ಭಾರತೀನಗರದಲ್ಲಿ ವಿಶ್ವ ಮೂಳೆ ದಿನಾಚರಣೆ, ಜಾಗೃತಿ ಕಾರ್ಯಕ್ರಮ

| Published : Oct 25 2024, 01:02 AM IST

ಸಾರಾಂಶ

ಮೂಳೆಗಳಲ್ಲಿ ಹೆಚ್ಚು ಕಾಯಿಲೆಗಳು ಬರುವುದು ಮೊಣಕಾಲು ಮತ್ತು ಬೆನ್ನು ಮೂಳೆಗಳಲ್ಲಿ. ಈ ಎರಡೂ ಕಾಯಿಲೆಗಳನ್ನು ಹೆಚ್ಚು ಬಾಧಿಸಲು ಬಿಡಬಾರದು. ಅಂತಹವರು ಆರಂಭಿಕ ಹಂತದಲ್ಲಿಯೇ ಯೋಗಾಸನ, ಫಿಜಿಯೋಥೆರಪಿ, ವ್ಯಾಯಾಮಗಳ ಮೂಲಕ ಸರಿಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯಲ್ಲಿ ವಿಶ್ವ ಮೂಳೆ ದಿನಾಚರಣೆ ಅಂಗವಾಗಿ ಬೆನ್ನು ಮೂಳೆ ಮತ್ತು ಮೊಣ ಕಾಲಿನ ಗಾಯದ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಆಸ್ಪತ್ರೆ ಮುಖ್ಯಸ್ಥ ಗಣೇಶ್ ಪ್ರಭು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೂಳೆ ತಜ್ಞ ಡಾ.ಮೌರ್ಯ ಮಾತನಾಡಿ, ಮೂಳೆಗಳಲ್ಲಿ ಹೆಚ್ಚು ಕಾಯಿಲೆಗಳು ಬರುವುದು ಮೊಣಕಾಲು ಮತ್ತು ಬೆನ್ನು ಮೂಳೆಗಳಲ್ಲಿ. ಈ ಎರಡೂ ಕಾಯಿಲೆಗಳನ್ನು ಹೆಚ್ಚು ಬಾಧಿಸಲು ಬಿಡಬಾರದು. ಅಂತಹವರು ಆರಂಭಿಕ ಹಂತದಲ್ಲಿಯೇ ಯೋಗಾಸನ, ಫಿಜಿಯೋಥೆರಪಿ, ವ್ಯಾಯಾಮಗಳ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ಪ್ರೊಜೆಕ್ಟರ್‌ಗಳ ಮೂಲಕ ದೃಶ್ಯಗಳನ್ನು ತೋರಿಸಿ ವಿವರಣೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಬದಲಾವಣೆಯಿಂದ ದಪ್ಪ ದೇಹದಿಂದಾಗಿ ಮೂಳೆ ಕಾಯಿಲೆಗಳು ಉಲ್ಬಣಿಸುತ್ತಿವೆ. ಇವುಗಳನ್ನು ನಿರ್ಲಕ್ಷಿಸಿದಲ್ಲಿ ಮುಂದೆ ಮೂಳೆಗಳ ಸ್ಥಿತಿ ಉಲ್ಬಣಗೊಂಡು ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಸ್ವಯಂಕೃತವಾಗಿ ಯಾವುದೇ ಔಷಧಿಗಳನ್ನು ಪಡೆಯದೆ ವೈದ್ಯರ ಸಲಹೆ, ಸೂಚನೆ ಪಾಲಿಬೇಕು. ಅಗತ್ಯ ಚಿಕಿತ್ಸೆಗೆ ಒಳಗಾಗಬೇಕು ಎಂದರು.

ಈ ವೇಳೆ ಮಾರ್ಕೆಟಿಂಗ್ ಮೇನೇಜರ್ ಅನಿಲ್‌ಕುಮಾರ್, ಡಾ.ಶೇತಾ, ಡಾ.ಪ್ರಶಾಂತ್, ಡಾ.ನಾರಾಯಣ್, ಡಾ.ಅಭಿಷೇಕ್, ಪೊಲೀಸ್ ಸಿಬ್ಬಂದಿ ರವಿಕುಮಾರ್, ಗಿರಿಜಾ, ಪ್ರಾಂಶುಪಾಲೆ ಮಂಜುಳಾ, ಸಿಬ್ಬಂದಿ ಭರತ್, ಮಲ್ಲೇಶ್, ನಿರಂಜನ್, ಮಧು, ರಾಘವೇಂದ್ರ ಉಪಸ್ಥಿರಿದ್ದರು.