ಗುರಿ ಮುಟ್ಟುವವರೆಗೆ ಶ್ರಮಿಸಬೇಕು

| Published : Jul 25 2024, 01:20 AM IST

ಸಾರಾಂಶ

ವಿದ್ಯಾರ್ಥಿಗಳು ಕಲಿಕೆಯಲ್ಲಿ ಗುರಿ ಇಟ್ಟುಕೊಳ್ಳಬೇಕು. ಗುರಿ ಮುಟ್ಟುವವರೆಗೆ ಶ್ರಮಿಸಬೇಕು ಅಂದಾಗ ಮಾತ್ರ ಯಶಸ್ವಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ. ಟಿ.ಭೂಪಾಲನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ವಿದ್ಯಾರ್ಥಿಗಳು ಕಲಿಕೆಯಲ್ಲಿ ಗುರಿ ಇಟ್ಟುಕೊಳ್ಳಬೇಕು. ಗುರಿ ಮುಟ್ಟುವವರೆಗೆ ಶ್ರಮಿಸಬೇಕು ಅಂದಾಗ ಮಾತ್ರ ಯಶಸ್ವಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ. ಟಿ.ಭೂಪಾಲನ್‌ ಹೇಳಿದರು.

ಪಟ್ಟಣದ ಆರ್‌.ಎಂ.ಶಹಾ ಪಬ್ಲಿಕ್‌ ಶಾಲೆಯಲ್ಲಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿ ದಿಸೆಯಲ್ಲಿರುವಾಗ ಅಧಿಕಾರಿಯಾಗಬೇಕೆಂಬ ಕನಸು ಹೊತ್ತುಕೊಂಡು ವಿದ್ಯಾಭ್ಯಾಸ ಮಾಡಿದ್ದೇನೆ. ಶಾಲೆಯಲ್ಲಿ ಶಿಸ್ತನ್ನು ರೂಢಿಸಿಕೊಂಡು ಗುರುಗಳು ಹೇಳಿಕೊಟ್ಟ ಪಾಠ, ಪ್ರವಚನವನ್ನು ಮನಸಾಪೂರ್ವಕವಾಗಿ ಅಭ್ಯಾಸಿಸಿ, ಶಿಕ್ಷಕರು ಹಾಕಿದ ದಾರಿಯಲ್ಲಿ ಸಾಗಿದಕ್ಕಾಗಿ ಇಂದು ನಾನು ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಗುರುಗಳ ಬಗ್ಗೆ ಭಕ್ತಿ, ಪಾಠ, ಪ್ರವಚನದ ಮೇಲೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಹಾಗೂ ನಾಯಕತ್ವದ ಗುಣಗಳು ಬೆಳೆಯಬೇಕಾದರೇ ಶಾಲೆಯಲ್ಲಿ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳು,ಶಾಲಾ ಸಂಸತ್ತಿನ ರಚನೆಯಂತಹ ಕಾರ್ಯಕ್ರಮವು ಪ್ರೇರಣೆಯಾಗುತ್ತದೆ. ಅಲ್ಲದೇ ದೇಶಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಪಾಲಕರು ಸಹ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಲಿಕೆಗೆ ಉತ್ತೇಜಿಸಬೇಕು ಎಂದು ತಿಳಿಸಿದರು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯಲ್ಲಿ ಪರಿವರ್ತನೆಯನ್ನು ತರಬೇಕಾದರೇ ಪ್ರೇಮ ಮತ್ತು ಅಹಿಂಸಾ ತತ್ವವನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸಿ ಅಬೀದ್ ಗದ್ಯಾಳ್, ತಾಲೂಕು ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಆಡಳಿತ ಮಂಡಳಿಯ ಸದಸ್ಯರಾದ ಅಭಿಜಿತ್ ಶಹಾ, ರಾಜಶೇಖರ ದೋಶಿ, ಸಿ.ಆರ್.ಶಹಾ, ಸುನೀಲ ಕುಲಕರ್ಣಿ,ನೀರಜಾಕ್ಷಿ ಕೆ, ಕಾರ್ಯದರ್ಶಿ ಮಹೇಶ ಶಹಾ, ಸಂಸ್ಥೆಯ ಆಡಳಿತಾಧಿಕಾರಿ ಕಲ್ಪನಾ ಶಹಾ, ಶೈಕ್ಷಣಿಕ ಮಾರ್ಗದರ್ಶಕರಾದ ನಜೀರ್ ಹುಂಡೇಕರ್, ಎಫ್.ಕೆ.ದೋಶಿ, ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಡಾ.ದಯಾನಂದ ದಳವಾಯಿ, ಶಾಲಾ ವಿಭಾಗದ ಪ್ರಾಚಾರ್ಯ ಪ್ರಕಾಶ ಪಾಟೀಲ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಾಲಾ ನೂತನ ಸಂಸತ್ತಿಗೆ ನಾಯಕನಾಗಿ ಬಾಹುಬಲಿ ಪಂಡಿತ ಮತ್ತು ನಾಯಕಿಯಾಗಿ ವಂಶಿಕಾ ಅಂದೇವಾಡಿ, ಚಾಲುಕ್ಯ, ಗಂಗಾ, ಮೌರ್ಯ ಮತ್ತು ರಾಷ್ಟ್ರಕೂಟ ತಂಡಗಳ ನಾಯಕ ಮತ್ತು ಉಪನಾಯಕರಿಗೆ ಪದಗ್ರಹಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಚಾಲುಕ್ಯ, ಗಂಗಾ, ಮೌರ್ಯ ಮತ್ತು ರಾಷ್ಟ್ರಕೂಟ ತಂಡಗಳು ನಡೆಸಿಕೊಟ್ಟ ಸಾಮೂಹಿಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಕುಮಾರ ಸಂದೀಪ್ ನಾಗೋಡ್ ಹಾಗೂ ಕುಮಾರಿ ಚಿನ್ಮಯಿ ಕುಮಾನಿ ನಿರೂಪಿಸಿದರು, ಕುಮಾರಿ ಸುಕನ್ಯ ನಾಗೋಡ ವಂದಿಸಿದರು.

ಆರ್‌.ಎಂ.ಶಹಾ ಪಬ್ಲಿಕ್‌ ಶಾಲೆಯು ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೌಕರ್ಯಗಳನ್ನು ಹೊಂದಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ.

-ಟಿ.ಭೂಪಾಲನ್‌, ಜಿಲ್ಲಾಧಿಕಾರಿ.ಮಕ್ಕಳಲ್ಲಿ ಆತ್ಮ ಸ್ಥೈರ್ಯವನ್ನು ತುಂಬಬೇಕು. ಮಕ್ಕಳು ತಮ್ಮ ಶೈಕ್ಷಣಿಕ ಗುರಿಯನ್ನು ತಲುಪಲು, ಮಕ್ಕಳಲ್ಲಿ ವಿನಯ, ಶಿಸ್ತು-ಸಂಯಮ ಬೆಳೆಸಲು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವು ಪ್ರಮುಖ ಪಾತ್ರವಹಿಸುತ್ತದೆ.

-ಡಿ.ಆರ್.ಶಹಾ,

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು.