ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

| Published : Sep 16 2024, 01:54 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಹಿಡಿದಿದೆ. ಎಲ್ಲ ಸದಸ್ಯರ ವಿಶ್ವಾಸ ಪಡೆದುಕೊಳ್ಳುವ ಮೂಲಕ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷ, ಉಪಾಧ್ಯಕ್ಷರು ಶ್ರಮಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಗುರು ತಾರನಾಳ ಸಲಹೆ ನೀಡಿದರು

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಹಿಡಿದಿದೆ. ಎಲ್ಲ ಸದಸ್ಯರ ವಿಶ್ವಾಸ ಪಡೆದುಕೊಳ್ಳುವ ಮೂಲಕ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷ, ಉಪಾಧ್ಯಕ್ಷರು ಶ್ರಮಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಗುರು ತಾರನಾಳ ಸಲಹೆ ನೀಡಿದರು.

ಪುರಸಭೆ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್‌ ಘಟಕದಿಂದ ತಾಲೂಕು ಅಧ್ಯಕ್ಷ ಗುರು ತಾರನಾಳ ನೇತೃತ್ವದಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ ಮಾಡಿ ಕಚೇರಿಯಲ್ಲಿ ಸಿಹಿ ತಿನ್ನಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ನಮ್ಮದೇ ಸರ್ಕಾರ ಇರುವುದರಿಂದ ಶಾಸಕರು ಪುರಸಭೆಗೆ ಹೆಚ್ಚೆಚ್ಚು ಅನುದಾನ ತರಲಿದ್ದಾರೆ. ಇನ್ನು ಮುಂದೆ ಕೇವಲ 12 ತಿಂಗಳು ಮಾತ್ರ ಒಳ್ಳೆಯ ಆಡಳಿತ ನಿರೀಕ್ಷಿಸಿದ್ದಾರೆ. ಅದರಂತೆ ಈಗಾಗಲೇ ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಉದ್ಯಾನಗಳ ಅಭಿವೃದ್ಧಿ, ರಸ್ತೆಗಳ ನಿರ್ಮಾಣ, ಚರಂಡಿ ಸ್ವಚ್ಛತೆ ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಮೂಲಕ ಶಾಸಕ ನಾಡಗೌಡರ ಹೆಸರಿಗೆ ಕಳಂಕ ಬಾರದಂತೆ ಆಡಳಿತ ನಡೆಸುವಂತೆ ಸೂಚ್ಯವಾಗಿ ಹೇಳಿದರು.

ಈ ವೇಳೆ ಸಂಗಮೇಶ ಬಿರಾದಾರ(ಜಿಟಿಸಿ), ವೈ.ಎಚ್‌.ವಿಜಯಕರ, ಶ್ರೀಕಾಂತ ಚಲವಾದಿ, ರುದ್ರಗೌಡ ಅಂಗಡಗೇರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ರಫೀಕ ಶಿರೋಳ, ಸಿಕಂದರ್ ಜಾನ್ವೇಕರ, ಉದ್ಯಮಿ ಗಣೇಶ ಅನ್ನಗೋನಿ, ಸುರೇಶಗೌಡ ಪಾಟೀಲ, ಗೋಪಿ ಮಡಿವಾಳರ, ರಾಜುಗೌಡ ರಾಯನಗೌಡ, ಸರಸ್ವತಿ ಪೀರಾಪೂರ, ಬೀರಪ್ಪ ಯರಝರಿ, ಅಪ್ಪು ದೇಗಿನಾಳ, ಶರಣು ಚಲವಾದಿ, ಲಕ್ಷಣ ಚವ್ಹಾಣ, ಚಪ್ಪರಬಂದ, ಬಾಪು ಢವಳಗಿ, ಸಂಗಣ್ಣ ಮೇಲಿನಮನಿ, ಮುನ್ನಾ ಮಕಾನದಾರ, ಸಂಗಮೇಶ ಚಲವಾದಿ, ಸಂತೋಷ ನಾಯ್ಕೋಡಿ, ನಾಗೇಶ ಭಜಂತ್ರ, ರಾಮು ರಾಠೋಡ, ಪುರಸಭೆ ಸದಸ್ಯರಾದ ಶಿವು ಶಿವಪುರಿ, ವಿರೇಶ ಹಡಲಗೇರಿ, ಯಲ್ಲಪ ನಾಯಕ ಇತರರು ಇದ್ದರು.---------------