ರಾಜ್ಯ ಸರ್ಕಾರದಿಂದ ಜನರಿಗೆ ತೃಪ್ತಿಪಡಿಸುವ ಕೆಲಸ : ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

| N/A | Published : Feb 11 2025, 12:48 AM IST / Updated: Feb 11 2025, 01:02 PM IST

ರಾಜ್ಯ ಸರ್ಕಾರದಿಂದ ಜನರಿಗೆ ತೃಪ್ತಿಪಡಿಸುವ ಕೆಲಸ : ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿ ಎಂದು ದೇವೇಗೌಡರು, ಕುಮಾರಸ್ವಾಮಿ ಅವರು ಜನರ ಮುಂದೆ ಬಂದು ಹೇಳಲಿ. ಹಿಂದೆ ಇದ್ದ ಸರ್ಕಾರದಲ್ಲಿ ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಿದೆ. ಜನರ ಮುಂದೆ ಹೀಗೆ ಹೇಳಿ ಜನ ತೃಪ್ತಿಪಡಿಸಬಹುದು ತಿಳಿದಿದ್ದಾರೆ.

 ಮಂಡ್ಯ :  ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ. ಇದನ್ನು ಸಹಿಸದೆ ಜೆಡಿಎಸ್‌-ಬಿಜೆಪಿ ಪಕ್ಷಗಳ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ   ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಟಾಂಗ್‌ ನೀಡಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ  ದಿವಾಳಿ ಎಂಬ ವಿರೋಧ ಪಕ್ಷದ ಶಾಸಕರ ಹೇಳಿಕೆಗೆ ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ;

ಯೋಜನೆ ಗಳನ್ನು ನಿಲ್ಲಿಸಲಿ ಎಂದು ದೇವೇಗೌಡರು, ಕುಮಾರಸ್ವಾಮಿ ಅವರು ಜನರ ಮುಂದೆ ಬಂದು ಹೇಳಲಿ. ಹಿಂದೆ ಇದ್ದ ಸರ್ಕಾರದಲ್ಲಿ ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಿದೆ. ಜನರ ಮುಂದೆ ಹೀಗೆ ಹೇಳಿ ಜನ ತೃಪ್ತಿಪಡಿಸಬಹುದು ತಿಳಿದಿದ್ದಾರೆ ಎಂದು ಕುಟುಕಿದರು.

ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಶಾಸಕ ಎಚ್.ಟಿ ಮಂಜು ಆರೋಪಕ್ಕೆ ನಮ್ಮ ಜೊತೆ ಜೆಡಿಎಸ್ ಶಾಸಕ ಎಚ್.ಟಿ ಮಂಜು ಚೆನ್ನಾಗಿದ್ದಾರೆ. ಆ ಪಕ್ಷದಲ್ಲಿದ್ದುಕೊಂಡು ಹೇಳಿಕೆ ನೀಡುವುದು ಸಹಜ. ನಮ್ಮ ಸರ್ಕಾರ ಜಿಲ್ಲೆಯ ಜನರಿಗೆ ತೃಪ್ತಿಪಡಿಸುತ್ತಿದೆಯೇ ಹೊರತು ಶಾಸಕರನ್ನು ತೃಪ್ತಿಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರಕ್ಕೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನುವ ಬೇದ ಭಾವವಿಲ್ಲ. ನಮಗೆ ಎಲ್ಲಾ ಶಾಸಕರು ಒಂದೇ. ಪಕ್ಷಾತೀತವಾಗಿ ಅಭಿವೃದ್ಧಿಗೆ ಸಹಕರಿಸುತ್ತಿದೆ ಎಂದರು.

ಅಂಕನಾಥೇಶ್ವರನಿಗೆ ವಾರ್ಷಿಕ ಪೂಜೆ

ಕಿಕ್ಕೇರಿ: ಬೇವಿನಹಳ್ಳಿ ಅಂಕನಾಥೇಶ್ವರ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ ಹವನಾದಿಗಳು ಶ್ರದ್ಧಾಭಕ್ತಿಯಿಂದ ಜರುಗಿತು.

7ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಹೇಮಾವತಿ ನದಿ ತಟದ ಅಂಕನಾಥೇಶ್ವರ, ಸುಬ್ರಹ್ಮಣ್ಯ, ಗಣಪತಿ, ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆದವು. ಪೂಜಾ ವಿಧಿ ವಿಧಾನಗಳಲ್ಲಿ ಹೋಮ ಹವನಾದಿ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ ನೆರವೇರಿತು.

ಪುಣ್ಯಾಹ್ನ, ಕಳಶ ಸ್ಥಾಪನೆ, ಗಣೇಶ ಪೂಜೆ, ಪರಿವಾರ ದೇವತಾ ಪೂಜೆ, ಸಹಪರಿವಾರ ದೇವತಾ ಸಮೇತ ರುದ್ರ ಹೋಮ, ಮಹಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ಜರುಗಿತು. ಭಕ್ತರು ಹೇಮಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಹಣ್ಣು, ಕಾಯಿ ಅರ್ಪಿಸಿ ಪ್ರಸಾದ ಸ್ವೀಕಾರ ಮಾಡಿದರು.

ದೇಗುಲದ ಉಸ್ತುವಾರಿ ಸಮಿತಿ ಎಂ.ಎಸ್. ಸುಬ್ಬಕೃಷ್ಣ, ಎಂ.ಎಸ್. ರವಿ, ಎಂ.ಎಸ್. ಚಂದ್ರು, ಎಂ.ಎಸ್. ಆನಂದ್, ಎಂ.ಎನ್. ನಂಜುಂಡಸ್ವಾಮಿ, ಅರ್ಚಕ ಶ್ರೀಕಾಂತ್, ಸಾವಿತ್ರಿ, ಭಾಗ್ಯಲಕ್ಷ್ಮೀ, ಸ್ವರ್ಣ, ಭಾರತಿ, ಲಕ್ಷ್ಮೀಇದ್ದರು.