ಸಾರಾಂಶ
ಅಳಿವಿನ ಅಂಚಿನಲ್ಲಿರುವ ಈ ಗ್ರಾಮೀಣ ಪ್ರದೇಶದ ಅಪರೂಪದ ಕ್ರೀಡೆಗಳು ನಮ್ಮ ಪೂರ್ವಜರ ಕೊಡುಗೆಗಳಾಗಿವೆ. ಅವುಗಳನ್ನು ನಮ್ಮ ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಕೆಲಸ ಮಾಡಬೇಕು. ನಾವೆಲ್ಲರೂ ಚಿಕ್ಕ ವಯಸ್ಸಿನಿಂದಲೂ ಲಗೋರಿ, ಚಿನ್ನಿದಾಂಡು, ಕಬಡ್ಡಿ , ಗೋಲಿ, ಮರಕೋತಿ, ಬುಗುರಿ, ಹರಳುಮಣೆ, ಚೌಕಾಬಾರ, ಅಣ್ಣೆಕಲ್ಲು ಅನೇಕ ಆಟಗಳನ್ನು ಆಡಿದ ಪರಿಣಾಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತನಾಗಿದ್ದೇನೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅಳಿವಿನ ಅಂಚಿನಲ್ಲಿರುವ ಪೂರ್ವಜರು ನೀಡಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಮುಂದಿನ ತಲೆಮಾರಿಗೂ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ತಾಲೂಕಿನ ಸೋಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಮತ್ತು ರಾಜ್ಯ ಲಗೋರಿ ಅಸೋಷಿಯೇಷನ್ ಮತ್ತು ಜಿಲ್ಲಾ ಲಗೋರಿ ಅಸೋಷಿಯೇಷನ್ ಸಹಯೋಗದಿಂದ ರಾಜ್ಯ ಮಟ್ಟದ ಲಗೋರಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಚಿಕ್ಕ ವಯಸ್ಸಿನಿಂದಲೂ ಲಗೋರಿ, ಚಿನ್ನಿದಾಂಡು, ಕಬಡ್ಡಿ , ಗೋಲಿ, ಮರಕೋತಿ, ಬುಗುರಿ, ಹರಳುಮಣೆ, ಚೌಕಾಬಾರ, ಅಣ್ಣೆಕಲ್ಲು ಅನೇಕ ಆಟಗಳನ್ನು ಆಡಿದ ಪರಿಣಾಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತನಾಗಿದ್ದೇನೆ ಎಂದರು.ಅಳಿವಿನ ಅಂಚಿನಲ್ಲಿರುವ ಈ ಗ್ರಾಮೀಣ ಪ್ರದೇಶದ ಅಪರೂಪದ ಕ್ರೀಡೆಗಳು ನಮ್ಮ ಪೂರ್ವಜರ ಕೊಡುಗೆಗಳಾಗಿವೆ. ಅವುಗಳನ್ನು ನಮ್ಮ ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಸನ ಡಿಡಿಪಿಐ ಜವರೇಗೌಡ, ತಹಸೀಲ್ದಾರ್ ನಿಸರ್ಗಪ್ರಿಯ, ಆರ್‌ಟಿಒ ಮಲ್ಲಿಕಾರ್ಜುನ್, ಲಗೋರಿ ಫೆಡರೇಷನ್ ಆಫ್ ಇಂಡಿಯಾ ಸಂಸ್ಥಾಪಕ ದೊಡ್ಡಣ್ಣ ಬರಮೇಲು, ಶಿಕ್ಷಕರ ಸಂಘದ ಉಪಾಧ್ಯಕ್ಷ, ಎಲ್.ಎಸ್.ಧರ್ಮಪ್ಪ, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಕಟ್ರಯೋಗೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ನಾಗರಾಜು, ಜಿಲ್ಲಾ ಲಗೋರಿ ಅಸೋಷಿಯೇಷನ್ ಅಧ್ಯಕ್ಷ ಜಿ.ಜೆ.ತುಳಸಿರಾಮ, ತಾಲೂಕು ಅಧ್ಯಕ್ಷ ಜಿ.ಎಸ್.ಮಂಜು, ಗೌರವಾದ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇಶ್ ಕುಮಾರ್, ಖಜಾಂಚಿ ಕೆ.ಟಿ.ಹೇಮಣ್ಣ, ಉಪಾದ್ಯಕ್ಷ ಅಣ್ಣಯ್ಯ, ಬಿ.ಆರ್.ರಮೇಶ, ಎಂ.ನೇತ್ರಾವತಿ, ಸಹಕಾರ್ಯದರ್ಶಿ ಶಿವಪ್ರಕಾಶ್, ಗೀತ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಮಹದೇವಸ್ವಾಮಿ, ಬೋಜೇಗೌಡ, ವಿಮಲ, ಚನ್ನಕೇಶವ, ಮಂಜುನಾಥ, ಸುರೇಶ, ಪ್ರೇಮ್‌ಕುಮಾರ್ ಇದ್ದರು.