ಕಾರ್ಮಿಕರಿಗೆ ಮನೆ ಬಳಿ ಆರೋಗ್ಯ ದೊರೆಯಬೇಕು: ಶಾಸಕ ಬಿ.ಪಿ.ಹರೀಶ್

| Published : Aug 04 2025, 12:15 AM IST

ಕಾರ್ಮಿಕರಿಗೆ ಮನೆ ಬಳಿ ಆರೋಗ್ಯ ದೊರೆಯಬೇಕು: ಶಾಸಕ ಬಿ.ಪಿ.ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕ ಕಲ್ಯಾಣ ಮಂಡಳಿಯ ಯೋಜನೆಯಿಂದ ಅಸಂಘಟಿತ ಕಾರ್ಮಿಕರಿಗೆ ಮನೆ ಸಮೀಪವೇ ಆರೋಗ್ಯ ಸೇವೆ ದೊರೆಯುತ್ತದೆ. ಅಧಿಕಾರಿಗಳು ಲೋಪ ಮಾಡದೆ ಯೋಜನೆಯ ಅನ್ವಯ ಎಲ್ಲಾ ಅಗತ್ಯ ಆರೋಗ್ಯ ಸೇವೆಯ ಲಾಭವನ್ನು ಕಾರ್ಮಿಕರಿಗೆ ದೊರಕಿಸಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ಕಾರ್ಮಿಕ ಕಲ್ಯಾಣ ಮಂಡಳಿಯ ಯೋಜನೆಯಿಂದ ಅಸಂಘಟಿತ ಕಾರ್ಮಿಕರಿಗೆ ಮನೆ ಸಮೀಪವೇ ಆರೋಗ್ಯ ಸೇವೆ ದೊರೆಯುತ್ತದೆ. ಅಧಿಕಾರಿಗಳು ಲೋಪ ಮಾಡದೆ ಯೋಜನೆಯ ಅನ್ವಯ ಎಲ್ಲಾ ಅಗತ್ಯ ಆರೋಗ್ಯ ಸೇವೆಯ ಲಾಭವನ್ನು ಕಾರ್ಮಿಕರಿಗೆ ದೊರಕಿಸಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸಂಚಾರಿ ಆರೋಗ್ಯ ಘಟಕಕ್ಕೆ ಶನಿವಾರ ನಗರದಲ್ಲಿ ಚಾಲನೆ ನೀಡಿ ಮಾತನಾಡಿದರು.

ಹರಿಹರ ಮತ್ತು ಹೊನ್ನಾಳಿ ತಾಲೂಕಿಗೆ ವಾರದಲ್ಲಿ ತಲಾ ಮೂರು ದಿನ ಈ ಸಂಚಾರಿ ಘಟಕದ ಸೇವೆ ದೊರೆಯಲಿದೆ. ಓರ್ವ ವೈದ್ಯ, ಓರ್ವ ನರ್ಸ್, ಪ್ರಯೋಗಾಲಯ ತಂತ್ರಜ್ಞ ಸಿಬ್ಬಂದಿ ಇರುತ್ತಾರೆ. ಪ್ರಯೋಗಾಲಯ ಇದ್ದು ರಕ್ತದೊತ್ತಡ, ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಲಾಗುತ್ತದೆ. ಅಗತ್ಯ ಇರುವರಿಗೆ ಇಂಜೆಕ್ಷನ್, ಔಷಧಿ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ತಾಲೂಕು ಅಥವಾ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ ಎಂದು ಕಾರ್ಮಿಕ ನಿರೀಕ್ಷಕಿ ಜೆ. ಕವಿತಾ ಕುಮಾರಿ ಮಾಹಿತಿ ನೀಡಿದರು.

ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಎಚ್.ಭೀಮಣ್ಣ, ಗೌರವಾಧ್ಯಕ್ಷ ಕೊಕ್ಕನೂರು ಮಂಜಪ್ಪ, ಉಪಾಧ್ಯಕ್ಷ ಎಚ್.ಅಂಜನಪ್ಪ, ಕಾರ್ಯದರ್ಶಿ ಹನುಮಂತಪ್ಪ, ಖಜಾಂಚಿ ಚಾಕಣಿ ರೇವಣಪ್ಪ, ಹಮೀದ್ ಸಾಬ್‌, ಸಿಬ್ಬಂದಿ ಇದ್ದರು.