ಶಿಗ್ಗಾಂವಿ ಸುಂದರ ನಗರವನ್ನಾಗಿಸಲು ಶ್ರಮಿಸುವೆ-ಪುರಸಭೆ ಅಧ್ಯಕ್ಷ ಶಿದ್ದಾರ್ಥಗೌಡ

| Published : Aug 27 2024, 01:34 AM IST

ಶಿಗ್ಗಾಂವಿ ಸುಂದರ ನಗರವನ್ನಾಗಿಸಲು ಶ್ರಮಿಸುವೆ-ಪುರಸಭೆ ಅಧ್ಯಕ್ಷ ಶಿದ್ದಾರ್ಥಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ನಗರವನ್ನು ಸುಂದರ ನಗರವನ್ನಾಗಿ ಮಾಡಲು ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರದಿಂದ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಶಿದ್ದಾರ್ಥಗೌಡ ಪಾಟೀಲ ಹೇಳಿದರು.

ಶಿಗ್ಗಾಂವಿ: ನಗರವನ್ನು ಸುಂದರ ನಗರವನ್ನಾಗಿ ಮಾಡಲು ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರದಿಂದ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಶಿದ್ದಾರ್ಥಗೌಡ ಪಾಟೀಲ ಹೇಳಿದರು.

ಶಿಗ್ಗಾಂವ ನಗರ ಕಿರಾಣಿ ವ್ಯಾಪಾರಸ್ಥರ ಸಂಘದಿಂದ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪುರಸಭಾ ಮಾಜಿ ಅಧ್ಯಕ್ಷ ಸುಭಾಸ ಚವ್ಹಾಣ ಮಾತನಾಡಿ, ನಿಮ್ಮ ಸಹಕಾರದಿಂದ ಶಿಗ್ಗಾಂವಿ ಪುರಸಭೆ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಹೀಗಾಗಿ ನಿಮ್ಮ ಬಹುದಿನ ಬೇಡಿಕೆ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯವನ್ನು ನೂತನ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅತೀ ಶೀಘ್ರದಲ್ಲಿ ಮಾಡಲಾಗುವುದು ಹಾಗೂ ನಗರವನ್ನು ಸ್ವಚ್ಛವಾಗಿ ಇಡಲು ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ಹೀಗಾಗಿ ಎಲ್ಲರೂ ಕಸದ ಗಾಡಿಗಳು ಬಂದಾಗ ಗಾಡಿಗೆ ಹಾಕಬೇಕೆಂದು ನಾಗರಿಕ ಜವಾಬ್ದಾರಿಯನ್ನು ತಿಳಿಸಿದರು.

ಕಿರಾಣಿ ಸಂಘದ ಅಧ್ಯಕ್ಷ ಲೋಹಿತ ಬುಳ್ಳಕ್ಕನವರ ಮಾತನಾಡಿ, ಸಂಘಕ್ಕೆ ಸಂಘದ ಕಚೇರಿ ಹಾಗೂ ಸಭಾ ಭವನ ನಿರ್ಮಾಣಕ್ಕೆ ಐದು ಗುಂಟೆ ಜಾಗೆಯನ್ನು ನೀಡಿದಲ್ಲಿ ಸಂಘ ಇನ್ನು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕುಮಾರ ಬಳ್ಳಾರಿ, ಸಿದ್ದಲಿಂಗೇಶ ಅಕ್ಕಿ, ಖಜಾಂಚಿ ಮಂಜುನಾಥ ಖುರ್ಸಾಪೂರ, ಮಾಜಿ ಪುರಸಭಾ ಅಧ್ಯಕ್ಷ ಪರಶುರಾಮ ಸೊನ್ನದ, ಗುತ್ತಿಗೆದಾರ ಆನಂದ ಸುಬೇದಾರ, ಕಿರಾಣಿ ವ್ಯಾಪಾರಸ್ಥರಾದ ಮಂಜುನಾಥ ಅಕ್ಕಿ, ರುದ್ರಯ್ಯ ಕುಂಬಾರಗೇರಿಮಠ, ರಾಜಣ್ಣ ಅಂಕಲಕೋಟಿ, ಷಣ್ಮುಖ ಕಡೇಮನಿ, ರವಿ ಜಗದಣ್ಣವರ, ಇಬ್ರಾಹಿಂ ಸವಣೂರ, ಕೇದಾರಪ್ಪ ಬಗಾಡೆ, ಶಂಭುಲಿಂಗ ಅಕ್ಕಿ ಹಾಗೂ ನಗರದ ಎಲ್ಲ ಕಿರಾಣಿ ವ್ಯಾಪಾರಸ್ಥರು ಭಾಗವಹಿಸಿದ್ದರು.

ಉದ್ಯೆಮಿ ರಾಘವೇಂದ್ರ ದೇಶಪಾಂಡೆ ಸ್ವಾಗತಿಸಿ, ನಿರೂಪಿಸಿದರು.