ಸಾರಾಂಶ
ದಾವಣಗೆರೆ ನಗರದ ಹಳೇಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಾನಿ ಮಹಾಂತೇಶ್ ಒಣರೊಟ್ಟಿ ಸಹಕಾರದಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ನೋಟ್ ಬುಕ್ ಮತ್ತು ಜಾಮೀಟ್ರಿ ಬಾಕ್ಸ್‌ಗಳನ್ನು ವಿತರಿಸಲಾಯಿತು. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
- ನೋಟ್ ಬುಕ್, ಜಾಮೀಟ್ರಿ ಬಾಕ್ಸ್ ವಿತರಣೆ
- - - ದಾವಣಗೆರೆ: ನಗರದ ಹಳೇಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಾನಿ ಮಹಾಂತೇಶ್ ಒಣರೊಟ್ಟಿ ಸಹಕಾರದಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ನೋಟ್ ಬುಕ್ ಮತ್ತು ಜಾಮೀಟ್ರಿ ಬಾಕ್ಸ್‌ಗಳನ್ನು ವಿತರಿಸಲಾಯಿತು. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಶೇರ್ ಅಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಮತ್ತು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ನೀವು ಕೂಡ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಹಾಂತೇಶ ಒಣರೊಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಡುಬಡತನ, ಹಸಿವಿನ ಸಂಕಷ್ಟಗಳನ್ನು ಎದುರಿಸಿ ವಿದ್ಯಾಭ್ಯಾಸ ಮಾಡಿದ್ದೇನೆ. ಆ ಸಂಕಷ್ಟಗಳನ್ನು ಎದುರಿಸಿ ಆರ್ಥಿಕವಾಗಿ ಸದೃಢನಾಗಿದ್ದೇನೆ. ಹೀಗಾಗಿ, ಬಡ ವಿದ್ಯಾರ್ಥಿಗಳಿಗೆ ನಿರಂತರವಾಗಿ ನನ್ನ ಕೈಲಾದಷ್ಟು ಸಹಾಯ ಮಾಡುವ ಮೂಲಕ ಇದರಲ್ಲಿ ಸಂತೃಪ್ತಿ ನೋಡಿದ್ದೇನೆ ಎಂದು ತಿಳಿಸಿದರು.ಈ ಸಂದರ್ಭ ಉತ್ತರ ವಲಯ ಸಿಇಒ ಶಿವಲೀಲಾ, ದಾವಣಗೆರೆ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ.ದಾಸರ್, ಮುಖ್ಯೋಪಾಧ್ಯಾಯ ಲೋಕಣ್ಣ ಮಾಡ್ಕೊಂಡ್ರ, ಶಿವಕುಮಾರ್ ತಣಿಗೇರಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೋಡುಬಾಳ ಚನ್ನಬಸಪ್ಪ, ಶಿಕ್ಷಕಿಯರಾದ ಜಯಶ್ರೀ, ಸುಜಾತ, ಆರ್.ಸಿ.ಅನಸೂಯಮ್ಮ, ಸಂಪತ್‌ಕುಮಾರಿ, ಶಿಲ್ಪಾ, ರೂಪಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- - - -1ಕೆಡಿವಿಜಿ36ಃ:ದಾವಣಗೆರೆ ಹಳೇ ಪೇಟೆಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಿಇಒ ಶೇರ್ ಅಲಿ, ದಾನಿ ಮಹಾಂತೇಶ ಒಣರೊಟ್ಟಿ ನೋಟ್ ಪುಸ್ತಕ, ಜಾಮಿಟ್ರಿಗಳನ್ನು ವಿತರಿಸಿದರು.