ಕುಷ್ಟಗಿ: ಜನರು ಗುಳೆ ಹೋಗುವದನ್ನು ತಡೆಯುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತಿದ್ದು, ಕೂಲಿಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ ಹೇಳಿದರು.

ತಾಲೂಕಿನ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಕಿಲ್ಲಾರಹಟ್ಟಿ ಗ್ರಾಮದ ಕೆರೆ ಅಂಗಳದಲ್ಲಿ ನಡೆದ ರೋಜಗಾರ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನರೇಗಾದಡಿಯಲ್ಲಿ ನಡೆಯುವ ಕೆಲಸದ ಸ್ಥಳದಲ್ಲಿ ಕುಡಿವ ನೀರು ಮತ್ತು ಮೂಲ ಸೌಕರ್ಯ ಒದಗಿಸಲಾಗುವುದು. ಆರ್ಥಿಕತೆಯ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಂಕ್ರಪ್ಪ ಮಂಕಣಿ ಮಾತನಾಡಿ, ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಕುರಿತು ಮಾಹಿತಿ ನೀಡಿದರು.

ತದ ನಂತರ ಗುಮಗೇರಿ, ಹಿರೇಮನ್ನಾಪುರ, ಜುಮಲಾಪುರ ಗ್ರಾಪಂಗಳಿಗೆ ಭೇಟಿ ನೀಡಿ ಕೂಲಿಕಾರರ ಕೆಲಸದ ಬೇಡಿಕೆ ಪಡೆದು ಪಿಡಿಒಗೆ ಕೆಲಸ ನೀಡಲು ತಿಳಿಸಲಾಯಿತು.


ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಶಿವಲಿಂಗಪ್ಪ, ಹನುಮಗೌಡ, ಸಿದ್ದಯ್ಯ, ಸುನಂದಾ, ದೇವೇಂದ್ರಪ್ಪ, ಕಾಯಕ ಬಂಧುಗಳಾದ ಶಿವಪುತ್ರ, ತಿಪ್ಪಮ್ಮ, ಮಾನನಗೌಡ, ಹನುಮೇಶ್, ಹನುಮಂತ ಆಂಜನೇಯ ಶಿಲ್ಪಾ ಡೊಳ್ಳಿನ್, ಕಾಯಕ ಬಂಧುಗಳು ನೂರಾರು ಜನ ಕೂಲಿಕಾರರು ಹಾಜರಿದ್ದರು.