ಸಾರಾಂಶ
ಕಾರ್ಮಿಕರ ಹಿತರಕ್ಷಣೆ ಕಾಪಾಡಲು ಕೇಂದ್ರ ಸರ್ಕಾರ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಮೂಲಕ ಹದಿನೈದು ಲಕ್ಷ ರುಪಾಯಿಗಳ ವಿಶೇಷ ವಿಮೆಯನ್ನು ನೀಡುತ್ತಿದೆ. ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ರಾಣಿಬೆನ್ನೂರು: ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಮಹತ್ತರವಾದುದು. ಅವರಿಂದ ದೇಶದ ಆರ್ಥಿಕತೆಯ ಬಲಗೊಳ್ಳುವಿಕೆ ಸಾಧ್ಯ ಎಂದು ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಪ್ರಮೋದ ನಲವಾಗಲ ತಿಳಿಸಿದರು.ನಗರದ ಹಳೆ ಪಿಬಿ ರಸ್ತೆಯ ವಿನಾಯಕ ಮೋಟಾರ್ಸ್‌ನಲ್ಲಿ ಗುರುವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಮಿಕರ ಹಿತರಕ್ಷಣೆ ಕಾಪಾಡಲು ಕೇಂದ್ರ ಸರ್ಕಾರ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಮೂಲಕ ಹದಿನೈದು ಲಕ್ಷ ರುಪಾಯಿಗಳ ವಿಶೇಷ ವಿಮೆಯನ್ನು ನೀಡುತ್ತಿದೆ. ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಎನ್ನೆಸ್ಸೆಸ್ ನೋಡಲ್ ಅಧಿಕಾರಿ ಎಚ್. ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ವಿನಾಯಕ ಮೋಟಾರ್ಸ್ ಮಾಲೀಕರಾದ ಪ್ರಭಾಕರ ಮೈದೂರ, ಸ್ಫೂರ್ತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾ. ಬಸವರಾಜ ಕಮ್ಮಾರ, ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿನಾಯಕ ಮೋಟಾರ್ಸ್ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಡಾ. ರಾಜೇಂದ್ರ ಪೂಜಾರ, ರಾಘವೇಂದ್ರ, ಶ್ರೀಧರ, ಪ್ರೇಮಕುಮಾರ ಬೀದರಿಕಟ್ಟಿ ಉಪಸ್ಥಿತರಿದ್ದರು.ವಚನಕಾರರ ಚಿಂತನೆ ಸಾರ್ವಕಾಲಿಕಹಾನಗಲ್ಲ: ಮೌಢ್ಯದ ಮತಿಯಿಂದ ಮನುಷ್ಯನನ್ನು ಪರಿಶುದ್ಧಗೊಳಿಸಲು ಮುಂದಾದ ಜಗಜ್ಯೋತಿ ಬಸವಣ್ಣ, ಜಾತಿ ದ್ವೇಷ ದಳ್ಳುರಿಗೆ ಕೊನೆ ಹಾಡಿ, ಕಾಯಕ ದಾಸೋಹದ ಕಂಗಳು ತೆರೆಸಿದ ಮಹಾತ್ಮ ಎಂದು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ತಿಳಿಸಿದರು.
ಇಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಮನಿತರ ಧ್ವನಿಯಾಗಿ, ವೈಚಾರಿಕೆ ಆಂದೋಲನವನ್ನು ಗಟ್ಟಿಗೊಳಿಸಿ, ಮೇಲು ಕೀಳಿನ ಅಂತರ ಕಳೆದು, ಸಾಮಾಜಿಕ ಸಬಲೀಕರಣದ ಕನಸಿಗೆ ಶಕ್ತಿ ಮೀರಿ ಪರಿಶ್ರಮಿಸಿದ ಬಸವಣ್ಣ ಹಾಗೂ ಶರಣ ಸಮುದಾಯ ಅದು ಕರ್ನಾಟಕದ ಹೆಮ್ಮೆ. ಅನುಭವ ಅನುಭಾವವನ್ನೂ ಒಳಗೊಂಡ ವಚನಕಾರರ ಚಿಂತನೆಗಳು ಸಾರ್ವಕಾಲಿಕ ಸತ್ಯಗಳು. ಇಡೀ ವಿಶ್ವವೇ ಒಪ್ಪುವ ಸಾಮಾಜಿಕ ಚಿಂತನೆಗಳು ಈಗ ಮನೆಮಾತಾಗಿವೆ. ಆದರೆ ಅವುಗಳ ಆಚರಣೆಯ ಅಗತ್ಯವಿದೆ ಎಂದರು.ಕನ್ನಡ ಪ್ರಾಧ್ಯಾಪಕ ಡಾ. ವಿಶ್ವನಾಥ ಬೋಂದಾಡೆ ಮಾತನಾಡಿ, ಅಂತರಂಗ, ಬಹಿರಂಗ ಶುದ್ಧಿಯ ಬದುಕಿಗೆ ಸಂದೇಶ ನೀಡಿದ ಬಸವಣ್ಣನವರು ವೈಚಾರಿಕ ವಿವೇಕದ ಸ್ಪರ್ಶ ನೀಡಿದರು. ಬಸವಣ್ಣನವರ ಚಿಂತೆನಗಳಲ್ಲಿ ಜಾತಿಗೆ ಅವಕಾಶವೇ ಇಲ್ಲ. ದೇವರ ಹೆಸರಿನಲ್ಲಿ ನಡೆಯುವ ಹಿಂಸೆ ಒಪ್ಪಿತವಲ್ಲ ಎಂದರು.ಕಾರ್ಯಕ್ರಮದಲ್ಲಿ ಡಾ. ಹರೀಶ್ ತಿರಕಪ್ಪ, ಡಾ. ಜಿತೇಂದ್ರ ಜಿ.ಟಿ., ಡಾ. ಪ್ರಕಾಶ್ ಜಿ.ವಿ., ಡಾ. ರುದ್ರೇಶ್ ಬಿ.ಎಸ್., ಪ್ರೊ. ದಿನೇಶ್ ಆರ್., ಪ್ರೊ. ಮಹೇಶ್ ಅಕ್ಕಿವಳ್ಳಿ, ಎಂ.ಎಂ. ನಿಂಗೋಜಿ, ಎಸ್.ಸಿ. ವಿರಕ್ತಮಠ, ಮಂಜಪ್ಪ ಪರಸಿಕ್ಯಾತಿ, ಎಲ್.ಎಫ್. ಹಾನಗಲ್ ಮಾಲತೇಶ್ ಜೇಡೆದ್, ಜಗದೀಶ್ ನಿಂಬಕನವರ್ ಪಾಲ್ಗೊಂಡಿದ್ದರು.