ನ. 19ರಿಂದ 25 ರ ವರೆಗೆ ವಿಶ್ವ ಪರಂಪರಾ ಸಪ್ತಾಹ ನಡೆದು 25ನೇ ಮಂಗಳವಾರ ಸಮಾರೋಪ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಲಾ ಶಾಸನ ಶಾಖೆ ಹಾಗು ಉತ್ಖನನ ಶಾಖೆ ಮೈಸೂರು- ಭಾರತ ಸರ್ಕಾರದ ಸಹಯೋಗದಲ್ಲಿ ಮಡಿಕೇರಿಯ ಕೋಟೆಯ ಸಭಾಂಗಣದಲ್ಲಿ ನ. 19ರಿಂದ 25 ರವರೆಗೆ ವಿಶ್ವ ಪರಂಪರಾ ಸಪ್ತಾಹ 2025 ನಡೆದು ನ. 25 ನೇ ಮಂಗಳವಾರ ಸಮಾರೋಪ ಸಮಾರಂಭ ನೆರವೇರಿತು.

ಪುರಾತತ್ವ ಇಲಾಖೆಯ ಶಿಲ್ಪಕಲೆಗಳ ಛಾಯಚಿತ್ರ, ಕೊಡಗಿನ ಪರಂಪರೆಯ ಛಾಯಾಚಿತ್ರ, ಪುರಾತನ ವಸ್ತುಗಳ ಪ್ರದರ್ಶನ ನಡೆದವು. ವಂದೇ ಮಾತರಂ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯ ಕುರಿತು ರಸಪ್ರಶ್ನೆ ಸ್ಪರ್ಧೆ, ಶಾಲಾ‌ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕೊಡಗಿನ ಪ್ರಾದೇಶಿಕ ಇತಿಹಾಸ ಕುರಿತು ವಿಶೇಷ ಉಪನ್ಯಾಸ, ಕೊಡಗಿನ ಜಾನಪದ ಗೀತೆಯ ಕುರಿತು ವಿಶೇಷ ಕಾರ್ಯಕ್ರಮ, ವಂದೇ ಮಾತರಂ ಸಾಮೂಹಿಕ ಗಾಯನ, ಪಾರಂಪರಿಕ ನಡಿಗೆ ಹಾಗೂ ಇತರ ಕಾರ್ಯಕ್ರಮಗಳು ನಡೆದವು.

ನ.25 ರಂದು ಕೋಟೆ ಸಭಾಂಗಣದಲ್ಲಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುರಾತತ್ವ ಇಲಾಖೆಯ ನಿವೃತ್ತ ಉಪ ಮುಖ್ಯ ಪುರಾತತ್ವ ತಜ್ಞರಾದ ಡಾ.‌ನಾಯಕಂಡ ಸಿ ಪ್ರಕಾಶ್ ಭಾಗವಹಿಸಿ ಮಾತನಾಡಿದರು. ಪುರಾತತ್ವ ಇಲಾಖೆಯ ಉಪ ಮುಖ್ಯ ಪುರಾತತ್ವ ಅಭಿಯಂತರರಾದ ಗಡಮ್ ಶ್ರೀನಿವಾಸ್, ಸುನಿಲ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಪುರಾತನ ನಾಣ್ಯ ಸಂಗ್ರಹಕ ಕೇಶವ ಮೂರ್ತಿ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ‌ ಅಂಗವಾಗಿ ಅತಿಥಿಗಳಿಗೆ ಸನ್ಮಾನಿಸಿ‌ ಗೌರವಿಸಲಾಯಿತು.