ಮಹಿಳೆಯರ ಆರ್ಥಿಕ ಅಭಿವೃದ್ಧಿ ಗ್ಯಾರಂಟಿ ಯೋಜನೆಗಳು ಸಹಕಾರಿ-ಸೌಮ್ಯಾ ರೆಡ್ಡಿ

| Published : Oct 29 2024, 12:48 AM IST

ಮಹಿಳೆಯರ ಆರ್ಥಿಕ ಅಭಿವೃದ್ಧಿ ಗ್ಯಾರಂಟಿ ಯೋಜನೆಗಳು ಸಹಕಾರಿ-ಸೌಮ್ಯಾ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಸ್ವಾವಲಂಬಿ ಬದುಕಿಗೆ ಕಾಂಗ್ರೆಸ್ ಕೊಡಮಾಡಿದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಮಹಿಳೆಯರ ಗೌರವವನ್ನು ಹೆಚ್ಚಿಸುವ ಜತೆಗೆ ಆರ್ಥಿಕ ಅಭಿವೃದ್ಧಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.

ಶಿಗ್ಗಾಂವಿ: ಮಹಿಳೆಯರ ಸ್ವಾವಲಂಬಿ ಬದುಕಿಗೆ ಕಾಂಗ್ರೆಸ್ ಕೊಡಮಾಡಿದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಮಹಿಳೆಯರ ಗೌರವವನ್ನು ಹೆಚ್ಚಿಸುವ ಜತೆಗೆ ಆರ್ಥಿಕ ಅಭಿವೃದ್ಧಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಮಹಿಳಾ ಸಮಾವೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಅವರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಹುದು ಎಂಬಂತೆ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅದೇ ರೀತಿ ರಾಜಕೀಯದಲ್ಲೂ ಮುಂದಿದ್ದಾರೆ. ಅವಕಾಶ ನೀಡಿ ಪ್ರಾತಿನಿಧ್ಯ ಕೊಡುವ ಪಕ್ಷ ಕಾಂಗ್ರೆಸ್ ಆಗಿದೆ ಎಂದರು.ನಮಗೆ ಉಪಚುನಾವಣೆಯ ಅವಶ್ಯಕತೆ ಇತ್ತೇ? ಎಂದು ಪ್ರಶ್ನಿಸಿದ ಅವರು, ಜನರು ನಂಬಿ ಬೊಮ್ಮಾಯಿ ಅವರನ್ನು ಗೆಲ್ಲಿಸಿದ್ದರು. ಅವರು ಕೇವಲ ಅಧಿಕಾರಕ್ಕಾಗಿ ಕ್ಷೇತ್ರವನ್ನು ಬಿಟ್ಟು ಹೋದರು. ಹಾಗಾದರೆ ಅವರಿಗೆ ನೀವು ಆಶೀರ್ವಾದ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ಹಗರಣಗಳಲ್ಲಿಯೇ ಕಾಲ ಕಳೆದ ಬಿಜೆಪಿಯವರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು. ಮಹಿಳೆಯರು, ಬಡವರ ಪರ ಪಕ್ಷ ಕಾಂಗ್ರೆಸ್‌ ಆಗಿದ್ದು, ಪಂಚ ಗ್ಯಾರಂಟಿಗಳನ್ನು ಕೊಟ್ಟು ಅದು ವಿಶೇಷವಾಗಿ ಮಹಿಳೆಯರಿಗಾಗಿ ಶಕ್ತಿ ಯೋಜನೆ ತಂದಿದೆ. ಇದು ಬಿಜೆಪಿಯವರಿಂದ ಸಾಧ್ಯವೇ? ಎಂದರು.ನಾವು ₹೨೦೦೦ ಸಾವಿರ ಕೊಟ್ಟರೆ ಬಿಜೆಪಿಯವರು ಅತ್ತೆ ಸೊಸೆಗೆ ಜಗಳ ಹಚ್ಚುತ್ತಿದ್ದಾರೆ ಎಂದು ಹೇಳಿದ್ರು, ಯಾರೂ ಜಗಳ ಆಡಲಿಲ್ಲ, ಇವರೇ ಜಗಳ ಹಚತಾ ಇದಾರೆ, ಬಿಜೆಪಿ ಅವರು ಏನು ಒಳ್ಳೇದ್ ಮಾಡಿದಾರೆ ಹೇಳಿ ಎಂದು ಸಭೆಯಲ್ಲಿ ಮಹಿಳೆಯರನ್ನು ಪ್ರಶ್ನಿಸಿದ ಅವರು, ಮಹಿಳಾ ಮೀಸಲಾತಿಯನ್ನು ಪಾಸ್ ಮಾಡದೇ ಚುನಾವಣೆಗೆ ಬಳಸಿಕೊಳ್ಳುವ ಕಾರ್ಯವಾಯಿತು. ಆದ್ದರಿಂದ ಮಹಿಳೆಯರು ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಿ ಎಂದರು.ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಎಂಎಲ್‌ಎ ಗೆಲ್ಲಿಸಿ, ಮಹಿಳೆಯರ ಸೇವೆ ಮಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದರು.ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ವಿನೋದ ಅಸೂಟಿ, ಬಿ.ಸಿ. ಪಾಟೀಲ, ಮಹಿಳಾ ಮುಖಂಡರಾದ ರಾಜೇಶ್ವರಿ ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ಶಾಂತಮ್ಮ ಶಿರೂರ, ಶೀಲಾ ಪ್ರಕಾಶ, ಜಯಶ್ರೀ ಶಿವಪುರ, ಲಲಿತಾ ಹುಗ್ಗಿ, ಅನಸೂಯಾ ಬಳಿಗಾರ, ಲಕ್ಷ್ಮೀ ಮಾಳಗಿ, ಮಲ್ಲಮ್ಮ ಸೋಮನಕಟ್ಟಿ, ಸುಮಂಗಲಾ ಕಳ್ಳಿಮನಿ, ಶಾಂತವ್ವ ಗುಳೇದ, ತಾರಾಬಾಯಿ ಲಮಾಣಿ, ರಾಜೇಶ್ವರಿ ಲಮಾಣಿ ಇದ್ದರು.