ಇಲ್ಲಿನ ಶಿರ್ವ ಪೊಲೀಸ್ ಠಾಣೆ ಸಮೀಪದ ಅಂಗನವಾಡಿಯಲ್ಲಿ ಶಿರ್ವ ರೋಟರಿ ವತಿಯಿಂದ ಮಂಗಳವಾರ ಮಕ್ಕಳ ಪೋಷಕರಿಗೆ ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಯಿತು.
ಕಾಪು: ಇಲ್ಲಿನ ಶಿರ್ವ ಪೊಲೀಸ್ ಠಾಣೆ ಸಮೀಪದ ಅಂಗನವಾಡಿಯಲ್ಲಿ ಶಿರ್ವ ರೋಟರಿ ವತಿಯಿಂದ ಮಂಗಳವಾರ ಮಕ್ಕಳ ಪೋಷಕರಿಗೆ ‘ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರ’ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ನರ್ಸಿಂಗ್ ಕಾಲೇಜಿನ ಸೂಪರಿಂಡೆಂಟ್ ಡೈನಾ ವಿಲ್ಮಾ ಮೆಂಡೋನ್ಸಾ ಭಾಗವಹಿಸಿ, ಮಕ್ಕಳ ಆರೈಕೆ, ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರ ಕುರಿತು ಉಪಯುಕ್ತ ಮಾಹಿತಿ ನೀಡಿ ತಾಯಂದಿರೊಂದಿಗೆ ಸಂವಾದ ನಡೆಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ವ ರೋಟರಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಜೆಸಿಂತಾ ಡಿಸೋಜ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೋಟರಿ ವಲಯ ಸೇನಾನಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು. ಅಂಗನವಾಡಿ ಶಿಕ್ಷಕಿ ರೇಖಾ ಉಪಸ್ಥಿತರಿದ್ದರು. ಮೌರಿಸ್ ಕ್ವಾಡ್ರಸ್ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ರಿಚರ್ಡ್ ಫೆರಾವೊ, ಹೆರಾಲ್ಡ್ ಕುಟಿನ್ಹೋ, ಪ್ರಾನ್ಸಿಸ್ ಕ್ಯಾಸ್ತಲಿನೊ, ಅಂಗನವಾಡಿ ಸಹಾಯಕಿ ಪ್ರಫುಲ್ಲಾ, ಮಕ್ಕಳ ಪೋಷಕರು, ಮಹಿಳೆಯರು ಉಪಸ್ಥಿತರಿದ್ದರು.