿ ಗೌರವ್ವ ಮುದುಕವಿ, ಸೇವಾ ಪ್ರತಿನಿಧಿಗಳಾದ ವಾಣಿಶ್ರೀ, ಯಶೋಧ, ಸವಿತಾ, ಮಂಜುಳಾ, ಮಂಗಲ್, ಕಾಂಚನ, ಕಾವೇರಿ, ನೀತಾ ಸೇರಿದಂತೆ ಜನಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.