ಸಾರಾಂಶ
ಕವಿತಾಳ ಪಟ್ಟಣದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬೈಕ್ ರ್‍ಯಾಲಿ ನಡೆಸಲಾಯಿತು.
ಕವಿತಾಳ: ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಾರ್ಮಿಕ ಸಂಘಟನೆ ಮುಖಂಡರು ಬೈಕ್ ರ್‍ಯಾಲಿ ನಡೆಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ಮುಖಂಡ ಎಂ.ಡಿ. ಮೈಹಿಬೂಬ ಸಾಬ್ ಮಾತನಾಡಿ, ಕಾರ್ಮಿಕ ಮತ್ತು ರೈತ ವಿರೋಧಿ ಕಾರ್ಪೂರೆಟ್ ಪ್ಯಾಸಿಸ್ಟ್ ವಿರುದ್ಧ ಐಕ್ಯತೆಯಿಂದ ಹೋರಾಡಬೇಕಿದೆ. ಜಾಗತಿಕರಣ ಮತ್ತು ಕೋಮುವಾದಿ ಪ್ಯಾಸಿಸ್ಟ್ ಶಕ್ತಿಯನ್ನು ತೊಲಗಿಸಬೇಕು.ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆದಿದೆ ಅಂದ್ರೆ ಅದು ಕಾರ್ಮಿಕರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ. ಆದರೆ ದುರಾದೃಷ್ಟ ಕಾರ್ಮಿಕರಿಗೆ ದುಡಿಮೆಗೆ ತಕ್ಕಂತೆ ಹಣ ಸಿಗುತ್ತಿಲ್ಲ ಎಂದುರು.
ರಾಜ್ಯಾಧ್ಯಕ್ಷ ಬಸವಲಿಂಗಪ್ಪ ಹಿರೇನಗನೂರು ಮಾತನಾಡಿ, ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಡಿದಾಗ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಮಿಕ ಮುಖಂಡ ಡಿ. ಎಚ್. ಪೂಜಾರಿ ಮತ್ತು ಶೇಖರಪ್ಪ ಕೋಟೆ ಮಾತನಾಡಿದರು, ರಾಜ್ಯ ಉಪಾಧ್ಯಕ್ಷ ರಮೇಶ ಇರಬಿಗೇರಿ, ವಿ. ಮುದಕಪ್ಪ ನಾಯಕ, ಆನಂದ ಬೋವಿ, ಬಸವರಾಜ ನಾಯಕ ಚಿಂಚರಕಿ, ಮೌನೇಶ ಕಲಂಗೇರ, ಮೌನೇಶ ಬುಳ್ಳಪುರ, ಮೌನೇಶ ನರಬಂಡಿ, ಫಕೀರಪ್ಪ ಸೆಂಟ್ರಿಂಗ್, ರುಕ್ಮುದ್ದೀನ್ ಮೇಸ್ತ್ರಿ, ಚಂದ್ರಶೇಖರ ಬೋವಿ ಸಾನಬಾಳ, ಅಮರೇಶ ಬುಳ್ಳಪುರ, ಹುಲಗಪ್ಪ ಮ್ಯಾಗಳಮನಿ, ಹನುಮಂತ ಬುಳ್ಳಪುರ, ಹನುಮಂತ ಕೆಳಗೇರಿ, ಮಲ್ಲಪ್ಪ ತಪ್ಪಲಾದೊಡ್ಡಿ, ನಾಗರಾಜ ಪೂಜಾರಿ ಕವಿತಾಳ ಇನ್ನಿತರರಿದ್ದರು