ಸಾರಾಂಶ
ಬಾಲಂಬಿಯಲ್ಲಿ ವಿವಿಧ ತರದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿವಸ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚೆಂಬು ಬಿಜೆಪಿ ಶಕ್ತಿಕೇಂದ್ರ ದಿಂದ ಚೆಂಬು ಬಿಜೆಪಿ ರೈತಮೋರ್ಚಾ ಸಹಯೋಗದೊಂದಿಗೆ ಬಾಲಂಬಿಯಲ್ಲಿ ವಿವಿಧ ತರದ ಗಿಡಗಳನ್ನು ನೆಡುವ ಮೂಲಕ ಗುರುವಾರ ಪರಿಸರ ದಿವಸ ಆಚರಿಸಲಾಯಿತು.ಈ ಸಂದರ್ಭ ಶಕ್ತಿಕೇಂದ್ರ ಅದ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಗ್ರಾ. ಪಂ. ಅಧ್ಯಕ್ಷ ತೀರ್ಥಾರಾಮ ಪೂಜಾರಿಗದ್ದೆ , ರೈತಮೋರ್ಚಾ ಅದ್ಯಕ್ಷ ಶ್ರೀನಿವಾಸ್ ನಿಡಿಂಜಿ, ಗ್ರಾ ಪಂ ಸದಸ್ಯರಾದ ರಮೇಶ್ ಹುಲ್ಲುಬೆಂಕಿ, ವಸಂತ ಊರುಬೈಲು, ಸೊಸೈಟಿ ನಿರ್ದೇಶಕರಾದ ದಿನೇಶ್ ಸಣ್ಣಮನೆ, ರಾಮಮೂರ್ತಿ ಉಂಬಳೆ , ವಸಂತ ಕುದ್ರೆಪಾಯ, ಮಾಜಿ ಉಪಾಧ್ಯಕ್ಷ ವಾಸುದೇವ ನಿಡಿಂಜಿ ಕಾರ್ಯಕ್ರಮದ ಉಸ್ತುವಾರಿ ಅನಂತ್ ಊರುಬೈಲು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.