ನಾಳೆ ಒಳ ಮೀಸಲಾತಿ ಕುರಿತು ಕಾರ್ಯಗಾರ

| Published : May 03 2025, 12:15 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪರಿಶಿಷ್ಠ ಜಾತಿ ಬಲಗೈ ಹೊಲಯ ಛಲವಾದಿ ಒಳಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪರಿಶಿಷ್ಠ ಜಾತಿ ಬಲಗೈ ಹೊಲಯ ಛಲವಾದಿ ಒಳಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ಒಳ ಮೀಸಲಾತಿ ಕುರಿತು ಕಾರ್ಯಗಾರವನ್ನು ಮೇ 4ರಂದು ಬೆಳಗ್ಗೆ 10.30ಕ್ಕೆ ನಗರದ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್‌ ಅವರು ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪರಿಶಿಷ್ಠ ಜಾತಿ ಬಲಗೈ ಹೊಲಯ ಛಲವಾದಿ ಒಳಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾರ್ಯಗಾರದಲ್ಲಿ ಯೋಜನಾ ಇಲಾಖೆಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ಅವರ ಜೊತೆಗೂಡಿ ರಾಜ್ಯ ಮಟ್ಟದ ಹೊಲಯ/ಛಲವಾದಿ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ಮೈಸೂರು ಉರಿಲಿಂಗಿಪೆದ್ದಿ ಮಠ ಜ್ಞಾನ ಪ್ರಕಾಶ್ ಸ್ವಾಮೀಜೀ ಅ‍ವರು ಸಾನಿದ್ಯ ವಹಿಸಲಿದ್ದಾರೆ ಎಂದರು.

ಚಾಮರಾಜನಗರ ಸಂಸದ ಸುನೀಲ್ ಬೋಸ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧೃವನಾರಾಯಣ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಎ.ಸಿದ್ದರಾಜು, ಕೊಳ್ಳೇಗಾಲ ಮಾಜಿ ಶಾಸಕರಾದ ಎನ್.ಮಹೇಶ್, ಜಿ.ಎನ್.ನಂಜುಂಡಸ್ವಾಮಿ, ಬಾಲರಾಜ್‌ ಆಗಮಿಸಲಿದ್ದಾರೆ ಎಂದರು.

ಚಾಮರಾಜನಗರ ತಾಲೂಕಿನ ಗಡಿ ಮತ್ತು ಕಟ್ಟೆ ಯಜಮಾನರು ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸಹಕಾರ ಸಂಘಗಳ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು, ಗ್ರಾಮ ಪಂಚಾಯಿತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಹೊಲಯ/ಛಲವಾದಿ ಸಮುದಾಯದ ಜಿಲ್ಲೆಯ ಎಲ್ಲಾ ದಲಿತ ಪರ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹಾಗೂ ಜಿಲ್ಲೆಯ ಸರ್ಕಾರಿ ನೌಕರರು, ಜಿಲ್ಲೆಯ ಎಲ್ಲಾ ಗ್ರಾಮದ ಪರಿಶಿಷ್ಟ ಜಾತಿ ಬಲಗೈ ಹೊಲಯ/ಛಲವಾದಿ ಸಮುದಾಯದ ಯಜಮಾನರು, ಮುಖಂಡರು ಸಾರ್ವಜನಿಕರು ಭಾಗವಹಿಸಬೇಕು ಎಂದರು.

ಸಮೀಕ್ಷೆ ಮೂರು ಹಂತದಲ್ಲಿ ನಡೆಯಲಿದ್ದು, ಮೇ 5ರಿಂದ 17ರ ವರಗೆ ಒಂದನೇ ಹಂತ ಮೇ 17ರಿಂದ 19ರವರಗೆ 2ನೇ ಹಂತ ಮೇ 19ರಿಂದ 23ರ ವರಗೆ ಮೂರನೇ ಹಂತದಲ್ಲಿ ನಡೆಯಲಿದ್ದು, ಬಲಗೈ ಸಮುದಾಯದವರು ಹೊಲಯ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೂಡ್ನಕೂಡು ಪ್ರಕಾಶ್‌, ಬ್ಯಾಡಮೂಡ್ಲೂ ಬಸವಣ್ಣ, ಸಿ.ಕೆ ಮಂಜುನಾಥ್‌, ಆರ್‌ ಮಹದೇವ್, ಸೋಮೇಶ್ವರ್‌, ಸೋಮಣ್ಣ ಇದ್ದರು.