ಪ್ರತಿಯೊಬ್ಬರು ತಮ್ಮ ಬಾಲ್ಯದಲ್ಲಿ ವಿದ್ಯೆಕೊಟ್ಟ ಗುರುಗಳನ್ನು ಸ್ಮರಿಸಬೇಕು. ಬಾಲ್ಯದಲ್ಲಿ ಅಕ್ಷರ ಕಲಿಸುವ ಗುರುಗಳ ಮಕ್ಕಳ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತಾರೆ. ಜೊತೆಗೆ ಸಮಾಜವು ಸಹ ಶಿಕ್ಷಕರನ್ನು ಗೌರವಿಸುತ್ತಾರೆ. ಅದೇ ರೀತಿ ಶಿಕ್ಷಕರು ಸಹ ವೃತ್ತಿ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಿಕ್ಷಕ ವೃತ್ತಿ ಪವಿತ್ರವಾದುದ್ದು. ಅದಕ್ಕೆ ಗೌರವ ತರುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.ತಾಲೂಕಿನ ಬೇಬಿಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕ ಎ.ಎಂ.ಕೃಷ್ಣೇಗೌಡರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಬಾಲ್ಯದಲ್ಲಿ ವಿದ್ಯೆಕೊಟ್ಟ ಗುರುಗಳನ್ನು ಸ್ಮರಿಸಬೇಕು. ಬಾಲ್ಯದಲ್ಲಿ ಅಕ್ಷರ ಕಲಿಸುವ ಗುರುಗಳ ಮಕ್ಕಳ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತಾರೆ. ಜೊತೆಗೆ ಸಮಾಜವು ಸಹ ಶಿಕ್ಷಕರನ್ನು ಗೌರವಿಸುತ್ತಾರೆ. ಅದೇ ರೀತಿ ಶಿಕ್ಷಕರು ಸಹ ವೃತ್ತಿ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಕೃಷ್ಣೇಗೌಡರು ಸಹ ಉತ್ತಮ ಸೇವೆಸಲ್ಲಿಸುವ ಮೂಲಕ ವೃತ್ತಿ ಗೌರವ ಹೆಚ್ಚಿಸಿ ಸಮಾಜದಲ್ಲಿ ಪ್ರೀತಿ, ಗೌರವ ಸಂಪಾದನೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪುತ್ತಿವೆ. ಶಾಲೆಗಳು ಮುಚ್ಚಿದ್ದರೆ ಮುಂದೆ ಬಡವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಲಿದೆ. ಶಿಕ್ಷಕರು ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.ನಿವೃತ್ತ ಶಿಕ್ಷಕ ಕೃಷ್ಣೇಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಪುಸ್ತಕದ ಪಠ್ಯದ ಜತೆಗೆ ಮೌಲ್ಯಯುತ ಶಿಕ್ಷಣ ಕೊಡುವ ಅಗತ್ಯವಿದೆ. ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಬೆಳೆಸಿಕೊಂಡು ಮಕ್ಕಳಿಗೆ ಪಾಠಪ್ರವಚನ ಮಾಡಬೇಕು ಎಂದರು.
ಪರಿಸರ ಪ್ರೇಮಿ ಲವಕುಮಾರ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಜ್ಞಾನದೇಗಲು ಹಾಗೂ ನ್ಯಾಯ ದೇಗಲು ಎರಡು ಪ್ರಮುಖವಾಗಿವೆ. ಜ್ಞಾನದೇಗುಲು ನಮಗೆ ವಿದ್ಯೆ, ಬುದ್ಧಿಕಲಿಸಿ ಸಂಸ್ಕಾರ ಬೆಳೆಸಿದರೆ ನ್ಯಾಯದೇಗುಲ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ತೋರಿಸುತ್ತದೆ ಎಂದು ಬಣ್ಣಿಸಿದರು.ಇದೇ ವೇಳೆ ನಿವೃತ್ತ ಶಿಕ್ಷಕ ಎ.ಎಂ.ಕೃಷ್ಣೇಗೌಡ, ಪತ್ನಿ ಶಶಿಕಲಾ ಅವರನ್ನು ಅಭಿನಂದಿಸಲಾಯಿತು. ಸಹಕಾರಿ ಯೂನಿಯನ್ ಜಿಲ್ಲಾ ರ್ನಿದೇರ್ಶಕ ರಾಮಕೃಷ್ಣೇಗೌಡ, ಉಪನ್ಯಾಸಕ ಮಹದೇವಪ್ಪ, ಬಿಆರ್‌ಸಿ ಪ್ರಕಾಶ್, ಅರಳಕುಪ್ಪೆ ನಾಗರಾಜು, ಸಿದ್ದಲಿಂಗದೇವರು, ಶ್ಯಾದನಹಳ್ಳಿ ಚಲುವರಾಜು, ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ್, ಚಂದ್ರಶೇಖರ್, ಸ.ನೌ.ಸ.ಅಧ್ಯಕ್ಷ ಕೆಂಪೇಗೌಡ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಮಹದೇವಪ್ಪ, ಬೇಬಿಸಿದ್ದಪ್ಪ, ಸಿದ್ದರಾಜು, ಬಿ.ಪಿ.ರಾಜು ಸೇರಿದಂತೆ ಹಲವರು ಇದ್ದರು.