ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಪಂ ವ್ಯಾಪ್ತಿಯ ಕಂಚಿನೆಗಳೂರು ಮತ್ತು ಜಕ್ಕನಾಯಕನಕೊಪ್ಪ ಗ್ರಾಮಗಳಲ್ಲಿ ಶಾಸಕ ಶ್ರೀನಿವಾಸ ಮಾನೆ ಬುಧವಾರ ಸಂಜೆ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಕಾರ್ಯಕ್ರಮದಡಿ ಒಟ್ಟು ₹65 ಲಕ್ಷ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಹಾನಗಲ್ಲ: ತಾಲೂಕಿನ ಕಂಚಿನೆಗಳೂರು ಗ್ರಾಪಂ ವ್ಯಾಪ್ತಿಯ ಕಂಚಿನೆಗಳೂರು ಮತ್ತು ಜಕ್ಕನಾಯಕನಕೊಪ್ಪ ಗ್ರಾಮಗಳಲ್ಲಿ ಶಾಸಕ ಶ್ರೀನಿವಾಸ ಮಾನೆ ಬುಧವಾರ ಸಂಜೆ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಕಾರ್ಯಕ್ರಮದಡಿ ಒಟ್ಟು ₹65 ಲಕ್ಷ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಗ್ರಾಮೀಣ ರಸ್ತೆಗಳ ಸುಧಾರಣೆಗೆ ಒತ್ತು ನೀಡಲಾಗಿದೆ. ರಸ್ತೆಗಳ ಸುಧಾರಣೆಯಿಂದ ವ್ಯಾಪಾರ, ವಹಿವಾಟು, ಕೃಷಿ ಚಟುವಟಿಕೆಗೆ ಅನುಕೂಲವಾಗಲಿದ್ದು, ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಮದ ಒಳಗಿನ ಚರಂಡಿ, ಸಿಡಿ ನಿರ್ಮಾಣಕ್ಕೂ ಹೆಚ್ಚು ಅನುದಾನ ಒದಗಿಸಲಾಗಿದೆ. ಈ ಬಾರಿ ವಿಶೇಷವಾಗಿ ಗ್ರಾಮದ ಪ್ರಮುಖರನ್ನು ಒಂದೆಡೆ ಸೇರಿಸಿ ಅವರ ಅಭಿಪ್ರಾಯ ಆಧರಿಸಿ ಅನುದಾನ ಬಿಡುಗಡೆ ಮಾಡುವ ಪದ್ಧತಿ ಆರಂಭಿಸಲಾಗಿದೆ. ಹಾಗಾಗಿ ತುರ್ತು ಅವಶ್ಯವಿರುವ ಕಾಮಗಾರಿಗಳಿಗೆ ಹಣಕಾಸಿನ ನೆರವು ದೊರೆಯುವಂತಾಗಿದೆ. ತಾಲೂಕಿನ 42 ಗ್ರಾಪಂಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ₹30 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ಹೇಳಿದರು.ಗ್ರಾಪಂ ಅಧ್ಯಕ್ಷೆ ರಾಧಾ ಇಂಗಳಕಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ವಿರೂಪಾಕ್ಷಪ್ಪ ತಳವಾರ, ದೇವೇಂದ್ರಪ್ಪ ಭೈರಕ್ಕನವರ, ಖಾದರಸಾಬ ಮೂಲಿಮನಿ, ಇಮಾಮಸಾಬ ಬಿಂಗಾಪುರ, ಜೀವನಗೌಡ ಪಾಟೀಲ, ಗುಡ್ಡಪ್ಪ ಜೋಲಿ, ಮಹೇಶ ಗಿರಿಯಣ್ಣನವರ, ಶಶಿಧರ ಭೈರಕ್ಕನವರ, ಮಾರುತಿ ಇಂಗಳಕಿ, ಅರುಣಕುಮಾರ ಕೋಲಕಾರ, ನಿಜಾಮ್ ಲತೀಫ್‌ಸಾಬನವರ, ಅಬ್ದುಲ್‌ಖಾದರ ಎಣ್ಣಿ, ಹಜ್ಜೆಖಾನ್ ಹೊಂಡದ, ನಾಸೀರ್‌ಖಾನ ಹೊಂಡದ, ರುದ್ರಗೌಡ ಹಕ್ಕಲಮನಿ, ಮಾಲತೇಶ ವರ್ದಿ, ಗೋಪಾಲ ಕಠಾರಿ, ಮಲ್ಲಪ್ಪ ಗಿರಿಯಣ್ಣನವರ, ಲಲಿತಾ ಪತ್ತಾರ, ಸುರೇಶ ತಳವಾರ ಇದ್ದರು.