ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ

| Published : May 02 2025, 12:08 AM IST

ಸಾರಾಂಶ

ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕಾಲಕಾಲಕ್ಕೆ ವಿವಿಧ ಸೌಲಭ್ಯ ಸವಲತ್ತುಗಳನ್ನು ಒಗದಿಸುತ್ತಿದ್ದು, ಕಾರ್ಮಿಕರು ಇವುಗಳ ಮಾಹಿತಿ ಮಡೆದು ಬಳಸಿಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಜಿಲ್ಲಾ ಕಾರ್ಯನಿರ್ವಾಹಕರಾದ ರಕ್ಷಿತಾ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕಾಲಕಾಲಕ್ಕೆ ವಿವಿಧ ಸೌಲಭ್ಯ ಸವಲತ್ತುಗಳನ್ನು ಒಗದಿಸುತ್ತಿದ್ದು, ಕಾರ್ಮಿಕರು ಇವುಗಳ ಮಾಹಿತಿ ಮಡೆದು ಬಳಸಿಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಜಿಲ್ಲಾ ಕಾರ್ಯನಿರ್ವಾಹಕರಾದ ರಕ್ಷಿತಾ ತಿಳಿಸಿದರು.

ಅವರು ಗುರುವಾರ ಬೆಳಗ್ಗೆ ತುಮಕೂರು ಜಿಲ್ಲಾ ಲಾರಿ ಮೆಕಾನಿಕ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ತಿಳಿಸಿದರು, ಸಾಧ್ಯವಾದಲ್ಲಿ ತುಮಕೂರು ಜಿಲ್ಲಾ ಲಾರಿ ಮೆಕಾನಿಕ್ ಕ್ಷೇಮಭಿವೃದ್ಧಿ ಸಂಘದ ಕಚೇರಿಯಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜಿಸುವಂತೆ ಹೇಳಿದರು.

ತುಮಕೂರು ಜಿಲ್ಲಾ ಲಾರಿ ಮೆಕಾನಿಕ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೊಹಮ್ಮದ್ ಹುಸೇನ್ ರವರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಸಾನಿಯಾ ಕೌಸರ್, ತುಮಕೂರು ಜಿಲ್ಲಾ ಲಾರಿ ಮೆಕಾನಿಕ್ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಟಿ.ವಿ ಶ್ರೀನಿವಾಸ್, ಕಾರ್ಯದರ್ಶಿ ಅಫ್ಸರ್ ಖಾನ್, ಜಂಟಿ ಕಾರ್ಯದರ್ಶಿ ಅನ್ಸರ್ ಪಾಷಾ, ಖಜಾಂಚಿ ಮೊಹಮ್ಮದ್ ರಿಯಾಜ್ ಶರೀಫ್, ನಿರ್ದೇಶಕರಾದ ನವಾಬ್ ಜಾನ್, ಕೌಸರ್ ಪಾಷಾ, ಸಿರಾಜ್ ಖಾನ್, ಮೊಹಮ್ಮದ್ ರಫೀಕ್, ಆರ್ ಕೃಷ್ಣ, ಅಸ್ಲಂ ಪಾಷ ಸೇರಿದಂತೆ ಸಂಘಟನೆಯ ಸದಸ್ಯರು ಹಾಜರಿದ್ದರು.