ಮಾನ್ವಿಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನ

| Published : Jun 01 2024, 12:46 AM IST

ಸಾರಾಂಶ

ಮಾನ್ವಿ ಪಟ್ಟಣದ ನಾಯಕವಾಡಿ ಸಮುದಾಯ ಭವನದಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಾನ್ವಿ: ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನ ಅಂಗವಾಗಿ ಪಟ್ಟಣದ ನಾಯಕವಾಡಿ ಸಮುದಾಯ ಭವನದಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನ ನಿಮಿತ್ತ ಹದಿಹರೆಯದವರಿಗೆ ಋತುಚಕ್ರದ ಮತ್ತು ವೈಯುಕ್ತಿಕ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ರಾಷ್ಟ್ರೀಯ ಬಾಲಸ್ವಾಸ್ತ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ವೀಣಾ ಪಾಟೀಲ್ ಉದ್ಘಾಟಿಸಿ, ಮಾತನಾಡಿ, ಹದಿ ಹರೆಯದ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕೆಲವು ಬಾರಿ ರಕ್ತಹೀನತೆ, ಗರ್ಭಕೋಶದಲ್ಲಿನ ತೊಂದರೆಯಿಂದಾಗಿ ಅನಿಯಮಿತ ಋತುಚಕ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿನ ಸ್ತ್ರೀರೋಗ ತಜ್ಞರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಋತುಚಕ್ರ ಸಮಯದಲ್ಲಿ ತಪ್ಪದೇ ಸ್ಯಾನಿಟರಿ ಪ್ಯಾಡ್ ಹಾಗೂ ಸ್ಯಾನಿಟರಿ ಕಪ್ಪ ಉಪಯೋಗಿಸುವುದರಿಂದ ಹೆಚ್ಚಾಗಿ ಮಹಿಳೆಯರು ಮತ್ತು ಹುಡುಗಿಯರಲ್ಲಿ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಸೋಂಕಿನ ಸಮಸ್ಯೆ ಬರದಂತೆ ತಡೆಯಬಹುದು ಎಂದು ತಿಳಿಸಿದರು

ಆರೋಗ್ಯ ಇಲಾಖೆ ಆಪ್ತ ಸಮಾಲೋಚಕಿ ಬಸಮ್ಮ ಮಾತನಾಡಿದರು. ನಿವೃತ್ತ. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶಶಿಕಲಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ,ಅಂಗನವಾಡಿ ಕಾರ್ಯಕರ್ತೆಯರಾದ ದ್ರಾಕ್ಷಾಯಿಣಿ, ಖಾಜ ಬೇಗಂ, ಆಶಾ ಕಾರ್ಯಕರ್ತರಾದ ಚಂದ್ರಕಲಾ, ಅಲಿಮಾ ಸೇರಿದಂತೆ ಮಹಿಳೆಯರು , ಯುವತಿಯರು ಇದ್ದರು.