ಒಳಗಿನ ಮನಸ್ಸು ಶುದ್ಧವಾಗಿಟ್ಟುಕೊಂಡು ಕೆಲಸ ಮಾಡಿ

| Published : Jul 16 2025, 12:45 AM IST

ಸಾರಾಂಶ

ನಮ್ಮ ಒಳಗಿನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ತಿಳಿಸಿದರು. ಸೂರ್ಯನ ಬೆಳಕಿನಿಂದಲೇ ದಿನದ ಎಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ನಮಗೆ ಸೂರ್ಯ ಚಂಧ್ರ ಬಂದು ಹೋಗುವುದರ ಬಗೆ ಗಮನವಿಲ್ಲ. ಯಾವುದು ಬಂದು ಬೇಗ ಹೊರಟು ಹೋಗುತ್ತದೆ ಅದರ ಬಗ್ಗೆ ಗಮನ ಹೆಚ್ಚು ಇರುತ್ತದೆ ಅಶಾಶ್ವತೆ ಕಡೆ ನಮ್ಮ ಮನಸ್ಸು,ಭಾವ ಇರುತ್ತದೆ ಎಂದರು. ಶಾಶ್ವತ ಇರುವ ಕಡೆ ಗಮನವೊಂದೆಯಲ್ಲ ನಮ್ಮ ಭಾವ ಇರಬೇಕು. ಆದರೇ ಇದನ್ನ ಭಾವಿಸುವುದು ಯಾರು? ನಮ್ಮ ಒಳಗಿನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಮ್ಮ ಒಳಗಿನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕಂದಲಿ ಗ್ರಾಮ ಪಂಚಾಯಿತಿ ಎತ್ತಿನಕಟೆ ಗ್ರಾಮದಲ್ಲಿ ಗುರುಪೂರ್ಣೀಮ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಾದಪೂಜೆ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿ, ನಮ್ಮ ಶಿಸ್ತಿಗೆ ದಿವ್ಯ ನೆಲೆ ಇರುತ್ತದೆ. ಜಗತ್ತಿನಲ್ಲಿ ಯಾವುದು ಶಾಶ್ವತವಾಗಿದಿಯೋ, ಶಾಶ್ವತವಾಗಿಲ್ಲವೊ ಅದಕ್ಕೆ ಹೆಚ್ಚು ಮಹತ್ವವಿಲ್ಲ. ಸೂರ್ಯ ಇಲ್ಲದೇ ಭೂಮಿ ಇಲ್ಲ. ಭೂಮಿ ಇಲ್ಲದೇ ನಾವು ಇಲ್ಲ. ಸೂರ್ಯನ ಬೆಳಕಿನಿಂದಲೇ ದಿನದ ಎಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ನಮಗೆ ಸೂರ್ಯ ಚಂಧ್ರ ಬಂದು ಹೋಗುವುದರ ಬಗೆ ಗಮನವಿಲ್ಲ. ಯಾವುದು ಬಂದು ಬೇಗ ಹೊರಟು ಹೋಗುತ್ತದೆ ಅದರ ಬಗ್ಗೆ ಗಮನ ಹೆಚ್ಚು ಇರುತ್ತದೆ ಅಶಾಶ್ವತೆ ಕಡೆ ನಮ್ಮ ಮನಸ್ಸು,ಭಾವ ಇರುತ್ತದೆ ಎಂದರು. ಶಾಶ್ವತ ಇರುವ ಕಡೆ ಗಮನವೊಂದೆಯಲ್ಲ ನಮ್ಮ ಭಾವ ಇರಬೇಕು. ಆದರೇ ಇದನ್ನ ಭಾವಿಸುವುದು ಯಾರು? ನಮ್ಮ ಒಳಗಿನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ತಿಳಿಸಿದರು.

ಜೆಡಿಎಸ್ ಮುಖಂಡ ಮತ್ತು ಕಂದಲಿ ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಗುರುಪೂರ್ಣಿಮೆ ಪ್ರಯುಕ್ತ ನಮ್ಮ ಗ್ರಾಮಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ ನಿರ್ಮಾಲನಂದನಾಥ ಮಹಾಸ್ವಾಮೀಜಿ ಆಗಮಿಸಿದ್ದು, ಪಾದ ಪೂಜೆ ಮಾಡಲಾಗಿದೆ. ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಎಲ್ಲಾರಿಗೂ ಆಶೀರ್ವಾದ ಮಾಡಿದ್ದಾರೆ. ಚಾತುರ್ಮಾಸದ ಹಿನ್ನಲೆಯಲ್ಲಿ ನಮ್ಮ ಗ್ರಾಮಕ್ಕೆ ಆಗಮಿಸಿದ್ದಾರೆ. ಸ್ವಾಮಿಗಳು ಆಗಮಿಸಿರುವುದಕ್ಕೆ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದೆ ಎಂದರು. ಗ್ರಾಮದ ಎಲ್ಲರಿಗೂ ಅನ್ನಸಂತರ್ಪಣೆ ನೆರವೇರಿಸಲಾಗಿದೆ. ಸ್ವಾಮೀಜಿಗಳ ಆಗಮನದಿಂದ ನಮ್ಮ ಗ್ರಾಮದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಕಂದಲಿ ಗ್ರಾಮ ಪಂಚಾಯಿತಿ ಎತ್ತಿನಕಟ್ಟೆ ಗ್ರಾಮಸ್ಥರು, ಕಂದಲಿ ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ, ಕೃಷಿ ಪತ್ತಿನ ಸ್ವ- ಸಹಾಯ ಸಂಘ, ತಣ್ಣೀರುಹಳ್ಳ ಅಧ್ಯಕ್ಷ, ಎಬಿಜೆ ಗ್ರೂಪ್ಸ್ ಮಾಲೀಕರು ಇತರರು ಉಪಸ್ಥಿತರಿದ್ದರು.