ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಸುವರ್ಣ ಎಂಟರ್ ಪ್ರೈ ಸಂಸ್ಥೆಗಳ ವತಿಯಿಂದ ಬ್ರಹ್ಮಾವರ ಮಿನಿ ವಿಧಾನಸೌಧದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು. ಒಂದು ಗಿಡ ತಾಯಿಯ ಹೆಸರಿಗೆ - ಭೂಮಿಗೆ ಒಂದು ಅಮೂಲ್ಯ ಕೊಡುಗೆ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬ್ರಹ್ಮಾವರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಸುವರ್ಣ ಎಂಟರ್ ಪ್ರೈ ಸಂಸ್ಥೆಗಳ ವತಿಯಿಂದ ಬ್ರಹ್ಮಾವರ ಮಿನಿ ವಿಧಾನಸೌಧದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು. ಒಂದು ಗಿಡ ತಾಯಿಯ ಹೆಸರಿಗೆ - ಭೂಮಿಗೆ ಒಂದು ಅಮೂಲ್ಯ ಕೊಡುಗೆ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಅನುಷಾ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರಿಸರ ಸಂರಕ್ಷಣೆ ಮತ್ತು ವೃಕ್ಷಾರೋಪಣೆಯ ಮಹತ್ವದ ಕುರಿತು ಮಾತನಾಡಿದರು.

ಬ್ರಹ್ಮಾವರ ತಹಸೀಲ್ದಾರ್ ಅಶೋಕ್ ಎನ್. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಕಾರ್ಯದರ್ಶಿ ಮಿಲ್ಟನ್ ಒಲಿವೇರಾ, ಘಟಕ ನಿರ್ದೇಶಕ ಸುಂದರ್ ಪೂಜಾರಿ, ಕಾರ್ಯಕ್ರಮ ಸಂಯೋಜಕಕಾದ ಮಧುಸೂದನ್ ಹೇರೂರು ಹಾಗೂ ಹರ್ಷ ಕುಮಾರ್, ಉಪತಹಸೀಲ್ದಾರ್ ವಸಂತ ಕುಮಾರ್, ಕಂದಾಯ ಅಧಿಕಾರಿ ಸಂತೋಷ್, ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.