ವಿಶ್ವ ಆರೋಗ್ಯ ದಿನ: ಹಿರಿಯರು, ಕಿರಿಯರಿಂದ ಸೈಕಲ್ ರಾಲಿ

| Published : Apr 08 2024, 01:06 AM IST

ವಿಶ್ವ ಆರೋಗ್ಯ ದಿನ: ಹಿರಿಯರು, ಕಿರಿಯರಿಂದ ಸೈಕಲ್ ರಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಸಹಿತ ಹಿರಿಯರು ಮತ್ತು ಕಿರಿಯರು ಒಟ್ಟು 54 ಮಂದಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಿಶ್ವ ಆರೋಗ್ಯ ದಿನದ ಅಂಗವಾಗಿ ಭಾನುವಾರ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಮತ್ತು ವಿವಿಧ ಕ್ಲಬ್‌ಗಳ ವತಿಯಿಂದ ಆಳ್ವಾಸ್ ಮತ್ತು ಸ್ಟಾರ್ ರೈಡರ್ಸ್ ಸಹಕಾರದೊಂದಿಗೆ ‘ಸೈಕ್ಲಿಂಗ್ ಫಾರ್ ಗ್ರೀನ್ ಆ್ಯಂಡ್‌ ಹೆಲ್ತಿ ಮೂಡುಬಿದಿರೆ’ಎಂಬ ಧ್ಯೇಯ ವಾಕ್ಯದೊಂದಿಗೆ ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಸಹಿತ ಹಿರಿಯರು ಮತ್ತು ಕಿರಿಯರು ಒಟ್ಟು 54 ಮಂದಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ರಮೇಶ್ ಮತ್ತು ಆಲಂಗಾರು ಲಯನ್ಸ್ಮಾ ಕ್ಲಬ್‌ ಮಾಜಿ ಅಧ್ಯಕ್ಷ ಹೆರಾಲ್ಡ್ ತೌವ್ರೋ ಅವರು ಹಸಿರು ನಿಶಾನೆ‌ ತೊರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಡಾ. ರಮೇಶ್ ಅವರು ದೇವರು ನಮಗೆ ಉತ್ತಮವಾದ ಬದುಕನ್ನು ನೀಡಿದ್ದಾರೆ. ಉತ್ತಮವಾದ ಆರೋಗ್ಯವಿದ್ದರೆ ಅದುವೇ ಆರೋಗ್ಯ ಭಾಗ್ಯ. ನಮ್ಮ ಆರೋಗ್ಯವನ್ನು ಸದೃಢಗೊಳಿಸಲು ಸೈಕ್ಲಿಂಗ್ ಮಾಡುವುದರಿಂದ ಸಾಧ್ಯವಿದೆ ಎಂದರು.

ಹಿರಿಯರಾದ ನಿಧಿ ಅಯ್ಯಂಗಾರ್ ಅವರು ಅನುಭವವನ್ನು ಹಂಚಿಕೊಳ್ಳುತ್ತಾ ನಮ್ಮ ದೇಹ ಚಟುವಟಿಕೆಯಿಂದ ಇರಲು ಸೈಕ್ಲಿಂಗ್ ಸಹಕಾರಿಯಾಗುತ್ತದೆ. ನನ್ನಲ್ಲಿ ಈ ಹಿಂದೆ ಆರೋಗ್ಯದ ಸಮಸ್ಯೆ ಇತ್ತು ನಾನು ಸೈಕ್ಲಿಂಗ್ ಮಾಡಲು ಆರಂಭಿಸಿದಂದಿನಿಂದ ಹಲವು ಸಮಸ್ಯೆಗಳು ನಿವಾರಣೆಯಾಗಿದೆ. ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೈಕ್ಲಿಂಗ್ ಉತ್ತಮ ವ್ಯಾಯಾಮ. ಹಿರಿಯರೂ ತಮ್ಮನ್ನು ಇದರಲ್ಲಿ ತೊಡಗಿಸಿಕೊಳ್ಳಿ ಕೀಲು ನೋವಿನ ಸಮಸ್ಯೆ, ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು. ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಫರಾಝ್ ಬೆದ್ರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಅಧ್ಯಕ್ಷ ರೋನಿ ಫರ್ನಾಂಡಿಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಂದ್ರ ಕುಮಾರ್, ಲಿಯೋ ಕ್ಲಬ್ ಅಧ್ಯಕ್ಷ ಸ್ವಯಂ, ಸ್ಟಾರ್ ರೈಡರ್ಸ್ ನ ರೀವನ್ ಸಿಕ್ವೇರಾ ಉಪಸ್ಥಿತರಿದ್ದರು. ಸುಮಾರು 5 ಕಿ.ಮೀ ದೂರ ಕ್ರಮಿಸಿದ ಈ ರ್ಯಾಲಿಯು ಬಡಗ ಬಸ್ತಿಯ ಎದುರು ಬಳಿಯಿಂದ ಆಲಂಗಾರು ಜಂಕ್ಷನ್ ಮುಖಾಂತರ ರಿಂಗ್ ರೋಡ್, ಸ್ವರಾಜ್ಯ ಮೈದಾನ, ನಿಶ್ಮಿತಾ ಟವರ್ಸ್ ಮುಖ್ಯರಸ್ತೆಯಿಂದ ಹಾದು ಜೈನ್ ಹೈಸ್ಕೂಲ್ ಮುಖಾಂತರ ಸಾಗಿ ಬಂದು ಫಾರ್ಚುನ್ ಹೈವೆ ಕಟ್ಟಡದ ಹತ್ತಿರ ಅಂತ್ಯಗೊಂಡಿತು. ಲಕ್ಕಿ ಡ್ರಾ ಮೂಲಕ ಗೆದ್ದ ಒಂದು ಸೈಕಲನ್ನು ವಿತರಿಸಲಾಯಿತು. ರ್ಯಾಲಿಯಲ್ಲಿ ಭಾಗವಹಿಸಿದ್ದ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.