ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದು ನಗರದ ಬಸವ ಬಳಗದ ಅಧ್ಯಕ್ಷ ಚಂದ್ರು ಗೊಂದಿ ಹೇಳಿದರು.ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ನಡೆದ ಬಸವಣ್ಣನವರ 891ನೇ ಜಯಂತಿಯನ್ನು ಬಸವಣ್ಣನವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣ ವಿಶ್ವಕ್ಕೆ ಮೊದಲ ಸಂಸತ್ ಕೊಟ್ಟ ಮಹಾಪುರುಷ. 12ನೇ ಶತಮಾನದಲ್ಲಿ ಭಕ್ತಿ ಚಳವಳಿಯ ಮೂಲಕ ಸಮಾಜ ಸುಧಾರಣೆಗೆ, ಕಾವ್ಯ ಮತ್ತು ತತ್ವಶಾಸ್ತ್ರದಿಂದ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಶ್ರಮಿಸಿದರು. ಭವಿಷ್ಯದ ಪೀಳಿಗೆಗೆ ಪ್ರಾಯೋಗಿಕ ಮತ್ತು ನೈತಿಕ ಮಾರ್ಗಗಳನ್ನು ಬಿಟ್ಟುಹೋದ ಮಹಾ ತತ್ವಜ್ಞಾನಿ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶೇಖರ ಅಂಗಡಿ ಮಾತನಾಡಿ, ಬಸವಣ್ಣ ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೊರಹೊಮ್ಮಿದವರು. ಕಾವ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಜನರಿಗೆ ಅಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು ಎಂದು ಹೇಳಿದರು.ಹಿರಿಯರಾದ ಶ್ರೀಶೈಲಪ್ಪ ಉಳ್ಳೇಗಡ್ಡಿ ಮಾತನಾಡಿ, ಬಸವಣ್ಣನವರು ಮಾನವ ಕಲ್ಯಾಣ ಬಯಸುವ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ದೇಶದ ಅತ್ಯುತ್ತಮ ಸಮಾಜ ಸೇವಕರಲ್ಲಿ ಮೊದಲಿಗರು ಬಸವಣ್ಣನವರು ಎಂದರು.
ಭವ್ಯ ಮೆರವಣಿಗೆ : ನಗರದ ಚನ್ನಗಿರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಸವಣ್ಣನವರ, ಮಹಾಲಿಂಗೇಶ್ವರ,ಮಡಿವಾಳ ಮಾಚಿದೇವ, ಹರಳಯ್ಯ,ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು, ಸಕಲ ಮಂಗಳವಾದ್ಯಗಳೊಂದಿಗೆ ಸಾಗಿದ ಮೆರವಣಿಗೆ ನಡುಚೌಕಿ, ಡಬಲ್ ರಸ್ತೆ ಮೂಲಕ ಹಾದು ಬಸವ ವೃತ್ತ ತಲುಪಿತು.ಮುಖಂಡರಾದ ಮಲ್ಲಪ್ಪ ಕುಳಲಿ, ಬಸವರಾಜ ಬಟಕುರ್ಕಿ, ಶ್ರೀಶೈಲ ನುಚ್ಚಿ, ಮಲ್ಲು ದಲಾಲ, ಮುತ್ತಪ್ಪ ದಲಾಲ, ಬಸವರಾಜ ಪಶ್ಚಾಪುರ, ಅರ್ಜುನ ಮಡಿವಾಳ, ರಮೇಶ ಮಡಿವಾಳ, ಶ್ರೀಶೈಲಪ್ಪ ವಜ್ಜರಮಟ್ಟಿ, ಮುತ್ತಪ್ಪ ದಲಾಲ, ಮಲ್ಲಪ್ಪ ಕುಳಲಿ, ನಾಗಲಿಂಗ ಬಡಿಗೇರ, ಶಿವು ಹೂಗಾರ, ಬಸವರಾಜ ಮೇಟಿ, ಗೊಲೇಶ ಅಮ್ಮಣಗಿ ಸೇರಿ ಹಲವರು ಇದ್ದರು.