ಕೃಷ್ಣಮೂರ್ತಿ ರಾವ್‌, ಗುರುರಾಜ್‌ ಐತಾಳ್‌ ಸಂಸ್ಮರಣೆ: ಪ್ರಶಸ್ತಿ ಪ್ರದಾನ

| Published : May 02 2025, 12:15 AM IST

ಕೃಷ್ಣಮೂರ್ತಿ ರಾವ್‌, ಗುರುರಾಜ್‌ ಐತಾಳ್‌ ಸಂಸ್ಮರಣೆ: ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಲಕ್ಷ್ಮೀ ಗುರುರಾಜ್ಸ್ ಎನ್. ಎನ್. ಯು. ಸಂಸ್ಥೆಯ ಪಂಚತ್ರಿಂಶತ್ ಉತ್ಸವದ ನಾಲ್ಕನೇ ತಿಂಗಳ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸ್ಥಾಪಕ ದಿ. ಕೃಷ್ಣಮೂರ್ತಿ ರಾವ್ ಕೊಡವೂರು ಮತ್ತು ಪೋಷಕ ದಿ. ಗುರುರಾಜ್ ಐತಾಳ್ ಕೊಡವೂರು ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಐ.ವೈ. ಸಿ. ವೇದಿಕೆಯಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಲಕ್ಷ್ಮೀ ಗುರುರಾಜ್ಸ್ ಎನ್. ಎನ್. ಯು. ಸಂಸ್ಥೆಯ ಪಂಚತ್ರಿಂಶತ್ ಉತ್ಸವದ ನಾಲ್ಕನೇ ತಿಂಗಳ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸ್ಥಾಪಕ ದಿ. ಕೃಷ್ಣಮೂರ್ತಿ ರಾವ್ ಕೊಡವೂರು ಮತ್ತು ಪೋಷಕ ದಿ. ಗುರುರಾಜ್ ಐತಾಳ್ ಕೊಡವೂರು ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಐ.ವೈ. ಸಿ. ವೇದಿಕೆಯಲ್ಲಿ ನೆರವೇರಿತು.ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಉದ್ಘಾಟಿಸಿದರು. ಉಡುಪಿಯ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ನಿರ್ದೇಶಕಿ ವಿದುಷಿ ಲಕ್ಷ್ಮೀ ಗುರುರಾಜ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ದಿ. ಕೃಷ್ಣಮೂರ್ತಿ ರಾವ್ ಸಂಸ್ಮರಣಾ ಭಾಷಣವನ್ನು ಗೋವಿಂದ ಐತಾಳ್ ಕೊಡವೂರು ಹಾಗೂ ದಿ. ಗುರುರಾಜ್ ಐತಾಳ್ ಸಂಸ್ಮರಣಾ ಭಾಷಣವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಸೇತುಮಾಧವ್ ಹಾಗೂ ನಾಗರಾಜ್ ತಂತ್ರಿ ನೆರವೇರಿಸಿದರು. ಮೋಹನ್ ಉಪಾಧ್ಯ ನಿರೂಪಿಸಿದರು. ಚಂದ್ರಶೇಖರ್ ಕೊಡವೂರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಯೂರಿ ಗುರುರಾಜ್ ಐತಾಳ್ ಭರತನಾಟ್ಯ ಕಾರ್ಯಕ್ರಮವನ್ನು ತನ್ನ ತಂದೆ ಹಾಗು ತಾತನಿಗಾಗಿ ಸಮರ್ಪಿಸಿದರು.