ಸಾರಾಂಶ
ಚಿತ್ರದುರ್ಗ ಜಿಪಂ ಸಭಾಂಗಣದಲ್ಲಿ ಬಟವಾಡೆ ಅಧಿಕಾರಿಗಳು (ಡಿಡಿಒ) ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾ ಖಜಾನೆ ಉಪನಿರ್ದೇಶಕ ಹೆಚ್.ಟಿ.ಅಶೋಕ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಎಲ್ಲ ಬಟವಾಡೆ ಅಧಿಕಾರಿಗಳು (ಡಿಡಿಒ) ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್‍ಆರ್‌ಎಂಎಸ್-2 ಹಾಗೂ ಖಜಾನೆ-2 ತಂತ್ರಾಂಶ ಕುರಿತು ಕಾರ್ಯಾಗಾರ ನಡೆಸಲಾಯಿತು.ಜಿಲ್ಲಾ ಖಜಾನೆ ಉಪ ನಿರ್ದೇಶಕ ಎಚ್.ಟಿ. ಅಶೋಕ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಖಜಾನೆ-2ರಲ್ಲಿ ಬಿಲ್ಲನ್ನು ಸೃಜಿಸಿ ಸಲ್ಲಿಸುವಾಗ ಅನುಸರಿಸಬೇಕಾದ ನಿಯಮಾಳಿಗಳ ಬಗ್ಗೆ ತಿಳಿಸಿದರು. ಪ್ರತಿ ಮಾಹೆ ವೆಚ್ಚ ತಖ್ತೆಃ, ಜಿಎಸ್ ಟಿ ಸಮನ್ವಯೀಕರಣ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಲೆಕ್ಕ ಸಮನ್ವಯೀಕರಣವನ್ನು ನಿಗದಿತ ಅವಧಿಯೊಳಗೆ ಮಾಡುವಂತೆ ಸಲಹೆ ನೀಡಿದರು.
ವರ್ಷಾಂತ್ಯ ಸಮೀಪಿಸುತ್ತಿರುವುದರಿಂದ ಡಿಎಸ್ ಸಿ ನವೀಕರಣ, ಪ್ರಯಾಣ ಭತ್ಯೆ ಬಿಲ್ಲುಗಳು, ಜಿಪಿಎಫ್ ಬಿಲ್ಲುಗಳು, ಹೆಚ್‍ಆರ್‍ಎಂಎಸ್-2, ಎನ್ ಪಿಎಸ್ ಹಾಗೂ ಆನ್‍ಲೈನ್ ಕಚೇರಿ ಆದೇಶ ಸೃಜನೆ ಬಗ್ಗೆ ವಿವರಿಸಿದರು.ದಾವಣಗೆರೆ ಇ-ಪ್ರಕ್ಯೂರ್‍ಮೆಂಟ್ ಸೆಲ್‍ನ ಸಂಪನ್ಮೂಲ ವ್ಯಕ್ತಿ ವೀರೇಶ್ ಅವರು, ಇ-ಪ್ರಕ್ಯೂರ್‍ಮೆಂಟ್ ಪೋರ್ಟಲ್‍ನಲ್ಲಿ ವರ್ಕ್ ಬಿಲ್ ಸೃಜನೆಯ ಬಗ್ಗೆ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಬೋರಯ್ಯ, ಸಹಾಯಕ ಖಜನಾಧಿಕಾರಿ ಬಿ.ವೀರಭದ್ರಪ್ಪ, ಕಾರ್ಯಪಾಲಕ ಅಭಿಯಂತರ ಹೆಚ್.ಪಿ.ಅಮರನಾಥ್ ಜೈನ್, ಅರಣ್ಯ ಇಲಾಖೆ ಎಸಿಎಫ್ ಎಂ.ಎಸ್.ನ್ಯಾಮತಿ ಇದ್ದರು.
;Resize=(128,128))
;Resize=(128,128))
;Resize=(128,128))