ಸರ್ಕಾರಿ ಶಾಲೆಗಳಲ್ಲಿ ವಿಶ್ವಮಟ್ಟದ ಶಿಕ್ಷಣ ಅಗತ್ಯ: ವಿನಯಕುಮಾರ್

| Published : Aug 14 2025, 01:00 AM IST

ಸರ್ಕಾರಿ ಶಾಲೆಗಳಲ್ಲಿ ವಿಶ್ವಮಟ್ಟದ ಶಿಕ್ಷಣ ಅಗತ್ಯ: ವಿನಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಅಥವಾ ಖಾಸಗಿ ಶಾಲೆಗಳೇ ಆಗಿರಲಿ. ಎಲ್ಲ ಶಾಲೆಗಳಲ್ಲೂ ಪ್ರತಿ ಮಗುವಿಗೂ ಗುಣಮಟ್ಟದ, ಸಮಾನ ಶಿಕ್ಷಣ ಸಿಗುವಂತಾಗಿ, ಶಿಕ್ಷಣದಲ್ಲಿನ ಅಸಮಾನತೆ ತೊಲಗಬೇಕು. ಆಗ ಮಾತ್ರ ಬಡವರು, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ವರ್ಗದ ಮಕ್ಕಳೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ ಹೇಳಿದ್ದಾರೆ.

- ಬನ್ನಿಕೋಡು ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ಉದ್ಘಾಟನೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ಅಥವಾ ಖಾಸಗಿ ಶಾಲೆಗಳೇ ಆಗಿರಲಿ. ಎಲ್ಲ ಶಾಲೆಗಳಲ್ಲೂ ಪ್ರತಿ ಮಗುವಿಗೂ ಗುಣಮಟ್ಟದ, ಸಮಾನ ಶಿಕ್ಷಣ ಸಿಗುವಂತಾಗಿ, ಶಿಕ್ಷಣದಲ್ಲಿನ ಅಸಮಾನತೆ ತೊಲಗಬೇಕು. ಆಗ ಮಾತ್ರ ಬಡವರು, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ವರ್ಗದ ಮಕ್ಕಳೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ ಹೇಳಿದರು.

ಹೊನ್ನಾಳಿ ತಾಲೂಕಿನ ಬನ್ನಿಕೋಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ನೂತನ ಧ್ವಜಸ್ತಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮಗೆ ಸ್ವಾತಂತ್ರ್ಯ ಲಭಿಸಿ, ಇಷ್ಟು ವರ್ಷಗಳಾದರೂ ಶಿಕ್ಷಣದಲ್ಲಿ ಸಮಾನತೆ ನಿವಾರಣೆಯಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ದೊರಕುವಂತಾಗಬೇಕು ಎಂಬ ದೊಡ್ಡ ಕನಸು ಕಂಡಿದ್ದೇನೆ. ನನ್ನ ಕನಸು ಅಷ್ಟು ಸುಲಭವಲ್ಲ ಎಂಬುದು ಗೊತ್ತು. ಇದಕ್ಕಾಗಿ ಮುಂದೆಯೂ ಪ್ರಯತ್ನ ಮಾಡುತ್ತೇನೆ ಎಂದರು.

ಶಿಕ್ಷಣದಲ್ಲಿ ಸಮಾನತೆ ದೊರೆತರೆ ಮುಂದೊಂದು ದಿನ ಐಎಎಸ್, ಐಪಿಎಸ್, ವೈದ್ಯರು, ಎಂಜಿನಿಯರ್, ದೊಡ್ಡ ಉದ್ಯಮಿ, ರಾಜಕಾರಣಿಗಳಾಗಬಹುದು. ದೇಶದ ಸಂವಿಧಾನದಲ್ಲಿ ಸಮಾನತೆ, ಸ್ವಾಂತಂತ್ರ್ಯ, ಸಮಾನತೆ, ಭ್ರಾತೃತ್ವ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬಾನಿಗೂ ಒಂದೇ ಮತ, ಅತ್ಯಂತ ಸಾಮಾನ್ಯ ವ್ಯಕ್ತಿಗೂ ಒಂದೇ ಮತ. ಪ್ರತಿಯೊಬ್ಬರಿಗೂ ಸಮಾನ ಸಂಪನ್ಮೂಲಗಳು ಸಿಕ್ಕರೆ ಶ್ರೀಮಂತರಾಗಬಹುದು. ಆದರೆ ಸಿಗಬೇಕಲ್ಲವೇ ಎಂದರು.

ಬನ್ನಿಕೋಡು ಗ್ರಾಪಂ ಅಧ್ಯಕ್ಷ ಬಸನಗೌಡ, ಎಸ್‌ಡಿಎಂಸಿ ಅಧ್ಯಕ್ಷ ವಸಂತ ರಾವ್, ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಟಿ.ಸಿದ್ದೇಶ, ಮುಖ್ಯೋಪಾಧ್ಯಾಯರಾದ ವಿಶ್ವಭಾರತಿ, ಶಿಕ್ಷಕರಾದ ಬಿ.ಎಸ್.ಜ್ಯೋತಿ, ಚಂದ್ರಶೇಖರ, ಗ್ರಾಮದ ಹಿರಿಯ, ಕಿರಿಯ ಮುಖಂಡರು, ಮಕ್ಕಳು, ಪಾಲಕರು ಇದ್ದರು.

- - -

(ಟಾಪ್‌ ಕೋಟ್‌)

ವಿದ್ಯಾರ್ಥಿಗಳು ಈಗಿನಿಂದಲೇ ದೊಡ್ಡ ಕನಸು ಕಾಣಿ. ಹಗಲು- ರಾತ್ರಿ ಕಷ್ಟಪಟ್ಟು ಓದಬೇಕು. ಪಠ್ಯಪುಸ್ತಕದ ಆಚೆಗಿನ ಪುಸ್ತಕಗಳನ್ನೂ ಓದಿ. ಗ್ರಂಥಾಲಯದ ಪ್ರತಿಯೊಂದು ಪುಸ್ತಕ ಓದುತ್ತೇನೆಂದು ನಿರ್ಧರಿಸಿ. ಎಷ್ಟೇ ಕಷ್ಟವಿದ್ದರೂ ಜ್ಞಾನ ಸಿಕ್ಕರೆ ಅವಕಾಶಗಳು ಅರಸಿ ಬರುತ್ತವೆ. ಬಡತನದಿಂದ ಬೆಳೆದ ನಾನು ಇಂದು ಐಎಎಸ್ ಕೋಚಿಂಗ್ ಸೆಂಟರ್ ತೆರೆಯಲು ಕಾರಣವಾಗಿದ್ದೇ ಪುಸ್ತಕ ಜ್ಞಾನ, ಆಕರ್ಷಕ ವ್ಯಕ್ತಿತ್ವ, ಉತ್ತಮ ಗುಣಗಳು.

- ಜಿ.ಬಿ. ವಿನಯಕುಮಾರ, ಸಂಸ್ಥಾಪಕ ನಿರ್ದೇಶಕ, ಇನ್ ಸೈಟ್ಸ್ ಐಎಎಸ್ ಸಂಸ್ಥೆ.

- - -

-13ಕೆಡಿವಿಜಿ3.ಜೆಪಿಜಿ: ಹೊನ್ನಾಳಿ ತಾಲೂಕಿನ ಬನ್ನಿಕೋಡು ಸರ್ಕಾರಿ ಶಾಲೆಯಲ್ಲಿ ಬುಧವಾರ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ನೂತನ ಧ್ವಜಸ್ತಂಭ ಉದ್ಘಾಟಿಸಿದರು.