ಶ್ರಮಿಕ ವರ್ಗದ ಜನತೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು: ಇಂಡುವಾಳು ಸಚ್ಚಿದಾನಂದ

| Published : Oct 16 2025, 02:00 AM IST

ಶ್ರಮಿಕ ವರ್ಗದ ಜನತೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು: ಇಂಡುವಾಳು ಸಚ್ಚಿದಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟಡ ಕಾರ್ಮಿಕರು, ಶ್ರಮಿಕ ವರ್ಗದ ಜನರಿಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ವಿಶ್ವಕರ್ಮದಂತಹ ಯೋಜನೆ ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ತಾವೂ ಸಹ ಆರ್ಥಿಕವಾಗಿ ಸ್ವಾವಲಂಭಿಗಳಾಗುವಂತೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರಮಿಕ ವರ್ಗದ ಜನತೆ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಸತ್ಪ್ರಜೆಗಳನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಕಿವಿಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮ ದಿನಾಚರಣೆ ಅಂಗವಾಗಿ ತಾಲೂಕಿನ ಪಿ.ಹೊಸಹಳ್ಳಿಯ ಶ್ರಮಿಕ ವರ್ಗದ ಕಟ್ಟಡ ಕಾರ್ಮಿಕರಿಗೆ ಬಟ್ಟೆ ವಿತರಿಸಿ ಮಾತನಾಡಿ, ಶ್ರಮಿಕರ ಮಕ್ಕಳು ಕಟ್ಟಡ ಕಾರ್ಮಿಕರಾಗಿಯೇ ಬದುಕುವಂತಹ ಸ್ಥಿತಿ ನಿರ್ಮಾಣ ಮಾಡದೇ ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ಹುದ್ದೆ ಅಲಂಕರಿಸುವಂತೆ ಪೋಷಕರು ಮಾಡಬೇಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟಡ ಕಾರ್ಮಿಕರು, ಶ್ರಮಿಕ ವರ್ಗದ ಜನರಿಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ವಿಶ್ವಕರ್ಮದಂತಹ ಯೋಜನೆ ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ತಾವೂ ಸಹ ಆರ್ಥಿಕವಾಗಿ ಸ್ವಾವಲಂಭಿಗಳಾಗುವಂತೆ ಕರೆ ನೀಡಿದರು.

ಈ ವೇಳೆ ಬಿಜೆಪಿ ಮುಖಂಡರಾದ ಪೈಲ್ವಾನ್ ಮಹದೇವು, ಪೈಲ್ವಾನ್ ಲಕ್ಷ್ಮಣ್, ಗ್ರಾಪಂ ಸದಸ್ಯರಾದ ಸಾಗರ್, ಕೃಷ್ಣಾನಂದ, ಮುಖಂಡರಾದ ಸ್ವಾಮಿ, ರಾಮು, ಜಗದೀಶ್, ನಾಗರಾಜು, ಸೋಮಣ್ಣ, ಪುಟ್ಟಣ್ಣ, ಕುಮಾರ, ಚೇತನ್, ಸುರೇಶ, ರಾಘವೇಂದ್ರ, ಶರತ್, ಶಶಿ, ಮೋಹನ್, ಕುಮಾರ್, ವೆಂಕಟೇಶ ಇತರರು ಹಾಜರಿದ್ದರು.

----------