ಸಾರಾಂಶ
ಅಸಂಘಟಿತ ಕೂಲಿಕಾರರೆಂದೇ ಕರೆಸಿಕೊಳ್ಳುವ ನರೇಗಾ ಕೂಲಿಕಾರರು ನಿತ್ಯ ಭಿನ್ನವಾದ ಕಾಮಗಾರಿಗಳಲ್ಲಿ ತೊಡಗುತ್ತಾರೆ. ಗ್ರಾಮಸ್ಥರೆಲ್ಲರೂ ಸೇರಿ ಒಂದೆಡೆ ಕೆಲಸ ಮಾಡುವುದರಿಂದ ಗ್ರಾಮೀಣ ಪ್ರದೇಶದ ಸೊಗಡನ್ನು ನರೇಗಾ ಕಾಮಗಾರಿಗಳಲ್ಲಿ ಕಾಣಬಹುದು.
ಕೊಪ್ಪಳ:
ಮಹಾತ್ಮಗಾಂಧಿ ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ ಎಂದು ಕಾಯಕ ಬಂಧು ಶಿವಾನಂದ ಬೆಣಕಲ್ ಹೇಳಿದರು.ತಾಲೂಕಿನ ಹಿರೇಬಗನಾಳ ಗ್ರಾಮದ ನರೇಗಾ ಕಾಮಗಾರಿ ಸ್ಥಳವಾದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಸಂಘಟಿತ ಕೂಲಿಕಾರರೆಂದೇ ಕರೆಸಿಕೊಳ್ಳುವ ನರೇಗಾ ಕೂಲಿಕಾರರು ನಿತ್ಯ ಭಿನ್ನವಾದ ಕಾಮಗಾರಿಗಳಲ್ಲಿ ತೊಡಗುತ್ತಾರೆ. ಗ್ರಾಮಸ್ಥರೆಲ್ಲರೂ ಸೇರಿ ಒಂದೆಡೆ ಕೆಲಸ ಮಾಡುವುದರಿಂದ ಗ್ರಾಮೀಣ ಪ್ರದೇಶದ ಸೊಗಡನ್ನು ನರೇಗಾ ಕಾಮಗಾರಿಗಳಲ್ಲಿ ಕಾಣಬಹುದು. ಇದರಿಂದಾಗಿ ಆರ್ಥಿಕ ಸದೃಢತೆ ಜತೆಗೆ ಸಾಮಾಜಿಕ ಜೀವನದಲ್ಲಿಯೂ ಸಹ ಬೆರೆಯುತ್ತಾ ಬೆಸರವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಕೂಲಿಕಾರರರು ವಲಸೆ ಹೊಗಬಾರದೆಂದು ಜಾರಿಯಾದ ಮಹಾತ್ವಾಕಾಂಕ್ಷಿ ಯೋಜನೆಯಲ್ಲೊಂದು. ಒಂದು ಕುಟುಂಬಕ್ಕೆ 100 ದಿನ ಕೆಲಸವನ್ನು ಪಂಚಾಯಿತಿಯಿಂದ ನೀಡಲಾಗುತ್ತದೆ. ಅದನ್ನು ಎಲ್ಲರೂ ಪಡೆದುಕೊಳ್ಳಬೇಕು. ಅದೇ ರೀತಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹ 370 ಕೂಲಿ ಆಗಿದ್ದು ಇದರಿಂದಾಗಿ ಗ್ರಾಮೀಣ ಪ್ರದೇಶದ ಒಂದು ಕುಟುಂಬ (ಕನಿಷ್ಠ ಇಬ್ಬರು) ಒಂದು ದಿನ ನರೇಗಾ ಕಾಮಗಾರಿ ನಿರ್ವಹಿಸಿದರೆ ₹ 740 ಕೂಲಿ ದೊರೆಯುತ್ತದೆ. ಅದಕ್ಕಾಗಿ ಗ್ರಾಮೀಣ ಪ್ರದೇಶದ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಬೇಕು ಮತ್ತು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು.
ಸ್ಥಳದಲ್ಲಿ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ದೇವರಾಜ ಅಳವಂಡಿ, ಕಾಯಕ ಬಂಧು ಶಾಂತಮ್ಮ ರೊಟ್ಟಿ, ಮರಿಶಾಂತವೀರ ಅಂಗಡಿ, 151 ಕೂಲಿಕಾರರು ಹಾಜರಿದ್ದರು.