ಸಾರಾಂಶ
ಗ್ರಾಮೀಣ ಭಾಗದ ಜನರಿಗೆ ಕಾಲಮಿತಿಯಲ್ಲಿ ಸರ್ಕಾರ ಸೇವೆ ನೀಡಲು ನಾಡ ಕಚೇರಿಯ ಕೆಲಸವನ್ನು ಚುರುಕುಗೊಳಿಸಲಾಗುವುದು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಗ್ರಾಮೀಣ ಭಾಗದ ಜನರಿಗೆ ಕಾಲಮಿತಿಯಲ್ಲಿ ಸರ್ಕಾರ ಸೇವೆ ನೀಡಲು ನಾಡ ಕಚೇರಿಯ ಕೆಲಸವನ್ನು ಚುರುಕುಗೊಳಿಸಲಾಗುವುದು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಹೇಳಿದರು.ಪಟ್ಟಣದ ನಾಡಕಚೇರಿ ಎಜಿಎಸ್‌ಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ರೈತರು ಆಯಾ ನಾಡಕಚೇರಿಯಲ್ಲಿ ಪಹಣೆ ಪಡೆಯುವುದನ್ನು ಸರಳೀಕರಿಸಿ, ಎಲ್ಲ ಕಡೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪಹಣಿಗಳಲ್ಲಿನ ದೋಷ ಸರಿಪಡಿಸಲಾಗಿದೆ. ನಾಡ ಕಚೇರಿಯಲ್ಲಿನ ಅಂತರ್ಜಾಲ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಸಿಬ್ಬಂದಿಗಳ ಹಾಜರಾತಿ ಹಾಗೂ ವಿವಿಧ ಸೌಲಭ್ಯ ಕೋರಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಪ್ರಗತಿಯನ್ನು ಪರೀಶಿಲಿಸಿದರು. ಸಾರ್ವಜನಿಕರಿಗಾಗಿ ಒದಗಿಸುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವಿವಿಧ ಕಡತಗಳನ್ನು ಪರಿಶೀಲಿಸಿದ ಅವರು ಕಾಲಮಿತಿಯೊಳಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕೆಂದು ನಿರ್ದೇಶನ ನೀಡಿದರು.ಉಪತಹಸೀಲ್ದಾರ್ ಸತೀಶ ಬೇವೂರ, ಗ್ರಾಮ ಆಡಳಿತಾಧಿಕಾರಿ ಆಯಿಷಾ ಬೇಗಂ, ಗ್ರಾಮಲೆಕ್ಕಾಧಿಕಾರಿ ಅಪ್ಪಾಸಿ ಸೂರ್ಯವಂಶಿ ನಾಡಕಚೇರಿ ಸಿಬ್ಬಂದಿ ವರ್ಗ ಇದ್ದರು.