ಜ್ಞಾನ ಯೋಗಾಶ್ರಮದಲ್ಲಿ ಯಾರು ಬೆಳೆಯುತ್ತಾರೆ ಅವರಿಗೆ ಯಾವುದು ಕಷ್ಟವಲ್ಲ, ಮನುಷ್ಯ ನಿರಂತರವಾಗಿ ನಡೆಯಬೇಕು. ಕುಡಿದು ಕುಪ್ಪಳಿಸಿ ಹೊಸ ವರ್ಷದ ಅಚರಣೆ ಮಾಡುವವರ ಮಧ್ಯೆ ನಿರಾಮಯ ಫೌಂಡೇಶನ್ ಅವರ ಸದ್ಭಾವನಾ ಪಾದಯಾತ್ರೆಯ ಮೂಲಕ ಹೊಸ ಜಾಗೃತಿ ಮೂಡಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಸದಾಶಿವಾನಂದ ಶ್ರೀ ಹೇಳಿದರು.

ಕುಂದಗೋಳ:

ಕೆಲಸವೆಂಬುದು ಮತ್ತೊಬ್ಬರು ತಿದ್ದದಂತಿರಲಿ. ಇದು ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಗದಗ ಶಿವಾನಂದ ಬ್ರಹ್ಮಮಠದ ಸದಾಶಿವಾನಂದ ಶ್ರೀ ಹೇಳಿದರು.

ತಾಲೂಕಿನ ಗುಡಗೇರಿ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನ ಆವರಣದಲ್ಲಿ ಕಲ್ಪತರು ದಿನದ ಅಂಗವಾಗಿ ನಿರಾಮಯ ಫೌಂಡೇಶನ್ ವತಿಯಿಂದ ಕಳಸದ ಗುರು ಗೋವಿಂದ ಭಟ್ಟರ ಸನ್ನಿಧಾನದಿಂದ ಶಿಷ್ಯ ಶಿಶುನಾಳ ಶರೀಫರ ಸನ್ನಿಧಿ ವರೆಗೆ ಹಮ್ಮಿಕೊಂಡಿದ್ದ 5ನೇ ವರ್ಷದ ಸದ್ಭಾವನಾ ಪಾದಯಾತ್ರೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜ್ಞಾನ ಯೋಗಾಶ್ರಮದಲ್ಲಿ ಯಾರು ಬೆಳೆಯುತ್ತಾರೆ ಅವರಿಗೆ ಯಾವುದು ಕಷ್ಟವಲ್ಲ, ಮನುಷ್ಯ ನಿರಂತರವಾಗಿ ನಡೆಯಬೇಕು. ಕುಡಿದು ಕುಪ್ಪಳಿಸಿ ಹೊಸ ವರ್ಷದ ಅಚರಣೆ ಮಾಡುವವರ ಮಧ್ಯೆ ನಿರಾಮಯ ಫೌಂಡೇಶನ್ ಅವರ ಸದ್ಭಾವನಾ ಪಾದಯಾತ್ರೆಯ ಮೂಲಕ ಹೊಸ ಜಾಗೃತಿ ಮೂಡಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಮಾಜಿ ಶಾಸಕ ಪಿ. ರಾಜೀವ ಮಾತನಾಡಿ, ನಿರಾಮಯ ಫೌಂಡೇಶನ್ ಸ್ವಲ್ಪ ಮಣ್ಣು, ಒಂದು ಹನಿ ನೀರು ಬಯಸಿ ದೊಡ್ಡ ಅರಳಿ ಮರದಂತೆ ಬೆಳೆಯುತ್ತಿದೆ. ಪರಸ್ಪರ ಸಮಾಜಗಳು, ಮನಸ್ಸುಗಳು ಕೂಡಿ ಮೋಕ್ಷದ ಕಡೆಗೆ ಸಾಗಲು ಜೀವನದಲ್ಲಿ ಸದ್ಭಾವನಾದಂತಹ ಕಾರ್ಯಕ್ರಮ ನಡೆಯಬೇಕು. ಇದಕ್ಕೆ ಗುಡಗೇರಿ ಗ್ರಾಮ ತ್ರಿವೇಣಿ ಸಂಗಮದಂತೆ ಆಗಿದೆ ಎಂದು ಹೇಳಿದರು.

ನಿರಾಮಯ ಫೌಂಡೇಶನ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ್ ಬಾಳಿಕಾಯಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಲಿಂ. ಸಿದ್ದೇಶ್ವರ ಶ್ರೀಗಳ 3ನೇ ವರ್ಷದ ಪುಣ್ಯಸ್ಮರಣೆ ಹಾಗೂ ಈಚೆಗೆ ನಿಧನರಾದ ಗ್ರಾಮದ ಜಿಪಂ ಮಾಜಿ ಸದಸ್ಯ ವೆಂಕನಗೌಡ ಹಿರೇಗೌಡ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕುಂದಗೋಳ ಪಟ್ಟಣದ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಅತ್ತಿಗೇರಿ ಶ್ರೀಗುರು ಮಲ್ಲಿಕಾರ್ಜುನ್ ಆಶ್ರಯದ ಸ್ವಾಮಿ ಅದ್ವೈತಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿರೂಪಾಕ್ಷಗೌಡ ರಂಗನಗೌಡ್ರ, ಎಸ್.ಎನ್. ಬೆಂಗೇರಿ, ವಿಜಯಕುಮಾರ್ ಹಾಲಿ, ಎಸ್.ಎಸ್. ರಟ್ಟಿಗೇರಿಮಠ, ಗುರುನಗೌಡ ಹಿರೇಗೌಡ್ರ ಸೇರಿ ಹಲವರಿದ್ದರು.