ಪಿಯುಸಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿ: ವಿಧಾನ ಪರಿಷತ್‌ ಸದಸ್ಯ ಸಂಕನೂರು

| Published : Jan 20 2025, 01:33 AM IST

ಪಿಯುಸಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿ: ವಿಧಾನ ಪರಿಷತ್‌ ಸದಸ್ಯ ಸಂಕನೂರು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವಲ್ಲಿ ಪಾಸಿಂಗ್ ಪ್ಯಾಕೇಜ್ ಅನುಕೂಲವಾಗಲಿದೆ. ಬಡ ವಿದ್ಯಾರ್ಥಿಗಳಿಗೆ ನೆರವಾಗಲು ದೃಷ್ಟಿಯಿಂದ ಜೀವಶಾಸ್ತ್ರ ವೇದಿಕೆ ವತಿಯಿಂದ ಕನಿಷ್ಠ 20ರಿಂದ 30 ದಿನ ನೀಟ್ ತರಬೇತಿಯನ್ನು ಜೀವಶಾಸ್ತ್ರ ಉಪನ್ಯಾಸಕರು ನೀಡಬೇಕು.

ಧಾರವಾಡ:

ಉಪನ್ಯಾಸಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ಕೊಟ್ಟು ಧಾರವಾಡ ಜಿಲ್ಲಾ ಪಿಯುಸಿ ಫಲಿತಾಂಶ ಹೆಚ್ಚಿಸಲು ಮುಂದಾಗಬೇಕೆಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಕರೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಹಾಗೂ ಗುರುದೇವ ವಿಜ್ಞಾನ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಪದವಿ ಪೂರ್ವ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆಯಿಂದ ಜೀವಶಾಸ್ತ್ರ ಕಾರ್ಯಾಗಾರ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಜೀವಶಾಸ್ತ್ರ ವಿಷಯದ ಪ್ರಯೋಗಾಲಯದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವಲ್ಲಿ ಪಾಸಿಂಗ್ ಪ್ಯಾಕೇಜ್ ಅನುಕೂಲವಾಗಲಿದೆ. ಬಡ ವಿದ್ಯಾರ್ಥಿಗಳಿಗೆ ನೆರವಾಗಲು ದೃಷ್ಟಿಯಿಂದ ಜೀವಶಾಸ್ತ್ರ ವೇದಿಕೆ ವತಿಯಿಂದ ಕನಿಷ್ಠ 20ರಿಂದ 30 ದಿನ ನೀಟ್ ತರಬೇತಿ ಕೊಡುವಂತೆ ಜೀವಶಾಸ್ತ್ರ ಉಪನ್ಯಾಸಕರಿಗೆ ಮನವಿ ಮಾಡಿದರು.

ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೊಳಿಸುವಂತೆ ಸದನದಲ್ಲಿ ಸರ್ಕಾರಕ್ಕೆ ಒತ್ತಾಯ ಮತ್ತು ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆ ಭರ್ತಿಗೆ ಒತ್ತಾಯಿಸಲಾಗಿದೆ ಎಂದು ಇದೇ ವೇಳೆ ಸಂಕನೂರು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕು. ಅತ್ಯುತ್ತಮ ಉಪನ್ಯಾಸಕರಾಗಲು ವಿಷಯದ ಮೇಲೆ ಪ್ರಭುತ್ವ, ಬೋಧನಾ ನೈಪುಣ್ಯತೆ ಹಾಗೂ ಭಾಷೆಯ ಮೇಲಿನ ಹಿಡಿತದ ಕುರಿತು ಸಂಕನೂರ ಉಪನ್ಯಾಸಕರಿಗೆ ತಿಳಿಸಿದರು.

ಡಿಡಿಪಿಯು ಸುರೇಶ್ ಕೆ.ಪಿ. ಮಾತನಾಡಿ, ಕಳೆದ ಶೈಕ್ಷಣಿಕ ಸಾಲಿಗಿಂತ ಈ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಸುಧಾರಣೆ ಮಾಡುವಂತೆ ಉಪನ್ಯಾಸಕರಿಗೆ ಸೂಚಿಸಿದರು. ಪ್ರಾಚಾರ್ಯ ಮದನ್ ಇ.ಜಿ. ಅಧ್ಯಕ್ಷತೆ ವಹಿಸಿದ್ದರು. ಜೀವಶಾಸ್ತ್ರ ವೇದಿಕೆಯ ಅಧ್ಯಕ್ಷ ಸೈಯದ್ ಫಯಾಜ್ ಇದ್ದರು. ಮೋಹನ್ ಸಿದ್ಧಾಂತ, ನಿರ್ಮಲ ಅಣ್ಣಿಗೇರಿ, ಶಶಿಕಲಾ ಲಿಗಾಡೆ ಇದ್ದರು.